ರಜನಿಕಾಂತ್ ಸಿನಿಮಾದಲ್ಲಿ ನಟಿಸುತ್ತಿದ್ದೇನೆ: ಶಿವಣ್ಣ
ತಲೈವ ಜೊತೆ ಕೈ ಜೋಡಿಸಿದ ಹ್ಯಾಟ್ರಿಕ್ ಹೀರೋ. ಹೊಸ ಕಥೆಗೆ ಥ್ರಿಲ್ ಆದ ಅಭಿಮಾನಿಗಳು.
ರಜನಿಕಾಂತ್ ಅವರ 169ನೇ ಚಿತ್ರದಲ್ಲಿ ಶಿವರಾಜ್‌ಕುಮಾರ್ ಮುಖ್ಯಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಶಿವಣ್ಣ ಅವರು ಈ ವಿಷಯ ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ‘ಯಾವ ನಟನಿಗಾದರೂ ರಜನಿಕಾಂತ್ ಅವರಂಥಾ ಕಲಾವಿದರ ಜೊತೆಗೆ ನಟಿಸುವ ಅವಕಾಶ ಸಿಗುವುದೇ ಅಪರೂಪ. ಸಂತೋಷದಿಂದ ನಟಿಸಲು ಒಪ್ಪಿಕೊಂಡಿದ್ದೇನೆ. ಈಗಷ್ಟೆಸಿನಿಮಾ ಬಗ್ಗೆ ಮಾತುಕತೆ ನಡೆದಿದೆ. ನಿರ್ದೇಶಕ ನೆಲ್ಸನ್ ಹಾಗೂ ತಂಡ ಸಿನಿಮಾದ ಒನ್‌ಲೈನ್ ನರೇಟ್ ಮಾಡಿದ್ದಾರೆ. ಪಾತ್ರ ಯಾವುದು ಅಂತ
ಇನ್ನೊಂದು ಸ್ವಲ್ಪ ಸಮಯದಲ್ಲೇ ತಿಳಿಸುತ್ತೇನೆ. ಈ ಸಿನಿಮಾದ ಭಾಗವಾಗುತ್ತಿರುವುದಕ್ಕೆ ಖುಷಿ ಇದೆ’ ಎಂದು ತಿಳಿಸಿದ್ದಾರೆ. ಈ ಚಿತ್ರವನ್ನು ನೆಲ್ಸನ್ ನಿರ್ದೇಶಿಸುತ್ತಿದ್ದಾರೆ.
'ಅವನೇ ಶ್ರೀಮನ್ನಾರಾಯಣ' ನಿರ್ದೇಶಕರ ಜೊತೆ ಶಿವಣ್ಣ ಸಿನಿಮಾ:
ಸಚಿನ್ ಮುಂದಿನ ಸಿನಿಮಾವನ್ನು ಶಿವಣ್ಣನಿಗೆ ನಿರ್ದೇಶನ ಮಾಡಲಿದ್ದಾರೆ ಎನ್ನುವ ವಿಚಾರ ಬಹಿರಂಗವಾಗಿದೆ. ಅವರನೇ ಶ್ರೀಮನ್ನಾರಾಯಣ ಸಿನಿಮಾ ಬಿಡುಗಡೆಯಾಗಿ ಎರಡು ವರ್ಷಗಳ ಮೇಲಾಗಿದೆ. ಆದರೂ ನಿರ್ದೇಶಕ ಸಚಿನ್ ಯಾವುದೇ ಸಿನಿಮಾಗೂ ಆಕ್ಷನ್ ಕಟ್ ಹೇಳಿರಲಿಲ್ಲ. ಇದೀಗ ಶಿವಣ್ಣ ಜೊತೆ ಸಿನಿಮಾ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಅಶ್ವತ್ಥಾಮನಾಗಲಿದ್ದಾರೆ ಶಿವಣ್ಣ
ಸಚಿನ್ ರವಿ ನಿರ್ದೇಶನ ಮಾಡಲಿರುವ ಮುಂದಿನ ಸಿನಿಮಾದಲ್ಲಿ ಶಿವರಾಜ್ ಕುಮಾರ್(Shivarajkumar) ಮಹಾಭಾರತದ ಅಶ್ವತ್ಥಾಮನಾಗಿ ಬಣ್ಣ ಹಚ್ಚಲಿದ್ದಾರೆೆ ಎನ್ನಲಾಗಿದೆ. ಇದೊಂದು ಪಕ್ಕಾ ಆಕ್ಷನ್ ಪ್ಯಾಕ್ಡ್ ಸ್ಪೈ ಥ್ರಿಲ್ಲರ್ ಕಥಾಹಂದರವನ್ನು ಒಳಗೊಂಡಿದೆ. ಅಮರತ್ವ ಪಡೆದಿರುವ ಅಶ್ವತ್ಥಾಮನ ಸುತ್ತಾ ಸಾಗುವ ಇಡೀ ಕಥೆಯಲ್ಲಿ ಶಿವಣ್ಣ ಸೂಪರ್ ಹೀರೋ ಆಗಿ ಕಾಣಿಸಿಕೊಳ್ಳಲಿದ್ದಾರೆ. ಶಿವಣ್ಣ ಈಗಾಗಲೇ ಅನೇಕ ಪಾತ್ರಗಳಲ್ಲಿ ಮಿಂಚಿದ್ದಾರೆ. ತರಹೇವಾರಿ ಪಾತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ. ಇದೀಗ ಮತ್ತೊಂದು ವಿಭಿನ್ನ ಪಾತ್ರದ ಮೂಲಕ ಅಭಿಮಾನಿಗಳ ಮುಂದೆ ಬರ್ತಿದ್ದಾರೆ.
ನಾನು ಉಪ್ಪಿ ಬಾಯ್‌ಫ್ರೆಂಡ್ ಗರ್ಲ್‌ಫ್ರೆಂಡ್ ರೀತಿ: ಶಿವಣ್ಣ
ನಿರ್ದೇಶನದ ಜೊತೆಗೆ ನಿರ್ಮಾಣಕ್ಕಿಳಿದ ಸಚಿನ್
ಸಚಿನ್ ಈ ಸಿನಿಮಾಗೆ ನಿರ್ದೇಶನದ ಜೊತೆಗೆ ನಿರ್ಮಾಣ ಜವಾಬ್ದಾರಿ ಕೂಡ ಹೊತ್ತಿದ್ದು, ತಮ್ಮದೇ ಹೋಮ್ ಬ್ಯಾನರ್ ಜೊತೆಗೆ ಕಾರ್ಪೊರೇಟ್ ಕಂಪನಿಯೊಂದರ ಜೊತೆಗೂಡಿ ಸಿನಿಮಾ ನಿರ್ಮಾಣ ಮಾಡುತ್ತಿದ್ದು, ಸದ್ಯದಲ್ಲಿಯೇ ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸಿನಿಮಾ ತಂಡ ನೀಡಲಿದೆ.
ಶಿವರಾಜ್ ಕುಮಾರ್ ಸಿನಿಮಾ ವಿಚಾರಕ್ಕೆ ಬರುವುದಾದರೆ ಶಿವಣ್ಣ ಸದ್ಯ ಭೈರಾಗಿ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಜೊತೆಗೆ ವೇದ ಸಿನಿಮಾ ಕೂಡ ಶಿವಣ್ಣ ಕೈಯಲ್ಲಿದೆ. ನಿರ್ದೇಶಕ ಯೋಗರಾಜ್ ಭಟ್ ಜೊತೆ ಮತ್ತೊಂದು ಸಿನಿಮಾ ಶಿವಣ್ಣ ಬಳಿ ಇದೆ. ಇದೀಗ ದಿಲೀಪ್ ಕುಮಾರ್ ಸಿನಿಮಾ ಕೂಡ ಸದ್ದು ಮಾಡುತ್ತಿದೆ. ಶಿವಣ್ಣ ಕೊನೆಯದಾಗಿ ಭಜರಂಗಿ-2 ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು.
ರಿವಿಲ್ ಆಯ್ತು ಬೈರಾಗಿ ಸಿಂಗರ್ ಸೀಕ್ರೆಟ್; ಶಿವಣ್ಣನ ಜೊತೆ ಹಾಡಿದ ಸ್ಟಾರ್ ಯಾರು ಗೊತ್ತಾ?
ಇನ್ನು ನಿರ್ದೇಶಕ ದಿಲೀಪ್ ಕುಮಾರ್ ದಳಪತಿ ವಿಜಯ್ ನಟನೆಯ ಬೀಸ್ಟ್ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದರು. ಈ ಸಿನಿಮಾ ಕೆಜಿಎಫ್-2 ಬಿಡುಗಡೆಗೂ ಒಂದು ದಿನ ಮೊದಲು ರಿಲೀಸ್ ಆಗಿತ್ತು. ಆದರೆ ಕೆಜಿಎಫ್ 2 ಮುಂದೆ ಬೀಸ್ಟ್ ಸಿನಿಮಾ ಮಂಕಾಗಿದ್ದು ಪ್ರೇಕ್ಷಕರನ್ನು ಸೆಳೆಯುವಲ್ಲಿ ವಿಫಲವಾಗಿದೆ. ಇದೀಗ ಶಿವಣ್ಣ ಮತ್ತು ರಜನಿಕಾಂತ್ ಇಬ್ಬರನ್ನೂ ಒಟ್ಟಿಗೆ ತೆರೆಮೇಲೆ ತರುವ ಪ್ರಯತ್ನ ಮಾಡುತ್ತಿದ್ದಾರೆ. ಇಬ್ಬರನ್ನು ಒಂದೇ ಸಿನಿಮಾದಲ್ಲಿ ಕರೆತರುವ ಮೂಲಕ ಯಾವ ರೀತಿಯ ಸಿನಿಮಾ ಮಾಡಲಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ.