ನಟ ದರ್ಶನ್‌ ಪ್ರಕರಣದ ಬಗ್ಗೆ ಮೊದಲ ಬಾರಿಗೆ ನಟ ರಮೇಶ್‌ ಅರವಿಂದ್‌ ಮಾತನಾಡಿದ್ದಾರೆ. ದರ್ಶನ್‌ ಮಾಡಿರುವ ಕೃತ್ಯ ತಪ್ಪು ಎಂದಿರುವ ಅವರು, ಕಾನೂನು ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ. ದರ್ಶನ್‌ ಮೂರು ವಿಧಗಳಲ್ಲಿ ಇದ್ದಾರೆ ಎಂದು ವಿಶ್ಲೇಷಿಸಿರುವ ಅವರು, ನಾಳೆಯ ದರ್ಶನ್‌ ಹೇಗಿರಬೇಕು ಎಂದು ಹೇಳಿದ್ದಾರೆ.

ಬೆಂಗಳೂರು (ಸೆ.10): ಉಗುರಲ್ಲಿ ಹೋಗುವ ಕೆಲಸಕ್ಕೆ ಕೊಡಲಿ ತೆಗೆದುಕೊಂಡಂತಾಗಿದೆ ನಟ ದರ್ಶನ್‌ ತೂಗುದೀಪ ಪರಿಸ್ಥಿತಿ. ರೇಣುಕಾಸ್ವಾಮಿ ವಿಚಾರದಲ್ಲಿ ಒಂದು ಸಣ್ಣ ಪೊಲೀಸ್‌ ಕಂಪ್ಲೇಂಟ್‌ ಕೊಟ್ಟಿದ್ದರೆ, ಮುಗಿದು ಹೋಗುತ್ತಿತ್ತು. ಪೌರುಷ ತೋರಿಸಲು ಹೋಗಿ, ಕೊಲೆ ಕೇಸ್‌ನಲ್ಲಿ ಇಂದು ಬಳ್ಳಾರಿ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾರೆ. ದರ್ಶನ್‌ ಪರ ವಿರೋಧವಾಗಿ ಸಾಕಷ್ಟು ಮಂದಿ ಮಾತನಾಡಿದ್ದಾರೆ. ಆದರೆ, ಸ್ಯಾಂಡಲ್‌ವುಡ್‌ನ ಹೆಚ್ಚಿನ ನಟ ನಟಿಯರು ದರ್ಶನ್‌ ಪರವಾಗಿಯೇ ಮಾತನಾಡಿದ್ದು ಕಂಡಿದೆ. ಕೆಲವು ಹಿರಿಯ ನಟರು, ಕಾನೂನು ರೀತಿ ಏನು ಕ್ರಮವಾಗಲಿದೆಯೋ ಅದು ಆಗಲಿ. ದರ್ಶನ್‌ ನಿರಪರಾಧಿಯಾಗಿ ಬಂದರೆ ಒಳ್ಳೆಯದು ಎಂದು ಹೇಳಿದ್ದರು. ಇತ್ತೀಚೆಗೆ ಮಾತನಾಡಿದ್ದ ನಟ ಪ್ರೇಮ್‌ ಅಂತೂ, ರೇಣುಕಾಸ್ವಾಮಿ ಮಾಡಿರೋದು ತಪ್ಪಲ್ಲವೇ ಎಂದು ಕೇಳಿದ್ದರು. ಆದರೆ, ಇಲ್ಲಿ ತಿಳಿಯಬೇಕಾದ ವಿಚಾರವೇನೆಂದರೆ, ರೇಣುಕಾಸ್ವಾಮಿ ಮಾಡಿದ್ದು ತಪ್ಪೋ-ಅಲ್ಲವೋ ಎಂದು ನಿರ್ಧಾರ ಮಾಡಲು ಆತ ಈ ಭೂಮಿಯ ಮೇಲಿಲ್ಲ. ದರ್ಶನ್‌ ಗ್ಯಾಂಗ್‌ ಆತನನ್ನು ಕೊಲ್ಲುವ ಮೂಲಕ ಕಾನೂನು ಉಲ್ಲಂಘನೆ ಮಾಡಿದೆ. ದರ್ಶನ್‌ ಮಾಡಿರುವ ಕೃತ್ಯದ ಬಗ್ಗೆ ನಟ ರಮೇಶ್‌ ಅರವಿಂದ್ ಇದೇ ಮೊದಲ ಬಾರಿಗೆ ಮಾತನಾಡಿದ್ದಾರೆ.

ತಮ್ಮ 60ನೇ ವರ್ಷದ ಜನ್ಮದಿನದಂದು ರಮೇಶ್‌ ಅರವಿಂದ್‌, ಸ್ಯಾಂಡಲ್‌ವುಡ್‌ನ ಪ್ರಮುಖ ವಿಚಾರದ ಬಗ್ಗೆ ಮಾತನಾಡಿದ್ದಾರೆ. 'ದರ್ಶನ್‌ ಬಗ್ಗೆ ನಾನು ಇಷ್ಟು ದಿನದವರೆಗೂ ಮಾತನಾಡಿರಲಿಲ್ಲ. ಎಲ್ಲರೂ ಇಲ್ಲಿ ಇರುವ ಕಾರಣವಾಗಿ ನಾನು ಮಾತನಾಡುತ್ತೇನೆ. ನಾನು ಸಾಮಾನ್ಯವಾಗಿ ಇಂಥ ವಿಚಾರಗಳ ಬಗ್ಗೆ ಎಲ್ಲಿಯೂ ಮಾತನಾಡೋದಕ್ಕೆ ಹೋಗೋದಿಲ್ಲ. ಬಟ್‌ ಆ ವಿಚಾರ ಹಾಗಿರಲಿ. ಇಲ್ಲಿ ಒಬ್ಬ ದರ್ಶನ್‌ ಇಲ್ಲ. ಒಟ್ಟು ಮೂರು ದರ್ಶನ್‌ ಇದ್ದಾರೆ.ಒಬ್ಬರು ನಿನ್ನೆಯ ದರ್ಶನ್‌. ನಮಗೆ ಬಹಳ ಮಜಾ ಕೊಟ್ಟಂತ ಸೂಪರ್‌ಸ್ಟಾರ್‌ ಅವರು. ಅವರ ಚಿತ್ರಗಳು, ಫೆಂಟಾಸ್ಟಿಕ್‌ ದರ್ಶನ್‌. ವೀಕೆಂಡ್‌ ವಿತ್‌ ರಮೇಶ್‌ ಚೇರ್‌ನಲ್ಲಿ ಕುಳಿತ ದರ್ಶನ್‌ ಅದು ನಿನ್ನೆಯ ದರ್ಶನ್‌. ಹಾಗೆ ಇವತ್ತಿನ ದರ್ಶನ್‌ ಒಬ್ಬರಿದ್ದಾರೆ. ಅವರಿಂದ ನಮಗೆಲ್ಲರಿಗೂ ಆಗಿರೋ ಘಟನೆಯಿಂದ ಸ್ವಲ್ಪ ಬೇಜಾರಾಗಿದೆ. ಒಂದು ದೊಡ್ಡ ತಪ್ಪಾಗಿದೆ. ಆ ತಪ್ಪಿಗೆ ಆಗಬೇಕಾದ ಶಿಕ್ಷೆ ಆಗಲಿದೆ. ಆ ತಪ್ಪನ್ನು ಯಾರು ಮಾಡಿದ್ದಾರೋ ಅವರಿಗೆ ಶಿಕ್ಷೆ ಆಗಲೇಬೇಕು. ಆ ಕೆಲಸವನ್ನು ಕಾನೂನು ಮಾಡಲಿದೆ. ಬಟ್‌ ಇದೆಲ್ಲದಕ್ಕಿಂತ ಇನ್ನೊಬ್ಬ ದರ್ಶನ್‌ ಇದ್ದಾರೆ. ಅವರು ನಾಳೆಯ ದರ್ಶನ್‌. ಆ ನಾಳೆಯ ದರ್ಶನ್‌ ಇದ್ದಾರಲ್ಲ. ಈ ಸಮಸ್ಯೆಯಿಂದ ಹೊರಬಂದು, ಆಗಿರುವ ತಪ್ಪಿಗೆ ಶಿಕ್ಷೆ ಪಡೆದು ಹೊರಬಂದಾಗ, ನಾಳೆಯ ದರ್ಶನ್‌ ಏನ್‌ ಮಾಡ್ತಾರೆ? ಅನ್ನೋದೇ ತುಂಬಾ ಇಂಟ್ರಸ್ಟಿಂಗ್‌ ವಿಚಾರವೀಗ' ಎಂದು ಹೇಳಿದ್ದಾರೆ.

BBK 11 : ಹೊಸ ದಶಕ, ಹೊಸ ಆಟ, ಹೊಸ ಅಧ್ಯಾಯ, ಕಿಚ್ಚ ಸುದೀಪ್‌ ಇಲ್ಲದೇ ಬಂತು ಮೊದಲ ಪ್ರೋಮೋ!

ರಮೇಶ್‌ ಅರವಿಂದ್ ಅವರು ಆಡಿರುವ ಮಾತುಗಳು ಅಪಾ ಮೆಚ್ಚುಗೆ ವ್ಯಕ್ತವಾಗಿದೆ. ಹಿರಿಯ ನಟರಾದಂಥವರು ಇವರಷ್ಟು ಸೂಕ್ಷ್ಮವಾಗಿ ಮಾತನಾಡವುದಕ್ಕೆ ಕಲಿಯಬೇಕು ಎಂದು ನೆಟ್ಟಿಗರು ಹೇಳಿದ್ದಾರೆ. 'ಸೂಪರ್ ಸರ್. ಸುಮ್ನೆ ಹೇಳತಾರ ರಮೇಶ್ ಸರ್ ದೊಡ್ಡ ಕಲಾವಿದ ಅಂತ. ಸೂಪರ್ ಸರ್..' ಎಂದು ವ್ಯಕ್ತಿಯೊಬ್ಬರು ಕಾಮೆಂಟ್‌ ಮಾಡಿದ್ದಾರೆ.

'ನಿನ್ನ ಫೋಟೋ ನೋಡಿಕೊಂಡು ಹಸ್ತಮೈಥುನ ಮಾಡಿಕೊಂಡೆ..' ಪವಿತ್ರಾ ಗೌಡಗೆ ಸಂದೇಶ ಕಳಿಸಿದ್ದ ರೇಣುಕಾಸ್ವಾಮಿ!

ಇನ್ನು ದರ್ಶನ್‌ ಅವರ ನ್ಯಾಯಾಂಗ ಬಂಧನ ಇನ್ನೂ ಮೂರು ದಿನ ವಿಸತರಣೆಯಾಗಿದ್ದು ಸೆ. 12ರವರೆಗೂ ಅವರು ಬಳ್ಳಾರಿ ಜೈಲಿನಲ್ಲಿಯೇ ಇರಲಿದ್ದಾರೆ, ಈಗಾಗಲೇ ಪ್ರಕರಣದಲ್ಲಿ 3991 ಪುಟಗಳ ದೊಡ್ಡ ಚಾರ್ಜ್‌ಶೀಟ್‌ಅನ್ನು ಕೋರ್ಟ್‌ಗೆ ಸಲ್ಲಿಕೆ ಮಾಡಲಾಗಿದೆ. ಪ್ರಕರಣದಲ್ಲಿ ಎಲ್ಲಾ 17 ಮಂದಿ ಆರೋಪಿಗಳ ಪರ ವಕೀಲರಿಗೂ ಚಾರ್ಜ್‌ಶೀಟ್‌ ನೀಡಲಾಗಿದೆ. ಇದರಲ್ಲಿ ದರ್ಶನ್‌, ಪವಿತ್ರಾ ಗೌಡ ಸೇರಿಂದತೆ ಎಲ್ಲಾ ಆರೋಪಿಗಳು ನೀಡಿರುವ ಸ್ವ ಇಚ್ಛಾ ಹೇಳಿಕೆ ಕೂಡ ದಾಖಲಾಗಿದೆ.

View post on Instagram