Asianet Suvarna News Asianet Suvarna News

ಸೆಲೆಬ್ರಿಟಿ ಮಕ್ಕಳು ಎನ್ನುವ ಕಾರಣಕ್ಕೆ ದ್ವೇಷ ಮಾಡ್ತಾರೆ; ನೆಪೋಟಿಸಂ ಬಗ್ಗೆ ಕಿಚ್ಚ ಸುದೀಪ್ ಪುತ್ರಿಯ ಮಾತು

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಪುತ್ರಿ ಸಾನ್ವಿ ಹೈದರಾಬಾದ್‌ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಆಗಾಗ ಸಾನ್ವಿ ಅಪ್ಪ-ಅಮ್ಮನ ಜೊತೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿರುತ್ತಾರೆ. ಸದ್ಯ ಸಾನ್ವಿ ನೆಪೋಟಿಸಂ ಬಗ್ಗೆ ಮಾತನಾಡಿದ್ದಾರೆ. 

Actor sudeep daughter sanvi talks about nepotism sgk
Author
First Published Oct 3, 2022, 3:34 PM IST

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಪುತ್ರಿ ಸಾನ್ವಿ ಹೈದರಾಬಾದ್‌ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಆಗಾಗ ಸಾನ್ವಿ ಅಪ್ಪ-ಅಮ್ಮನ ಜೊತೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿರುತ್ತಾರೆ. ಬಣ್ಣದ ಲೋಕದಿಂದ ಸದ್ಯ ದೂರ ಇರುವ ಸಾನ್ವಿ ಉತ್ತಮ ಸಿಂಗರ್ ಹಾಗೂ ಪೇಂಟರ್. ಆಗಾಗ ಸಾಮಾಜಿಕ ಜಾಲತಾಣದಲ್ಲಿ ತನ್ನ ಗಾಯನದ ತುಣುಕುಗಳನ್ನು ಶೇರ್ ಮಾಡುತ್ತಿರುತ್ತಾರೆ. ಚಿತ್ರಕಲೆಯ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಸಾನ್ವಿ ಗಾಯನಕ್ಕೆ ಅನೇಕರು ಫಿದಾ ಆಗಿದ್ದಾರೆ. ಸಾನ್ವಿ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ 73 ಸಾವಿರಕ್ಕೂ ಅಧಿಕ ಫಾಲೋವರ್ಸ್ ಹೊಂದಿದ್ದಾರೆ. ಅಪ್ಪನ ಮುದ್ದಿನ ಮಗಳು ಸಾನ್ವಿ ಮೊದಲ ಬಾರಿಗೆ ನೆಪೋಟಿಸಂ ಬಗ್ಗೆ ಮಾತನಾಡಿದ್ದಾರೆ.  

ಇನ್ಸ್ಟಾಗ್ರಾಮ್ ನಲ್ಲಿ ಅಭಿಮಾನಿಗಳು ಕೇಳಿರುವ ಪ್ರಶ್ನೆಗಳಿಗೆ ಸಾನ್ವಿ ಉತ್ತರ ನೀಡಿದ್ದಾರೆ. ಅಭಿಮಾನಿಯೊಬ್ಬ ನೆಪೋಟಿಸಂ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ನಂಪೋಟಿಸಂ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಉತ್ತರ ನೀಡಿದ ಸಾನ್ವಿ, ಸೆಲೆಬ್ರಿಟಿ ಮಕ್ಕಳು ಎನ್ನುವ ಕಾರಣಕ್ಕೆ ತುಂಬಾ ದ್ವೇಷ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ. 'ಸೆಲೆಬ್ರಿಟಿ ಮಕ್ಕಳು ಎನ್ನುವ ಕಾರಣಕ್ಕೆ ಅವರನ್ನು ತುಂಬಾ ದ್ವೇಷ ಮಾಡಲಾಗುತ್ತಿದೆ. ಕೇವಲ ಅವರ ಬ್ಯಾಗ್ರೌಂಡ್ ನಿಂದ. ಇದು ಅವರ (ಸೆಲೆಬ್ರಿಟಿ ಮಕ್ಕಳ) ತಪ್ಪಲ್ಲ. ದಯವಿಟ್ಟು ಹೇಟ್ ಮಾಡುವುದನ್ನು ನಿಲ್ಲಿಸಿ' ಎಂದು ಹೇಳಿದ್ದಾರೆ.

 Actor sudeep daughter sanvi talks about nepotism sgk

ದುಬೈನಲ್ಲಿ ಗೋಲ್ಡನ್ ವೀಸಾ ಪಡೆದ ಕನ್ನಡದ ಮೊದಲ ನಟ ಸುದೀಪ್; ಇದರ ಲಾಭವೇನು?

ಇನ್ನು ಸ್ಯಾಂಡಲ್ ವುಡ್ ಎಂಟ್ರಿಯ ಬಗ್ಗೆಯೂ ಸುದೀಪ್ ಪುತ್ರಿ ಸಾನ್ವಿ ಮಾತನಾಡಿದ್ದಾರೆ. ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕರೆ ಏನು ಮಾಡುತ್ತೀರಿ ಎಂದು ಕೇಳಿದ ಪ್ರಶ್ನೆಗೆ ಡಿಪೆಂಡ್ಸ್ ಎಂದು ಹೇಳಿದ್ದಾರೆ. ಇನ್ನು ಈವರ್ಷದ ತುಂಬಾ ಇಷ್ಟವಾದ ಸಿನಿಮಾ ಯಾವುದು ಎನ್ನುವ ಪ್ರಶ್ನೆಗೆ 'ಕಾಂತಾರ' ಎಂದು ಹೇಳಿದ್ದಾರೆ. ಇಷ್ಟವಾದ ಗಾಯಕ ವಿಜಯ್ ಪ್ರಕಾಶ್ ಎಂದು ಹೇಳಿದ್ದಾರೆ. ಫೇವರಿಟ್ ಹೀರೋ ಸಿದ್ಧಾರ್ಥ್ ಮಲ್ಹೋತ್ರ ಮತ್ತು ಕಿಚ್ಚ ಸುದೀಪ್ ಎಂದಿದ್ದಾರೆ. 

ಕಿಚ್ಚನ ಮನೆಗೆ ಶಿವಣ್ಣ-ಗೀತಕ್ಕ ಸರ್ ಪ್ರೈಸ್ ವಿಸಿಟ್

ಚಿತ್ರರಂಗದಲ್ಲಿ ಅದರಲ್ಲೂ ಬಾಲಿವುಡ್‌ನಲ್ಲಿ ನೆಪೋಟಿಸಂ ಬಗ್ಗೆ ಸಿಕ್ಕಾಪಟ್ಟೆ ಚರ್ಚೆ ನಡೆದಿತ್ತು. ನಪೋಟಿಸಂ ವಿರುದ್ಧ ಅನೇಕರು ಸಿಡಿದೆದ್ದಿದ್ದರು. ಸುಶಾಂತ್ ರಜಪೂತ್ ನಿಧನದ ಬಳಿಕ ನೆಪೋಟಿಸಂ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ನಟಿ ಕಂಗನಾ ರಣಾವತ್ ಸೇರಿದಂತೆ ಅನೇಕರು ನೆಪೋಟಿಸಂ ವಿರುದ್ದ ಕೆಂಡಕಾರಿದ್ದರು. ಅಲಿಯಾ ಭಟ್, ಸೋನಂ ಕಪೂರ್ ಸೇರಿದಂತೆ ಅನೇಕರ ವಿರುದ್ಧ ಕಂಗನಾ ಅಸಮಾಧಾನ ಹೊರಹಾಕಿದ್ದರು. ಸೌತ್ ಸಿನಿಮಾರಂಗದಲ್ಲಿ ನೆಪೋಟಿಸಂ ಸದ್ದು ಮಾಡಿದ್ದು ಕಡಿಮೆಯಾಗಿದ್ದರೂ ಸಹ ಅನೇಕರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದರು. ಇದೀಗ ಸುದೀಪ್ ಪುತ್ರಿ ಸಾನ್ವಿ ಮಾತನಾಡಿ ಸೆಲೆಬ್ರಿಟಿ ಮಕ್ಕಳು ಎನ್ನುವ ಕಾರಣಕ್ಕೆ ದ್ವೇಷ ಮಾಡುವುದು ಬೇಸರದ ಸಂಗತಿ ಎಂದಿದ್ದಾರೆ.         

Follow Us:
Download App:
  • android
  • ios