ನಟಿ ಅದಿತಿ ಪ್ರಭುದೇವ ಮಗಳ 6 ತಿಂಗಳ ಬರ್ತ್ ಡೇ ಸಂಭ್ರಮ ಹೀಗಿತ್ತು….
ಸ್ಯಾಂಡಲ್ ವುಡ್ ನಟಿ ಅದಿತಿ ಪ್ರಭುದೇವ ಮಗಳಿಗೆ ಆರು ತಿಂಗಳು ತುಂಬಿದ್ದು, ಅರ್ಧ ವರ್ಷದ ಸಂಭ್ರಮವನ್ನು ನಟಿ ಕುಟುಂಬ ಸಮೇತ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ.

ಸ್ಯಾಂಡಲ್ ವುಡ್ ನಟಿ ಅದಿತಿ ಪ್ರಭುದೇವ (Adithi Prabhudeva) ತಾಯಿಯಾಗಿ ಆರು ತಿಂಗಳಾಗಿದೆ.ಇತ್ತೀಚೆಗಷ್ಟೇ ನಟಿ ಮಗಳ ಮುಖವನ್ನು ಮತ್ತು ಹೆಸರನ್ನು ರಿವೀಲ್ ಮಾಡಿದ್ದರು. ಇದೀಗ ಮಗಳ ಆರು ತಿಂಗಳ ಬರ್ತ್ ಡೇ ಸಂಭ್ರಮದ ವಿಡಿಯೋವನ್ನು ಸಹ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
ಅದಿತಿ ಪ್ರಭುದೇವ ಏಪ್ರಿಲ್ 4ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಇದೀಗ ಮಗಳಿಗೆ 6 ತಿಂಗಳು ತುಂಬಿದ ಹಿನ್ನೆಲೆ ಮಗಳ ಫೋಟೋ ಹಾಗೂ ಹೆಸರನ್ನು ಅದ್ಧೂರಿಯಾಗಿಯೇ ರಿವೀಲ್ ಮಾಡಿದ್ದರು. ಮೊದಲಿಗೆ ಮಗಳ ಫೋಟೊಗಳನ್ನು ಮಾತ್ರ ಶೇರ್ ಮಾಡಿದ್ದ ನಟಿ ಇದೀಗ ಬರ್ತ್ ಡೇಯಲ್ಲಿ ಮಿಂಚಿದ ಕುಟುಂಬದ ವಿಡಿಯೋವನ್ನು ಶೇರ್ ಮಾಡಿದ್ದಾರೆ.
ಅದಿತಿ ಪ್ರಭುದೇವ ಹಾಗೂ ಪತಿ ಯಶಸ್ ಪಾಟ್ಲಾ ಮಗಳಿಗೆ ‘ನೇಸರ’ ಎಂದು ಹೆಸರನ್ನಿಟ್ಟಿದ್ದಾರೆ. ನಮ್ಮಮ್ಮ ಎಂದು ಕ್ಯಾಪ್ಶನ್ ಹಾಕಿ ವಿಡಿಯೋ ಶೇರ್ ಮಾಡಿದ್ದಾರೆ ಅದಿತಿ. ಮಗುವನ್ನು ಎತ್ತಿ ಮುದ್ದಾಡುವ, ಎದೆಗಪ್ಪಿಕೊಳ್ಳುವ, ಮುದ್ದಾಗಿ ಆಡುವ ಎರಡೂ ಫ್ಯಾಮಿಲಿಯವರು ಜೊತೆಯಾಗಿ ನಿಂತು ಕೇಕ್ ಕತ್ತರಿಸಿ ಸಂಭ್ರಮಿಸುವ ವಿಡಿಯೋ ತುಣುಕುಗಳನ್ನು ಸೋಶಿಯಲ್ ಮೀಡಿಯಾದಲ್ಲಿ ನಟಿ ಹಂಚಿಕೊಂಡಿದ್ದಾರೆ.
ಅದಿತಿ ಹಂಚಿಕೊಂಡ ವಿಡೀಯೋಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದ್ದು, ಮುದ್ದು ಪಾಪಮ್ಮ ಎಂದು ಅನುಪಮಾ ಗೌಡ ಕರೆದಿದ್ದಾರೆ. ಹೆಣ್ಣು ಮಗು ಹುಟ್ಟೋಕು ಅದೃಷ್ಟ ಬೇಕು ಅಂತಾನೂ ಜನ ಹೇಳಿದ್ದಾರೆ. ಇನ್ನೂ ಕೆಲವರು ಮಗು ಅಪ್ಪನ ಥರ ಇದೆ ಅಂದ್ರೆ, ಹಲವರು ಮುದ್ದಾದ ಫ್ಯಾಮಿಲಿ ಎಂದು ಕಾಮೆಂಟ್ ಮಾಡಿದ್ದಾರೆ.
ಇದಕ್ಕೂ ಮುನ್ನ ಮಗುವಿನ ಫೋಟೊವನ್ನು ಮೊದಲ ಬಾರಿ ರಿವೀಲ್ ಮಾಡಿದ ಅದಿತಿ ನಮ್ಮ ಬಾಳ "ನೇಸರ" , ಮುದ್ದು ಮಗಳೇ ,ಇಂದಿಗೆ ನೀನು ನನ್ನ ಮಡಿಲನ್ನು ತುಂಬಿ ಆರು ತಿಂಗಳಾಯಿತು .ನೀ ಬಂದಮೇಲೆ ನಮ್ಮ ಬದುಕೆ ಬದಲಾಯಿತು ,ನಮ್ಮ ಜೀವನ ಸುಂದರವಾಯಿತು, ಸಂಪೂರ್ಣವಾಯಿತು. ಹುಟ್ಟು ಹಬ್ಬದ ಶುಭಾಶಯಗಳು ಮಗಳೇ ನೇಸರ ಎಂದು ಮುದ್ದಾಗಿ ಬರೆದುಕೊಂಡಿದ್ದರು.
ಅಪ್ಪಟ ಕನ್ನಡತಿ ಎಂದೆ ಕರೆಯಲ್ಪಡುವ ನಟಿ ಅದಿತಿ ಪ್ರಭುದೇವ ಬೆಂಗಳೂರಿನಲ್ಲಿ ಉದ್ಯಮಿಯಾಗಿರುವ ಯಶಸ್ ಪಾಟ್ಲಾ ಜೊತೆ 2022ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಯಾಗಿ ಎರಡು ವರ್ಷದ ಬಳಿಕ ಅಂದ್ರೆ ಇದೇ ವರ್ಷ ಏಪ್ರಿಲ್ ತಿಂಗಳಲ್ಲಿ ಮಗಳಿಗೆ ಜನ್ಮ ನೀಡಿದ್ದರು.
‘ಗುಂಡ್ಯಾನ ಹೆಂಡತಿ’ ಎಂಬ ಸೀರಿಯಲ್ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟ ಅದಿತಿ ಪ್ರಭುದೇವ ನಾಗಕನ್ನಿಕೆ ಸಿರೀಯಲ್ ನಲ್ಲಿ ಮಿಂಚಿದರು. ಬಳಿಕ ‘ಧೈರ್ಯಂ’, ‘ಬಜಾರ್’, ‘ಸಿಂಗ್’, ‘ಬ್ರಹ್ಮಚಾರಿ’, ‘ಒಂಬತ್ತನೆ ದಿಕ್ಕು’, ‘ತೋತಾಪುರಿ’, ‘ತ್ರಿಬಲ್ ರೈಡಿಂಗ್’ ಸಿನಿಮಾಗಳಲ್ಲಿ ನಟಿಸಿದರು. ಪ್ರೆಗ್ನೆನ್ಸಿ ಬಳಿಕ ನಟನೆಯಿಂದ ದೂರ ಇದ್ದ ಅದಿತಿ, ಮಗುವಾಗಿ 3 ತಿಂಗಳ ಬಳಿಕ ರಾಜಾ ರಾಣಿ ರೀಲೋಡೆಡ್ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.