ಬೆಂಗಳೂರು (ಮಾ. 18): ಕಾಮಿಡಿ ಸ್ಟಾರ್ ಚಿಕ್ಕಣ್ಣ ಸದ್ಯ ಕನ್ನಡದ ಬಹು ಬೇಡಿಕೆ ನಟ. ತೆರೆ ಮೇಲೆ ಬಂದು ಮ್ಯಾನರಿಸಂ ತೋರಿಸಿದರೆ ಸಾಕು ಪ್ರೇಕ್ಷಕರು ಬಿದ್ದು ಬಿದ್ದು ನಗುವಂತಿರುತ್ತದೆ. 

ಚಿಕ್ಕಣ್ಣ ಕಾಮಿಡಿಯಿಂದ ಜನಮೆಚ್ಚುಗೆ ಪಡೆಯುವುದರ ಜೊತೆಗೆ ಸಾಮಾಜಿಕ ಕೆಲಸದಿಂದಲೂ ಮೆಚ್ಚುಗೆ ಪಡೆದಿದ್ದಾರೆ. ಮೈಸೂರು ಮೃಗಾಲಯದಿಂದ ಚಿರತೆಯನ್ನು ದತ್ತು ಪಡೆದಿದ್ದಾರೆ. 35 ಸಾವಿರ ಹಣ ನೀಡಿ ಒಂದು ವರ್ಷದ ಅವಧಿಗೆ ಚಿರತೆಯನ್ನು ದತ್ತು ಪಡೆದಿದ್ದಾರೆ. ಚಿರತೆಗೆ ಭೈರ ಎಂದು ನಾಮಕರಣ ಮಾಡಿದ್ದಾರೆ. 

ಸ್ಯಾಂಡಲ್ ವುಡ್ ನಲ್ಲಿ ಪ್ರಾಣಿ ಪ್ರೀತಿ ಹೆಚ್ಚಾಗುತ್ತಿದೆ. ನಟ ದರ್ಶನ್, ಸೃಜನ್ ಲೋಕೇಶ್ ಸೇರಿದಂತೆ ಸಾಕಷ್ಟು ಮಂದಿ ಪ್ರಾಣಿಗಳನ್ನು ದತ್ತು ಪಡೆದಿದ್ದಾರೆ. ಚಿಕ್ಕಣ್ಣ ಸ್ನೇಹಿತರಾದ ಸಿದ್ಧೇಗೌಡ, ಮೋಹನ್ ಕುಮಾರ್, ತಿಮ್ಮಯ್ಯ, ಸೋಮು ಕೆಲ ಪ್ರಾಣಿಗಳನ್ನು ದತ್ತು ಪಡೆದಿದ್ದಾರೆ.