ಮೊದಲ ಬಾರಿಗೆ ಸೆಟ್‌ ಖಾಲಿ ಅನಿಸುತ್ತಿದೆ

ನನ್ನ ಸಿನಿಮಾಗಳ ಸೆಟ್‌ನಲ್ಲಿ ಕನಿಷ್ಠ 300 ರಿಂದ 400 ಜನ ಇರುತ್ತಾರೆ. ಅದರಲ್ಲೂ ಭಜರಂಗಿ 2 ಚಿತ್ರಕ್ಕೆ ಪ್ರತಿ ದಿನ 500 ರಿಂದ 600 ಜನ ಸೆಟ್‌ನಲ್ಲಿ ಇರುತ್ತಿದ್ದರು. ಆದರೆ, ಮೊದಲ ಬಾರಿಗೆ ಇಡೀ ಸೆಟ್‌ ಖಾಲಿ ಖಾಲಿ ಅನಿಸುತ್ತಿದೆ. ಅತ್ಯಂತ ಕಡಿಮೆ ಪ್ರಮಾಣದ ಕೆಲಸಗಾರರೊಂದಿಗೆ ಶೂಟಿಂಗ್‌ ನಡೆಯುತ್ತಿದೆ. ಸಾಹಸ ದೃಶ್ಯ ಚಿತ್ರೀಕರಣ ಮಾಡಿಕೊಳ್ಳುತ್ತಿದ್ದರೂ ಜಾಸ್ತಿ ಜನ ಇಲ್ಲ. ಮೊದಲ ಬಾರಿಗೆ ನಾನು ಇಂಥ ಖಾಲಿ ಸೆಟ್‌ನಲ್ಲಿ ಕೆಲಸ ಮಾಡುತ್ತಿರುವುದು ಹೊಸ ಅನುಭವ.

ನಟ ಶಿವರಾಜ್‌ಕುಮಾರ್‌ರನ್ನು ಭೇಟಿಯಾದ ಮಾಜಿ ಕ್ರಿಕೆಟರ್‌ ವೆಂಕಟೇಶ್ ಪ್ರಸಾದ್!

ಹೆದರಬೇಡಿ, ಶೂಟಿಂಗ್‌ ಆರಂಭಿಸಿ

ನಮಗಿಂತ ಮೊದಲು ಶೂಟಿಂಗ್‌ ಆರಂಭಿಸಿ ಧೈರ್ಯ ಕೊಟ್ಟಿದ್ದು ಸುದೀಪ್‌ ಅವರ ಫ್ಯಾಂಟಮ್‌ ಸಿನಿಮಾ. ಅವರು ಪಕ್ಕದ ರಾಜ್ಯದ ಸ್ಟುಡಿಯೋದಲ್ಲಿ ಯಾವುದೇ ತೊಂದರೆ ಆಗದಂತೆ ಶೂಟಿಂಗ್‌ ಮಾಡುತ್ತಿದ್ದಾರೆ. ಅದೇ ಧೈರ್ಯದಲ್ಲಿ ನಾವು ನಮ್ಮ ರಾಜ್ಯದಲ್ಲಿ ಶೂಟಿಂಗ್‌ ಆರಂಭಿಸಿದ್ದೇವೆ. ಈಗ ನಾವು ಐದು ದಿನ ಚಿತ್ರೀಕರಣ ಮುಗಿಸಿ ಬೇರೆ ಲೊಕೇಷನ್‌ ಹುಡುಕಾಟಕ್ಕಾಗಿ ಬ್ರೇಕ್‌ ಕೊಟ್ಟಿದ್ದೇವೆ. ಲಾಕ್‌ಡೌನ್‌ ನಂತರ ಚಿತ್ರೀಕರಣದಲ್ಲಿ ಪಾಲ್ಗೊಂಡ ಮೇಲೆ ಅನಿಸಿದ್ದು, ಯಾವುದೇ ರೀತಿಯಲ್ಲಿ ಭಯ ಇಲ್ಲದೆ ಚಿತ್ರೀಕರಣ ಮಾಡಬಹುದು ಎಂಬುದು. ನಾನು ಕೂಡ ಎಲ್ಲರಲ್ಲೂ ಕೇಳಿಕೊಳ್ಳುವುದು ಇಷ್ಟೆ, ಹೆದರಿಕೆ ಬೇಡ. ಸ್ವಲ್ಪ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಬನ್ನಿ, ಶೂಟಿಂಗ್‌ ಕೆಲಸಗಳನ್ನು ಆರಂಭಿಸೋಣ.

ಶಿವಣ್ಣನ ಬೆಂಬಲ ಮತ್ತು ಅವರು ಕೊಟ್ಟಧೈರ್ಯದಿಂದಲೇ ನಾವು ಶೂಟಿಂಗ್‌ಗೆ ಹೊರಡುವಂತಾಗಿದೆ. ಯಾವುದೇ ಭಯ ಇಲ್ಲದೆ ಶೂಟಿಂಗ್‌ ಮಾಡುತ್ತಿದ್ದೇವೆ. ವಿಶೇಷ ಅಂದರೆ ಈ ಸಂಕಷ್ಟದಲ್ಲೂ ನಾವು ಸಾಹಸ ದೃಶ್ಯಗಳನ್ನು ಚಿತ್ರೀಕರಣ ಮಾಡುತ್ತಿದ್ದೇವೆ.-ಹರ್ಷ, ನಿರ್ದೇಶಕ

ಸೆಟ್‌ನಲ್ಲಿ ಹೆಚ್ಚುವರಿ ಸೌಲಭ್ಯಗಳು

ಪ್ರತಿದಿನ ಎರಡು ಗಂಟೆಗೆ ಒಮ್ಮೆ ಟೆಂಪರೇಚರ್‌ ಚೆಕ್‌ ಮಾಡಿಕೊಳ್ಳುತ್ತಿದ್ದೇವೆ. ಕಲಾವಿದರು ಸೇರಿದಂತೆ ಎಲ್ಲರೂ ಕೈಗೆ ಗ್ಲೌಸ್‌, ಮಾಸ್ಕ್‌ ಹಾಕಿಕೊಳ್ಳುತ್ತಿದ್ದೇವೆ. ಕಲಾವಿದರು ಕ್ಯಾಮೆರಾ ಮುಂದೆ ಬಂದಾಗ ಮಾತ್ರ ಮಾಸ್ಕ್‌ಗಳನ್ನು ತೆಗೆಯುತ್ತಿದ್ದೇವೆ. ಪ್ರತಿ ಗಂಟೆಗೆ ಒಮ್ಮೆ ಸ್ಯಾನಿಟೈಸರ್‌ ಬಳಸಿ ಸ್ವಚ್ಛಗೊಳಿಸಲಾಗುತ್ತಿದೆ. ಸೆಟ್‌ನಲ್ಲಿ ಶುಂಠಿ ಟೀ, ಕಷಾಯ ಇದೆ. ನಿರ್ಮಾಪಕ ಜಯಣ್ಣ ಹೆಚ್ಚುವರಿಗೆ ಜವಾಬ್ದಾರಿ ತೆಗೆದುಕೊಂಡು ಯಾರಿಗೂ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುತ್ತಿದ್ದಾರೆ. ನಿರ್ಮಾಪಕರ ಧೈರ್ಯ ನಾವು ಮೆಚ್ಚಬೇಕು.

ಚಿತ್ರರಂಗದಿಂದ ಸಿಎಂ ಬಿಎಸ್‌ವೈ ಭೇಟಿ;ನಿನ್ನೆ ಶಿವರಾಜ್‌ ಕುಮಾರ್‌-ಸಿ.ಟಿ. ರವಿ ನಡುವೆ ಮಾತುಕತೆ!

ಹತ್ತು ದಿನ ಶೂಟಿಂಗ್‌ ಇದೆ

ಈಗ ಐದು ದಿನ ಶೂಟಿಂಗ್‌ ಮುಗಿಸಿ ಬ್ರೇಕ್‌ ಕೊಟ್ಟಿದ್ದೇವೆ. ಮತ್ತೆ ಮಂಗಳವಾರದಿಂದ (ಆ.25) ಚಿತ್ರೀಕರಣ ಆರಂಭಿಸುತ್ತಿದ್ದೇವೆ. ಕಡಿಮೆ ದಿನಗಳ ಶೂಟಿಂಗ್‌ ಪ್ಲಾನ್‌ ಮಾಡಿಕೊಂಡು ಕೆಲಸ ನಡೆಯುತ್ತಿದೆ. ಇನ್ನೂ 10 ರಿಂದ 12 ದಿನ ಶೂಟಿಂಗ್‌ ಬಾಕಿ ಇದೆ.