ವಿಕ್ಟರಿ ವೆಂಕಟೇಶ್‌ ನಟನೆಯ ತೆಲುಗು 'ನಾರಪ್ಪ' ಸಿನಿಮಾದಲ್ಲಿ ಕನ್ನಡದ ನಟ ವಸಿಷ್ಠ ಸಿಂಹ ಅಭಿನಯಿಸಿದ್ದಾರೆ. ಮೊದಲ ತೆಲುಗು ಚಿತ್ರಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. 

ನಟ ವಸಿಷ್ಠ ಸಿಂಹ ನಟನೆಯ ತೆಲುಗು ಸಿನಿಮಾ ಬಿಡುಗಡೆ ಆಗಿದೆ. ಅದು ವಿಲನ್‌ ಪಾತ್ರದಲ್ಲಿ. ಈಗಾಗಲೇ ಅವರು ನಾಯಕನಾಗಿ ತೆಲುಗಿನಲ್ಲಿ ಲಾಂಚ್‌ ಆಗಿರುವ ಬೆನ್ನೆಲ್ಲೇ ಸದ್ದಿಲ್ಲದೆ ವಿಲನ್‌ ಆಗಿರುವುದು ವಿಕ್ಟರಿ ವೆಂಕಟೇಶ್‌ ನಟನೆಯ ‘ನಾರಪ್ಪ’ ಚಿತ್ರದಲ್ಲಿ. ಇದು ತಮಿಳಿನ ಧನುಷ್‌ ನಟನೆಯ ‘ಅಸುರನ್‌’ ಚಿತ್ರದ ರೀಮೇಕ್‌. ನೇರವಾಗಿ ಅಮೆಜಾನ್‌ ಪ್ರೈಮ್‌ನಲ್ಲೇ ಬಿಡುಗಡೆಯಾಗಿರುವ ಈ ‘ನಾರಪ್ಪ’ ಚಿತ್ರ ನೋಡಿದವರು ವಸಿಷ್ಠ ಸಿಂಹ ಅವರ ಪಾತ್ರವನ್ನು ಮೆಚ್ಚಿಕೊಳ್ಳುತ್ತಿದ್ದಾರೆ.

ಸಿಂಹದ ಮರಿ ದತ್ತು ಪಡೆದ ವಸಿಷ್ಠ; ಇದರ ದಿನಾಂಕ ತುಂಬಾನೇ ಸ್ಪೆಷಲ್!

ಸದ್ಯ ತೆಲುಗಿನ ಸ್ಟಾರ್‌ ನಟನ ಚಿತ್ರದಲ್ಲಿ ವಸಿಷ್ಠ ಸಿಂಹ ನಟಿಸಿರುವುದು ಮುಂದೆ ತೆಲುಗು ಚಿತ್ರಗಳಲ್ಲಿ ಮಹತ್ವದ ಪಾತ್ರಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಾರೆಂಬ ಸೂಚನೆಯಂತಿದೆ. ‘ಓದೆಲ ರೈಲ್ವೇ ಸ್ಟೇಷನ್‌’ ಹೆಸರಿನ ಚಿತ್ರದ ಮೂಲಕ ಹೀರೋ ಆಗಿ ಟಾಲಿವುಡ್‌ಗೆ ಎಂಟ್ರಿ ಆಗಿದ್ದು, ಈ ಚಿತ್ರದ ಫಸ್ಟ್‌ ಲುಕ್‌ ಕೂಡ ಬಿಡುಗಡೆ ಆಗಿದೆ. ಈ ಚಿತ್ರ ಇನ್ನೇನು ಚಿತ್ರಮಂದಿರಗಳಿಗೆ ಬರಬೇಕಿದೆ.

View post on Instagram