Asianet Suvarna News Asianet Suvarna News

ಶೂಟಿಂಗ್‌ ಅಂದ್ರೆ ಸುಮ್ನೇನಾ? ಬೈಕ್‌ನಲ್ಲಿ ನಟಿಯನ್ನು ಕರ್ಕೊಂಡು ಹೋಗೋದಕ್ಕೂ ಎಷ್ಟು ಸರ್ಕಸ್‌ ಮಾಡ್ತಾರೆ ನೋಡಿ...

ಬೈಕ್‌ನಲ್ಲಿ ನಾಯಕ-ನಾಯಕಿ ಬ್ಯಾಲೆನ್ಸ್‌ ಮಾಡಿಕೊಂಡು ಹೋಗುವುದು ಹೇಗೆ? ಇದರ ಶೂಟಿಂಗ್‌ ಮಾಡಲು ಎಷ್ಟೆಲ್ಲಾ ಸರ್ಕಸ್‌ ಮಾಡುತ್ತಿದ್ದಾರೆ ವಿಡಿಯೋದಲ್ಲಿ ನೋಡಿ...
 

balancing heroine on bike while shooting for seiral or film making video gone viral suc
Author
First Published Sep 4, 2024, 2:16 PM IST | Last Updated Sep 4, 2024, 2:16 PM IST

  ಇಂದು ಸೀರಿಯಲ್​ಗಳು ಎಂದರೆ ಅವು ಕೇವಲ ಸೀರಿಯಲ್​ಗಳಾಗಿರಲ್ಲ.   ಸೀರಿಯಲ್​ಗಳು   ನಿಜ ಜೀವನದ ಕಥೆಯಂತೆ ಇಂದು ಮನೆಮನಗಳನ್ನು ತುಂಬಿಕೊಂಡಿವೆ. ಸೀರಿಯಲ್​ನಲ್ಲಿ  ಇರುವ ಪಾತ್ರಧಾರಿಗಳೆಲ್ಲರೂ ತಮ್ಮ ಮನೆಯದ್ದೋ ಇಲ್ಲವೇ ನೆರೆಮನೆಯ ಸದಸ್ಯರಂತೆ ಕಾಣುವ ದೊಡ್ಡ ವರ್ಗವೇ ಇದೆ. ಇದೇ ಕಾರಣಕ್ಕೆ ಸೀರಿಯಲ್​ಗಳು ಕೂಡ ವೀಕ್ಷಕರನ್ನು ಸೆರೆ ಹಿಡಿಯಲು ದೊಡ್ಡ ತಂತ್ರವನ್ನೇ ರೂಪಿಸುತ್ತಾರೆ. ಇದೀಗ ಅಂಥದ್ದೇ ಮೇಕಿಂಗ್​ ವಿಡಿಯೋ ವೈರಲ್​ ಆಗಿದೆ.  

ಸಾಮಾನ್ಯವಾಗಿ ಬೈಕ್‌, ಸೈಕಲ್‌ ಮೇಲೆ ನಟರು ನಟಿಯರನ್ನು ಕುಳ್ಳರಿಸಿಕೊಂಡು ಹೋಗುವ ದೃಶ್ಯವಿರುತ್ತದೆ. ಬರೀ ಕುಳ್ಳರಿಸಿಕೊಂಡು ಹೋದರೆ ಸಾಕದು, ಅಲ್ಲಿ ಮಾತುಕತೆ, ರೊಮಾನ್ಸ್‌ ಎಲ್ಲವೂ ನಡೆಯುತ್ತದೆ. ಹಲವು ಸಂದರ್ಭದಲ್ಲಿ ಸೈಕಲ್‌ನಲ್ಲಿ ಮುಂದುಗಡೆ ನಾಯಕಿಯನ್ನು ಕುಳ್ಳರಿಸಿಕೊಂಡು ಬ್ಯಾಲೆನ್ಸ್‌ ಮಾಡಿ ಹೇಗೆ ಹೋಗ್ತಾರಪ್ಪಾ ಎಂದೂ ಅನ್ನಿಸಬಹುದು. ಹಿನ್ನೆಲೆಯಲ್ಲಿ ಗುಡ್ಡ-ಕಾಡು-ಮೇಡು ಎಲ್ಲಾ ಇರುತ್ತದೆ. ರಸ್ತೆಗಳು ಏರು-ತಗ್ಗು ಇರುತ್ತವೆ. ಇಂಥ ಪರಿಸ್ಥಿತಿಯಲ್ಲಿ ನಟಿಯರನ್ನು ಬ್ಯಾಲೆನ್ಸ್‌ ಮಾಡಿ, ಆಕೆಗೆ ಏನೂ ಆಗದಂತೆ ಕರೆದುಕೊಂಡು ಹೋಗುವುದು ಎಷ್ಟು ಕಷ್ಟ ಎನ್ನಿಸದೇ ಇರಲಾರದು ಅಲ್ವಾ? ಆದರೆ ಅಲ್ಲಿ ನಡೆಯೋದೇ ಬೇರೆ.

ಅಬ್ಬಬ್ಬಾ... ಸೀತಾರಾಮ- ಡಾನ್ಸ್​ ಕರ್ನಾಟಕ ಡಾನ್ಸ್​ ಸೆಟ್​ನಲ್ಲಿ ಹೀಗೆಲ್ಲಾ ಆಯ್ತಾ? ಮೇಕಿಂಗ್​ ವಿಡಿಯೋ ವೈರಲ್​

ಹೌದು. ಅಸಲಿಗೆ ಬೈಕ್‌ ಆಗಲೀ, ಸೈಕಲ್‌ ಮೇಲೆ ಆಗಲೀ ನಾಯಕಿ ನಾಯಕ ಕುಳಿತುಕೊಂಡಾಗ ನಾಯಕ ಅದನ್ನು ಚಲಾಯಿಸುತ್ತಲೇ ಇರುವುದಿಲ್ಲ! ಸೈಕಲ್‌ ಆದ್ರೆ ಪೆಡಲ್‌ ಮೇಲೆ ಕಾಲು ಅಲ್ಲಾಡುತ್ತಿರುತ್ತದೆ. ಬೈಕ್‌ ಆದರೆ ಎಕ್ಸಲರೇಟರ್‌ ಅನ್ನು ನಾಯಕ ಅಲ್ಲಾಡಿಸುತ್ತಾ ಇರುತ್ತಾನೆ ಅಷ್ಟೇ. ಅಲ್ಲಿ ನಡೆಯುವುದೇ ಬೇರೆ. ಹಳಿಯ ರೀತಿಯಲ್ಲಿ ಸೆಟ್‌ ಮಾಡಿರಲಾಗುತ್ತದೆ. ಅದರ ಮೇಲೆ ಬೈಕ್‌ ಯಾ ಸೈಕಲ್‌ ಇಡಲಾಗುತ್ತದೆ. ಅದಕ್ಕೆ ಶೂಟಿಂಗ್‌ ಮಾಡುವ ಕ್ಯಾಮೆರಾ ಫಿಕ್ಸ್‌ ಮಾಡಿ ಇಡಲಾಗುತ್ತದೆ. ಕ್ಯಾಮೆರಾ ಮೂವ್‌ ಆದ ಹಾಗೆ ಹಳಿಯ ಮೇಲೆ ಇರುವ ವಾಹನ ಚಲಾಯಿಸುತ್ತದೆ. ನೋಡುವ ಸಮಯದಲ್ಲಿ ಬೈಕ್‌-ಸೈಕಲ್‌ ಹೋದ ಹಾಗೆ ಫೀಲ್‌ ಬರುತ್ತದೆ ಅಷ್ಟೇ.

ಅದರ ಮೇಕಿಂಗ್‌ ವಿಡಿಯೋ ವೈರಲ್‌ ಆಗಿದೆ. ಅದರಲ್ಲಿ ನಟಿಯನ್ನು ಬೈಕ್‌ನಲ್ಲಿ ನಟ ಕುಳ್ಳರಿಸಿಕೊಂಡು ಹೋಗುವುದನ್ನು ನೋಡಬಹುದು. ಸಹಾಯಕರು ಬೈಕ್‌ ಅನ್ನು ಕಷ್ಟಪಟ್ಟು ಹಳಿಯ ಮೇಲೆ ಇಡುತ್ತಿದ್ದಾರೆ. ನಂತರ ನಾಯಕ- ನಾಯಕಿ ಕುಳಿತುಕೊಳ್ಳುತ್ತಾರೆ. ಮಳೆಯಾಗುತ್ತದೆ. ಮಾತನಾಡುತ್ತಾ, ರೊಮಾನ್ಸ್‌ ಮಾಡುತ್ತಾ ಆರಾಮಾಗಿ ಇಬ್ಬರೂ ಹೋಗುತ್ತಾರೆ. ಎಷ್ಟು ಸುಲಭ ಅಲ್ವಾ? ಆದರೆ ಶೂಟಿಂಗ್‌ ಮಾಡುವಾಗ ತಂತ್ರಜ್ಞ ಟೀಮ್‌ ಮತ್ತು ಸಹಾಯಕರು ಸಕತ್‌ ಕಷ್ಟಪಡಬೇಕು, ಆದರೆ ನಾಯಕ-ನಾಯಕಿ ಆರಾಮಾಗಿ ಪೋಸ್‌ ಕೊಟ್ಟು ಡೈಲಾಗ್‌ ಹೇಳುತ್ತಿದ್ದರೆ ಸಾಕಷ್ಟೇ. ಕೆಲವು ಸಂದರ್ಭದಲ್ಲಿ ನೀಲಿ ಅಥವಾ ಹಸಿರಿನ ಬಟ್ಟೆಯ ಬ್ಯಾಕ್‌ಗ್ರೌಂಡ್ ಇರುತ್ತದೆ. ಇವೆರಡು ಬಣ್ಣಗಳನ್ನು ಇಡುವ ಉದ್ದೇಶ ಏನೆಂದರೆ, ಕೊನೆಯಲ್ಲಿ ಬ್ಯಾಕ್‌ಗ್ರೌಂಡ್‌ನಲ್ಲಿ ಬೇಕಾದ ದೃಶ್ಯಗಳನ್ನು ಎಡಿಟಿಂಗ್‌ ಟೈಂನಲ್ಲಿ ಅಳವಡಿಸಿಕೊಳ್ಳಬಹುದು. 

ಶ್ರೇಷ್ಠಾ-ತಾಂಡವ್​ ಮದುವೆಗೆ ಅಡ್ಡಿಯಾದ ಮಳೆ! ಭಾಗ್ಯಳಿಗೆ ಕೊಡೆಯಿಂದ ರಕ್ಷಿಸಿದ ಮದುಮಗಳು- ಇದೆಂಥ ಟ್ವಿಸ್ಟ್​?

Latest Videos
Follow Us:
Download App:
  • android
  • ios