ಚಿತ್ರಕ್ಕೆ ಜೂನ್‌ ತಿಂಗಳಿನಿಂದ ಚಿತ್ರೀಕರಣ ಶುರು. ಜಯಣ್ಣ ಕಂಬೈನ್ಸ್‌ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ ಚಿತ್ರವಿದು. ಶಿವರಾಜ್‌ ಕುಮಾರ್‌ ಚಿತ್ರದ ಕತೆ ಕೇಳಿ, ಚಿತ್ರೀಕರಣಕ್ಕೆ ಡೇಟ್‌ ಕೊಟ್ಟನಂತರವೇ ನಿರ್ದೇಶಕ ಹರ್ಷ, ತಮ್ಮಿಬ್ಬರ ಕಾಂಬಿನೇಷನಿನಲ್ಲಿ ಹೊಸ ಸಿನಿಮಾ ಶುರುವಾಗುತ್ತಿರುವ ಕುರಿತು ಅಧಿಕೃತ ಮಾಹಿತಿ ಬಹಿರಂಗ ಪಡಿಸಿದ್ದಾರೆ.

‘ಶಿವಣ್ಣ ಜತೆಗೆ ಮತ್ತೊಂದು ಸಿನಿಮಾ ಮಾಡುತ್ತಿದ್ದೇನೆ ಅಂತ ತುಂಬಾ ಹಿಂದೆಯೇ ಹೇಳಿದ್ದೆ. ಅದು ಮೈ ನೇಮ್‌ ಈಸ್‌ ಆಂಜಿ ಹೆಸರಲ್ಲೇ ಶುರುವಾಗುತ್ತೆ ಅಂತಲೂ ಶಿವಣ್ಣ ಪ್ರಕಟಿಸಿದ್ದರು. ಬೇರೆ ಸಿನಿಮಾಗಳ ಕಾರಣಕ್ಕೆ ಇಲ್ಲಿ ತನಕ ಅದು ತಡವಾಯಿತು. ಈಗ ಅದಕ್ಕೆ ಸಂದರ್ಭ ಬಂದಿದೆ. ಈಗಾಗಲೇ ಮಾತುಕತೆ ಫೈನಲ್‌ ಹಂತಕ್ಕೆ ಬಂದಿವೆ. ನಮ್ಮಿಬ್ಬರ ಹಿಂದಿನ ಸಿನಿಮಾಗಳಿಗೆ ಹೋಲಿಸಿದರೆ, ಇದೊಂದು ಡಿಫರೆಂಟ್‌ ಸಿನಿಮಾ ಆಗಲಿದೆ’ ಎನ್ನುತ್ತಾರೆ ನಿರ್ದೇಶಕ ಹರ್ಷ.

ಕೆಲವರು ಅನಗತ್ಯವಾಗಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಯಶ್‌ ಜತೆಗೆ ಮಾಡಬೇಕಿರುವ ‘ರಾಣಾ’ ಚಿತ್ರವನ್ನೇ ಹರ್ಷ ಈಗ, ಶಿವರಾಜ್‌ ಕುಮಾರ್‌ ಜತೆಗೆ ಮಾಡುತ್ತಿದ್ದಾರೆನ್ನುವ ಮಾತುಗಳು ಕೇಳಿ ಬಂದಿವೆ. ಆದರೆ ಇವೆಲ್ಲ ಸುಳ್ಳು. ಅದೇ ಬೇರೆ ಸಿನಿಮಾ, ಇದೇ ಬೇರೆ ಸಿನಿಮಾ. ಶಿವಣ್ಣ ಜತೆಗೆ ‘ಮೈ ನೇಮ್‌ ಈಸ್‌ ಆಂಜಿ’ ಮಾಡುತ್ತೇನೆ. ಯಶ್‌ ಅವರ ಜತೆಗೆ ರಾಣಾ ಮಾಡುತ್ತೇನೆ- ಹರ್ಷ, ನಿರ್ದೇಶಕ

ಕನ್ನಡದ ಬಹುಬೇಡಿಕೆಯ ನಟಿಯರಲ್ಲೇ ಒಬ್ಬರು ನಾಯಕಿ ಆಗಿ ಆಯ್ಕೆ ಆಗುವ ಸಾಧ್ಯತೆಗಳಿವೆ. ನಿರ್ದೇಶಕ ಹರ್ಷ ಅದೇ ಹುಡುಕಾಟದಲ್ಲಿದ್ದಾರೆ. ಹಾಗೆಯೇ ಯಶ್‌ ಜತೆಗೆ ಫಿಕ್ಸ್‌ ಆಗಿದ್ದ ‘ರಾಣಾ’ ಚಿತ್ರವನ್ನೇ ಶಿವರಾಜ್‌ಕುಮಾರ್‌ ಅವರಿಗೆ ಮಾಡುತ್ತಿದ್ದಾರೆನ್ನುವ ಮಾತುಗಳನ್ನು ಹರ್ಷ, ಸಾರಾಸಗಟಾಗಿ ಅಲ್ಲಗಳೆದಿದ್ದಾರೆ. ಅದೇ ಬೇರೆ ಸಿನಿಮಾ ಇದೇ ಬೇರೆ ಸಿನಿಮಾ ಎಂದು ಸ್ಪಷ್ಟಪಡಿಸಿದ್ದಾರೆ.