Asianet Suvarna News Asianet Suvarna News

ಆ ಮತ್ತು ಳ ಪದದ ಉಚ್ಚಾರಣೆ ಬಾರದ ಮೇಕಪ್‌ಮ್ಯಾನ್‌ ಕಾಲೆಳೆದ 'ರಕ್ತಕಣ್ಣೀರು' ನಟಿ; ಆಂಟಿ ತುಂಬಾ ತುಂಟಿ ಎಂದ ನೆಟ್ಟಿಗರು!

ಆಂಟಿ ಎಂದು ಕಾಲೆಳೆದ ನೆಟ್ಟಿಗರಿಗೆ ಉತ್ತರ ಕೊಟ್ಟ ನಟಿ ಅಭಿರಾಮಿ.  ನೀವು ಕಾಲೆಳೆಯುವುದು ಎಷ್ಟು ಸರಿ ಎಂದ ನೆಟ್ಟಿಗರು...
 

Actress Abhirami teases makeup man and hits back at netizens calling her aunty vcs
Author
First Published Aug 17, 2024, 3:21 PM IST | Last Updated Aug 17, 2024, 5:22 PM IST

ಲಾಲಿಹಾಡು, ರಕ್ತ ಕಣ್ಣೀರು, ಶ್ರೀರಾಮ್, ಚೌಕ, ದಶರಥ ಹಾಗೂ ಕೋಟಿಗೊಬ್ಬ 3 ಸಿನಿಮಾ ಸೇರಿಂದತೆ ಹಲವ ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ಮಲಯಾಳಂ ನಟಿ ಅಭಿರಾಮಿ ಬಿಡುವಿನ ಸಮಯದಲ್ಲಿ ಟ್ರೋಲಿಗರಿಗೆ ಉತ್ತರಿಸುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ನಟಿ ಆಗಾಗ ತಮ್ಮ ಜೀವನದ ಪ್ರತಿಯೊಂದು ಮೆಮೋರಬಲ್ ಕ್ಷಣಗಳನ್ನು ಅಪ್ಲೋಡ್ ಮಾಡುತ್ತಾರೆ. ಹಾಗೆಯೇ, ತಮ್ಮ ಜೊತೆ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಮೇಕಪ್ ಮ್ಯಾನ್ ಬಗ್ಗೆ ಹಾಸ್ಯ ಮಾಡಿದ್ದಾರೆ. 

ನಟಿ ಅಭಿತಾಮಿ ಜೊತೆ ಸುಮಾರು 24 ವರ್ಷಗಳಿಂದ ಮೇಕಪ್ ಮ್ಯಾನ್‌ ಆಗಿ ಕೆಲಸ ಮಾಡುತ್ತಿರುವ ಪ್ರಸಾದ್ ಎನ್ನುವವರು ತಮಿಳಿನಲ್ಲಿ ಳ ಮತ್ತು ಅ ಪದದ ಉಚ್ಚಾರಣೆ ಸರಿಯಾಗಿ ಬರುವುದಿಲ್ಲ. ಅವರಿಗೆ ಉಚ್ಚಾರಣೆ ಹೇಳಿಕೊಡಲು ಅಭಿರಾಮಿ ಸಾಕಷ್ಟು ಪ್ರಯತ್ನ ಮಾಡಿದ್ದಾರೆ ಆದರೆ ಆಗಿಲ್ಲ.  ಮೇಕಪ್ ಮ್ಯಾನ್ ಪ್ರಸಾದ್ ಮಾತನಾಡುವ ಶೈಲಿಯನ್ನು ವ್ಯಂಗ್ಯಾ ಮಾಡಿದ ಅಭಿರಾಮಿ ವಿಡಿಯೋ ಅಪ್ಲೋಡ್ ಮಾಡಿದ್ದಾರೆ. ಈ ವಿಡಿಯೋಗೆ ಪಾಸಿಟಿವ್‌ಗಿಂತ ಹೆಚ್ಚಾಗಿ ನೆಗೆಟಿವ್ ಕಾಮೆಂಟ್‌ಗಳು ಬರುತ್ತಿದೆ. 

ದರ್ಶನ್ ಅಭಿಮಾನಿಗಳ ಟೀಕೆಗೆ ಖಡಕ್ ಉತ್ತರ ಕೊಟ್ಟ ದುನಿಯಾ ವಿಜಯ್; ನಿಜಕ್ಕೂ ಏನ್ ಆಯ್ತು?

ಈ ವಿಡಿಯೋದಲ್ಲಿ ಅಭಿರಾಮಿ ಪಕ್ಕಾ ಗೃಹಿಣಿ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸೀರೆ ಧರಿಸಿ ಸಿಂಪಲ್ ಮೇಕಪ್ ಮಾಡಿಸಿಕೊಂಡಿದ್ದಾರೆ. ಮೊಬೈಕ್ ಕ್ಯಾಮೆರಾದಲ್ಲಿ ನೀವು ಮಾತನಾಡುತ್ತಿದ್ದರೆ ನೋಡಲು ಸುಂದರವಾಗಿ ಕಾಣಿಸುತ್ತಿಲ್ಲ ಆಂಟಿ, ನೀವು ನಟನೆ ಬಿಟ್ಟೆ ಬಿಟ್ರಾ? ನಿಮಗೆ ಮೇಕಪ್ ಹಾಕಿಕೊಳ್ಳಲು ಗೊತ್ತಿಲ್ಲವೇ? ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ನಾನು ಯಾಕೆ ಆ ವ್ಯಕ್ತಿ ಕೆಲಸ ಕಿತ್ತುಕೊಳ್ಳಲಿ ಅವರ ಕೆಲಸಕ್ಕೆ ಕಲ್ಲು ಹಾಕಲಿ ಎಂದು ಅಭಿರಾಮಿ ಉತ್ತರ ಕೊಟ್ಟಿದ್ದಾರೆ. ಅಭಿರಾಮಿ ಉತ್ತರ ನೀಡಿ ಎಲ್ಲರೂ ಶಾಕ್ ಆಗಿದ್ದಾರೆ. 

ಅಯೋಧ್ಯೆ ಶ್ರೀರಾಮ ಪ್ರತಿಷ್ಠಾಪನೆ ದಿನ ಹುಟ್ಟಿದ ಮಗಳ ಫೋಟೋವನ್ನು ವರಮಹಾಲಕ್ಷ್ಮಿ ಹಬ್ಬದಂದು ರಿವೀಲ್ ಮಾಡಿದ

ಮೇಡಂ ನಿಮ್ಮ ಇನ್‌ಸ್ಟಾಗ್ರಾಂ ಖಾತೆಯನ್ನು ಯಾರು ಹ್ಯಾಂಡಲ್ ಮಾಡುವುದು? ಪ್ರತಿಯೊಬ್ಬರಿಗೂ ನೀವೇ ಉತ್ತರ ಕೊಡುತ್ತಿದ್ದೀರಾ ಅಥವಾ ನಿಮ್ಮ ಟೀಂ ಹ್ಯಾಂಡಲ್ ಮಾಡುತ್ತದಾ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ. ಸಮಯ ಸಿಕ್ಕಾಗ ನಾನೇ ಉತ್ತರಿಸುತ್ತೇನೆ ಎಂದು ಅಭಿಮಾಮಿ ಹೇಳಿದ್ದಾರೆ. 

 

 
 
 
 
 
 
 
 
 
 
 
 
 
 
 

A post shared by Abhirami (@abhiramiact)

Latest Videos
Follow Us:
Download App:
  • android
  • ios