- ಕಂಚಿನ ಕಂಠದಲ್ಲಿ ಹೀಗೆ ಹೇಳಿ ದೊಡ್ಡದಾಗಿ ನಕ್ಕರು ‘ಟಗರು’ ಚಿತ್ರದ ಚಿಟ್ಟೆ ಖ್ಯಾತಿಯ ನಟ ವಸಿಷ್ಠ ಸಿಂಹ. ವಿಲನ್ ಪಾತ್ರದ ಮೂಲಕವೇ ಜನಪ್ರಿಯವಾಗಿದ್ದ ವಸಿಷ್ಠ ಸಿಂಹ ಈಗ ಮೂರ್ನಾಲ್ಕು ಸಿನಿಮಾಗಳಲ್ಲಿ ಹೀರೋ ಆಗಿದ್ದಾರೆ. ಅದರಲ್ಲಿ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಇಂಡಿಯಾ ವರ್ಸಸ್ ಇಂಗ್ಲೆಂಡ್’ ಚಿತ್ರವೂ ಒಂದು. ಈ ಚಿತ್ರಕ್ಕೆ ಅವರು ಹೀರೋ ಆಗಿದ್ದೇ ಒಂದು ಇಂಟರೆಸ್ಟಿಂಗ್ ಕತೆ.

ಕೆಜಿಎಫ್ ವಿಲನ್‌ಗೂ ಇದೆ ಪಂಜಾಬ್‌ನಲ್ಲಿ ಅಭಿಮಾನಿಗಳ ಸಂಘ!

‘ಅವತ್ತೊಂದಿನ ನಾಗತಿಹಳ್ಳಿ ಚಂದ್ರಶೇಖರ್ ಸರ್ ಫೋನ್ ಬಂತು. ಏನಪ್ಪಾ ಹೀರೋ, ಹೇಗಿದ್ದೀಯಾ ಅಂದ್ರು. ಸರ್ ನಾನಿನ್ನು ಹೀರೋ ಆಗಿಲ್ಲ ಬಿಡಿ ಅಂದೆ. ಇಲ್ಲಪ್ಪ, ನನ್ನ ಸಿನಿಮಾಗೆ ನೀನೇ ಹೀರೋ ಅಂದ್ರು. ಗಟ್ಟಿಯಾಗಿ ನಕ್ಕು ಏನ್ ಸರ್ ತಮಾಷೆ ಮಾಡ್ತೀರಾ ಅಂದ್ರೆ, ತಮಾಷೆ ಅಲ್ಲಪ್ಪ, ನನ್ನ ಸಿನಿಮಾದ ಹೀರೋ ನೀನೇ ಅಂತ ನಂಬಿಸಿದ್ರು. ಮರು ದಿವಸ ಕತೆ ಹೇಳಿದ್ರು, ಆಗಲೇ
ನನ್ನೊಳಗೊಬ್ಬ ಹೀರೋ ಕಾಣಿಸಿಕೊಂಡಿದ್ದು’ ಎನ್ನುತ್ತಾರೆ ವಸಿಷ್ಠ ಸಿಂಹ. ಇಂಡಿಯಾ ವರ್ಸಸ್ ಇಂಗ್ಲೆಂಡ್ ರಿಲೀಸ್‌ಗೆ ರೆಡಿ ಆಗಿದೆ. ಮಾನ್ವಿತಾ ಹರೀಶ್ ಜೋಡಿ ಆಗಿದ್ದಾರೆ.

ರಚಿತಾ ರಾಮ್‌, ವಸಿಷ್ಠ ಸಿಂಹ ಜೋಡಿಯ ಹೊಸ ' ಪಂಥ'!