ಮಂಡ್ಯ (ಮಾ. 18): ಸಕ್ಕರೆ ನಾಡು ಮಂಡ್ಯ ಲೋಕಸಭಾ ಚುನಾವಣಾ ಕಣ ಹೈ ವೋಲ್ಟೇಜ್ ಕಣವಾಗಿದೆ. ಸುಮಲತಾ ಅಂಬರೀಶ್ ಮಂಡ್ಯದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಖಚಿತವಾಗಿದೆ.  ಮಂಡ್ಯ ಜನ, ಅಂಬಿ ಅಭಿಮಾನಿಗಳ ಒತ್ತಡಕ್ಕೆ ಮಣಿದು ಸ್ಪರ್ಧಿಸುವುದಾಗಿ ಹೇಳಿದ್ದಾರೆ. 

ಚಿರತೆಯನ್ನು ದತ್ತು ತೆಗೆದುಕೊಂಡ ಕಾಮಿಡಿ ಸ್ಟಾರ್ ಚಿಕ್ಕಣ್ಣ

ಚುನಾವಣೆ ಸ್ಪರ್ಧೆ ಬಗ್ಗೆ ನಿರ್ಧಾರ ತಿಳಿಸಲು ಬೆಂಗಳೂರಿನ ಖಾಸಗಿ ಹೊಟೇಲ್ ನಲ್ಲಿ ಸುಮಲತಾ ಸುದ್ಧಿಗೋಷ್ಟಿ ಕರೆದಿದ್ದರು.  ಸುಮಲತಾ ಪರ ಸ್ಯಾಂಡಲ್ ವುಡ್ ನಟರು ಸಾಥ್ ನೀಡಿದ್ದಾರೆ. ದರ್ಶನ್, ಯಶ್, ಜೈಜಗದೀಶ್, ದೊಡ್ಡಣ್ಣ ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿದ್ದಾರೆ. 

ಸುಮಲತಾ ಮಂಡ್ಯ ಪಕ್ಷೇತರ ಅಭ್ಯರ್ಥಿ: ಅಂಬಿ ಪತ್ನಿಗೆ ಸ್ಯಾಂಡಲ್ ವುಡ್ ಸಾಥ್

ಅಂಬರೀಶ್ ಸಾವಲ್ಲೂ ಒಂದಾಗದ ಯಶ್, ದರ್ಶನ್ ಚುನಾವಣೆ ವೇಳೆ ಒಂದಾಗಿ ಸುಮಲತಾಗೆ ಸಾಥ್ ನೀಡಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಯಶ್, ದರ್ಶನ್ ಸುಮಲತಾ ಪಕ್ಕ ಕುಳಿತಿದ್ದು ಅಚ್ಚರಿ ಮೂಡಿಸಿದೆ. 

ಚುನಾವಣೆಯಲ್ಲಿ ಬೆಂಬಲ ಕ್ರೋಢೀಕರಿಸಲು ಸುಮಲತಾ ಅವರು ಈಗಾಗಲೇ ಹಲವು ನಾಯಕರನ್ನು ಭೇಟಿಯಾಗಿದ್ದಾರೆ. ವಿಶೇಷವಾಗಿ ಬಿಜೆಪಿ ನಾಯಕರಾದ ಎಸ್‌.ಎಂ. ಕೃಷ್ಣ ಸೇರಿದಂತೆ ಹಲವು ನಾಯಕರನ್ನು ಭೇಟಿ ಮಾಡಿ ಬೆಂಬಲ ಯಾಚಿಸಿದ್ದಾರೆ. ಮಂಡ್ಯ ಜನರ ಒಲವು, ಅಂಬಿ ಅಭಿಮಾನಿಗಳ ಪ್ರೀತಿ, ಸ್ಯಾಂಡಲ್ ವುಡ್ ಸಾಥ್ ಸುಮಲತಾಗೆ ಇನ್ನಷ್ಟು ಧೈರ್ಯ ಮೂಡಿಸಿದೆ.