ಕಿಚ್ಚ-ದಚ್ಚು ಫ್ರೆಂಡ್​ಶಿಪ್​​​​ಗೆ ಇನ್ನೂ ಇದೆಯಾ ಜೀವ? ನಡೆಯುತ್ತಿರುವ ಘಟನೆಗಳ ಬಗ್ಗೆ ಸುದೀಪ್ ಕೊಟ್ಟ ಉತ್ತರವಿದು...

ಸ್ಯಾಂಡಲ್​ವುಡ್​​ನಲ್ಲಿ ಈ ತಲೆಮಾರಿನ ಹೀರೋಗಳ ನಡುವೆ ಕುಚಿಕ್ಕು ಗೆಳೆಯರು ಎಂದು ಫೇಮ್ಸ್‌ ಆದವರು ಕಿಚ್ಚ ಸುದೀಪ್ ಮತ್ತು ದರ್ಶನ್. ಈಗ ಈ ಸ್ನೇಹಕ್ಕೆ ಏಳೂವರೆ ವರ್ಷಗಳಿಂದ ಗ್ರಹಣ ಹಿಡಿದಂತಿದೆ. ಕಿಚ್ಚ-ದಚ್ಚು ಸ್ನೇಹಕ್ಕೆ ಜೀವವೇ ಇಲ್ಲ ಅಂತ ಎಲ್ಲವೂ ಅಂದುಕೊಂಡಿದ್ದಾರೆ. ಈ ಸ್ನೇಹದ ಬಗ್ಗೆ ಕಿಚ್ಚ ಏಷ್ಯಾನೆಟ್​ ಸುವರ್ಣ ನ್ಯೂಸ್​ ಜೊತೆ ಓಪನ್​ ಆಗಿ ಮಾತಾಡಿದ್ದಾರೆ..

ಕಿಚ್ಚನ ಜೊತೆಗಿನ ಸ್ನೇಹಕ್ಕೆ ದರ್ಶನ್ ಓಪನ್ ಆಗಿ ಬ್ರೇಕಪ್​​ ಮುದ್ರೆ ಒತ್ತಿದ್ದು ಆಗಿದೆ. ರೆಬೆಲ್ ಸ್ಟಾರ್ ಅಂಬರೀಶ್ ಇದ್ದಿದ್ದರೆ ಇವರ ಸ್ನೇಹ ಎಂದೋ ಪ್ಯಾಚಪ್ ಆಗುತ್ತಿತ್ತು. ಹಾಗಂಥ ಇಬ್ಬರಲ್ಲಿ ಒಬ್ಬರು ಕೂಡ ಸ್ನೇಹದ ಹಸ್ತ ಚಾಚಲಿಲ್ಲ ಅಂತಲ್ಲ. ಕಾಲ ಕಾಲಕ್ಕೆ ಸುದೀಪ್ ತುಂಬಾನೇ ಸಂಯಮದಿಂದ ದರ್ಶನ್ ಬಗ್ಗೆ ಮಾತನಾಡಿದ್ದಾರೆ. ತಮ್ಮ ಸ್ನೇಹದ ಆ ದಿನಗಳನ್ನೂ ಮೆಲುಕು ಹಾಕಿದ್ದಾರೆ. ಆದ್ರೆ ಸುದೀಪ್ ನಡೆಗೆ, ನುಡಿಗಳಿಗೆ ದರ್ಶನ್​​ ಕಡೆಯಿಂದ ಯಾವ್ದೇ ಪ್ರತಿಕ್ರಿಯೆ ಬಂದಿಲ್ಲ. ಆದ್ರೂ ಕಿಚ್ಚ ಬೇಸರ ಮಾಡಿಕೊಂಡಿಲ್ಲ. ದರ್ಶನ್ ಬಗ್ಗೆ ಪ್ರಶ್ನೆ ಕೇಳಿದಾಗೆಲ್ಲಾ ಸುದೀಪ್ ಸಮಾಧಾನದಿಂದನೇ ಉತ್ತರ ನೀಡಿದ್ದಾರೆ. 

ಅಕ್ಕ ಮುಗ್ಗರಿಸಿ ಬಿದ್ದರೆ.... ಚಿನ್ ತಪಕ್ ಡಂಡಂ; ಭವ್ಯಾ ಗೌಡ ಕಾಲೆಳೆದ ನೆಟ್ಟಿಗರು

ನಟ ದರ್ಶನ್​ ಜೈಲು ವಾಸದಲ್ಲಿ 100 ಡೇಸ್​ ಸಕ್ಸಸ್​ಫುಲ್ ಜರ್ನಿಗೆ ಕಲವೇ ದಿನಗಳಷ್ಟೇ ಬಾಕಿ ಇದೆ. ಆದ್ರೆ ದರ್ಶನ್​​ರ ಈ ಪರಿಸ್ಥಿತಿಗೆ ಸುದೀಪ್​​ ಸಿಕ್ಕಾಪಟ್ಟೆ ಬೇಸರ ಆಗಿದ್ದಾರೆ. ಸುದೀಪ್ With ಅಜಿತ್ ಸಂದರ್ಶನದಲ್ಲಿ ಕಿಚ್ಚ ತನ್ನ ಬೇಸರವನ್ನ ಮಾತಿನಲ್ಲೇ ಹೊರ ಹಾಕಿದ್ದಾರೆ. ದರ್ಶನ್‌ಗೆ ತೊಂದರೆಯಾಗ್ತಿದೆ ಅಂದಾಗ ಖುಷಿ ಪಡುವ ವ್ಯಕ್ತಿ ನಾನಲ್ಲ ಆಂತ ಸುದೀಪ್ ಹೇಳಿದ್ದಾರೆ. ಸ್ನೇಹದಲ್ಲಿ ನಾನು ದೊಡ್ಡವನು, ನೀನು ದೊಡ್ಡವನು ಅನ್ನುವ ಮಾತು ಬರುವುದಿಲ್ಲ, ಸ್ನೇಹ-ಸ್ನೇಹಿತ ಅಂದರೆ ಅಲ್ಲಿ ಎಲ್ಲವೂ ನಿಷ್ಕಳಂಕ ಆಗಿರಬೇಕಾಗುತ್ತದೆ. ಕೆಲವೊಮ್ಮೆ ನಮ್ಮ ಸ್ನೇಹಿತರು ಮಾಡುವ ತಪ್ಪಿಗೆ ತಲೆ ಬಾಗಬೇಕಾಗುತ್ತೆ. ಅನಾವಶ್ಯಕವಾಗಿ ಏನೇನೋ ನಡೆದಾಗ ದೂರ ಇರೋದೇ ಒಳ್ಳೆಯದು ಅನಸುತ್ತೆ, ಇಲ್ಲಿಯವರೆಗೆ ನಾನು ಒಳ್ಳೆಯದೇ ಮಾಡಿದ್ದೇನೇ ಹೊರತು ಕೆಟ್ಟದ್ದು ಬಯಸಿಲ್ಲ ಅಂತ ಕಿಚ್ಚ ದಚ್ಚು ಸ್ನೇಹದ ಬಗ್ಗೆ ಓಪನ್​ ಸ್ಟೇಟ್​​ಮೆಂಟ್ ಕೊಟ್ಟಿದ್ದಾರೆ. ಸುದೀಪ್​ರ ಈ ಮಾತುಗಳನ್ನ ಕೇಳಿದ್ರೆ ಕಿಚ್ಚ-ದಚ್ಚು ಸ್ನೇಹ ಜೀವಂತ. ಸದ್ಯ ಮಂಕಾಗಿರೋ ಇವರ ಸ್ನೇಹ ಯಾವಾಗ ಬೇಕಾದ್ರೂ ಆ್ಯಕ್ಟೀವ್ ಆಗಬಹುದು ಅನಿಸುತ್ತೆ.

ವಿದೇಶದಲ್ಲಿ ಓಣಂ ಆಚರಿಸಿದ 'ಶಾಸ್ತ್ರಿ' ನಟಿ; ಪಬ್ ಪಾರ್ಟಿ ಅಂತ ಸುತ್ತಾಡುವವರಿಗೆ ನೀವು ಮಾದರಿ ಎಂದ ನೆಟ್ಟಿಗರು!