ಅವರು ಈ ಮಾತು ಹೇಳಿದ್ದು ಅವರದೇ ಅಭಿನಯದ, ಪ್ರಮೋದ್‌ ಚಕ್ರವರ್ತಿ ನಿರ್ದೇಶನದ ಬಹು ನಿರೀಕ್ಷಿತ ‘ದ್ರೋಣ’ ಚಿತ್ರದ ಆಡಿಯೋ ಹಾಗೂ ಟ್ರೇಲರ್‌ ಲಾಂಚ್‌ ಸಂದರ್ಭ. ಪುನೀತ್‌ ರಾಜ್‌ ಕುಮಾರ್‌ ಅತಿಥಿಯಾಗಿ ಬಂದಿದ್ದರು. ಇಬ್ಬರು ಸಹೋದರರು ಬಂದ ಕಾರಣಕ್ಕೆ ಎಸ್‌ಆರ್‌ವಿ ಮಿನಿ ಚಿತ್ರಮಂದಿರ ಹೌಸ್‌ ಫುಲ್‌ ಆಗಿತ್ತು. ಮೊದಲು ಮಾತಿಗೆ ನಿಂತು ಶಿವರಾಜ್‌ ಕುಮಾರ್‌ ‘ದ್ರೋಣ’ ಚಿತ್ರದ ವಿಶೇಷತೆ ಹೇಳಿಕೊಂಡರು. ಅವರ ಮಾತುಗಳು ಇಲ್ಲಿವೆ-

ಸಿನಿಮಾಗೆ ಬರದಿದ್ದರೆ ಶಿವಣ್ಣ ಇಂದು ಹೀಗಿರುತ್ತಿದ್ದರಂತೆ!

- ಸರ್ಕಾರಿ ಕನ್ನಡ ಶಾಲೆ ಶಿಕ್ಷಕನ ಪಾತ್ರ ನನ್ನದು. ಗುರು ಅಂದ್ರೆ ಹೇಗೆ, ಅವರ ಮೇಲೆ ಏನೆಲ್ಲ ಜವಾಬ್ದಾರಿ ಇರುತ್ತೆ ಅನ್ನೋದನ್ನು ನನ್ನ ಪಾತ್ರದ ಮೂಲಕ ತೋರಿಸಲು ಹೊರಟಿದ್ದಾರೆ. ಇದು ಒಂದೊಳ್ಳೆಯ ಸಿನಿಮಾ ಆಗುತ್ತೆ.

- ನಾನು ಕೂಡ ಸರ್ಕಾರಿ ಶಾಲೆಯಲ್ಲಿ ಓದಿದವನು. ಅಲ್ಲಿನ ಸಮಸ್ಯೆಗಳು, ಸಂಕಟಗಳು ನಂಗೂ ಗೊತ್ತು. ಇವೆಲ್ಲ ಸರಿ ಹೋಗಬೇಕಾದ್ರೆ ಪ್ರತಿಯೊಬ್ಬರು ಅವರವರ ಜವಾಬ್ದಾರಿ ಅರಿತುಕೊಳ್ಳಬೇಕು. ನಾನು ಮತ್ತು ನನ್ನ ಫ್ಯಾಮಿಲಿ ಮಾತ್ರ ಚೆನ್ನಾಗಿರಲಿ ಅಂದ್ರೆ ವ್ಯವಸ್ಥೆ ಹೇಗೆ ಸರಿ ಹೋಗುತ್ತೆ.

ಶಿವಣ್ಣ ಕೈಗೆ 'ಆರ್‌ಡಿಎಕ್ಸ್‌' ಕೊಟ್ಟೋರು ಯಾರು?

- ಹಾಗಂತ ಒಂದು ಸಿನಿಮಾ ಬಂದಾಕ್ಷಣ ಸರ್ಕಾರ ಸ್ಪಂದಿಸುತ್ತೆ, ಇನ್ನೇನೋ ಬದಲಾಗುತ್ತೆ ಅಂತ ನಿರೀಕ್ಷೆ ಮಾಡುವ ಕಾಲ ಇದಲ್ಲ. ಆ ನಿಟ್ಟಿನಲ್ಲಿ ಒಂದು ಪ್ರಯತ್ನ ಮಾಡಿದ್ದೇವೆ. ಇದು ಯಾರೋ ಒಬ್ಬರಿಂದ ಆಗುವ ಕೆಲಸ ಅಲ್ಲ. ಪ್ರತಿಯೊಬ್ಬರಿಗೂ ಕಾಳಜಿ ಬೇಕು. ಭಾಷೆ ಉಳಿಯಬೇಕು, ಭಾಷೆ ಬೆಳೆಯಬೇಕು ಅಂದ್ರೆ ಉದ್ಯಮದಲ್ಲಿರುವವರೆಲ್ಲ ಸ್ಪಂದಿಸಬೇಕು.

"