Asianet Suvarna News Asianet Suvarna News

'ನಿನ್ನ ಫೋಟೋ ನೋಡಿಕೊಂಡು ಹಸ್ತಮೈಥುನ ಮಾಡಿಕೊಂಡೆ..' ಪವಿತ್ರಾ ಗೌಡಗೆ ಸಂದೇಶ ಕಳಿಸಿದ್ದ ರೇಣುಕಾಸ್ವಾಮಿ!

ಚಿತ್ರದುರ್ಗದ ರೇಣುಕಾಸ್ವಾಮಿ ನಟಿ ಪವಿತ್ರಾ ಗೌಡಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದ ಎಂದು ಆರೋಪಪಟ್ಟಿಯಲ್ಲಿ ಬಹಿರಂಗವಾಗಿದೆ. ರೇಣುಕಾಸ್ವಾಮಿ ತನ್ನ ನಗ್ನ ವಿಡಿಯೋಗಳು ಮತ್ತು ಫೋಟೋಗಳನ್ನು ಕಳುಹಿಸುವುದರ ಜೊತೆಗೆ ಲಿವ್-ಇನ್ ರಿಲೇಷನ್‌ಶಿಪ್‌ಗೆ ಪ್ರಸ್ತಾಪಿಸಿದ್ದ ಎಂದು ಆರೋಪಿಸಲಾಗಿದೆ.

Renukaswamy instagram messages to pavithra gowda Details san
Author
First Published Sep 6, 2024, 10:53 AM IST | Last Updated Sep 6, 2024, 10:53 AM IST

ಬೆಂಗಳೂರು (ಸೆ.6): 'ನನ್ನ ಜೊತೆ ಲಿವ್‌ಇನ್‌ ರಿಲೇಷನ್‌ಷಿಪ್‌ಗೆ ಒಪ್ಪು. ನಿನಗೆ ಪ್ರತಿ ತಿಂಗಳೂ 10 ಸಾವಿರ ರೂಪಾಯಿ ಕೊಡುತ್ತೇನೆ..' ಹೀಗಂತ ಸತತವಾಗಿ ಪವಿತ್ರಾ ಗೌಡಗೆ ಚಿತ್ರದುರ್ಗದ ರೇಣುಕಾಸ್ವಾಮಿ ಸಂದೇಶ ರವಾನಿಸುತ್ತಿದ್ದ ಎನ್ನುವುದು ಆರೋಪಪಟ್ಟಿಯಲ್ಲಿ ಬಹಿರಂಗವಾಗಿದೆ. ಆಕೆಗೆ ಇನ್ಸ್‌ಟಾಗ್ರಾಮ್‌ ಮೆಸೇಜ್‌ಗಳ ಮೂಲಕ ತನ್ನ ಮರ್ಮಾಂಗದ ಫೋಟೋ ಮಾತ್ರವಲ್ಲದೆ, ತನ್ನದೇ ನಗ್ನ ವಿಡಿಯೋ ಸಹ ಕಳಿಸುತ್ತಿದ್ದ. ಅಷ್ಟೇ ಅಲ್ಲದೆ, ನಿನ್ನ ಫೋಟೋ ನೋಡಿಕೊಂಡು ನಾನು ಹಸ್ತಮೈಥುನ ಮಾಡಿಕೊಂಡೆ ಎಂಬಂಥ ಅಶ್ಲೀಲ ಸಂದೇಶವನ್ನು ಸತತವಾಗಿ ರವಾನೆ ಮಾಡುತ್ತಿದ್ದ ಎಂದು ಆರೋಪಪಟ್ಟಿಯಲ್ಲಿ ದಾಖಲು ಮಾಡಲಾಗಿದೆ.
ರೇಣುಕಾಸ್ವಾಮಿ ಹತ್ಯೆ ಬಳಿಕ ಆತ ಕಳಿಸಿದ್ದ ಅಶ್ಲೀಲ ಸಂದೇಶ ಹಾಗೂ ವಿಡಿಯೋಗಳನ್ನು ಪವಿತ್ರಾಗೌಡ ಅಳಿಸಿಹಾಕಿದ್ದಳು. ಆದರೆ, ಮೊಬೈಲ್‌ ರೀಟ್ರೀವ್‌ ಮೂಲಕ ರೇಣುಕಾಸ್ವಾಮಿ ಸಂದೇಶಗಳ 17 ಸ್ಕ್ರೀನ್‌ಶಾಟ್‌ಗಳು ಹಾಗೂ ವಿಡಿಯೋಗಳನ್ನು ಪೊಲೀಸರು ಸಂಗ್ರಹಿಸಿದ್ದಾರೆ. ಹಾಗೆಯೇ ಆರೋಪಪಟ್ಟಿಯಲ್ಲಿ ಮೃತನ ಅಶ್ಲೀಲ ಸಂದೇಶಗಳ ಸ್ಕ್ರೀನ್‌ಶಾಟ್‌ ಪ್ರತಿಯನ್ನೂ ಪೊಲೀಸರು ಲಗತ್ತಿಸಿದ್ದಾರೆ.

ಕಳೆದ ಫೆಬ್ರವರಿ ತಿಂಗಳಿನಿಂದ ಪವಿತ್ರಾಗೌಡಗೆ  ಇನ್ಸ್‌ಟಾಗ್ರಾಮ್‌ನಲ್ಲಿ ಗೌತಮ್‌ ಹೆಸರಿನ ನಕಲಿ ಖಾತೆಯಿಂದ ನಿರಂತರವಾಗಿ ರೇಣುಕಾಸ್ವಾಮಿ ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದ.  ಇದರಿಂದ ರೋಸಿಹೋದ ಪವಿತ್ರಾ, ಕೊನೆಗೆ ರೇಣುಕಾಸ್ವಾಮಿಗೆ ಗತಿ ಕಾಣಿಸಬೇಕು ಎಂದು ನಿರ್ಧಾರ ಮಾಡಿದ್ದಳು. ಈ ಅಶ್ಲೀಲ ಸಂದೇಶಗಳ ಸಂಗತಿಯನ್ನು ದರ್ಶನ್‌, ಆಪ್ತರಾದ ಪವನ್‌ ಹಾಗೂ ವಿನಯ್‌ಗೆ ಪವಿತ್ರಾ ಹೇಳಿದ್ದಳು. ಕೊನೆಗೆ ರೇಣುಕಾನನ್ನು ಪತ್ತೆ ಹಚ್ಚಿ ಕರೆತಂದು ಪಟ್ಟಣಗೆರೆ ಶೆಡ್‌ನಲ್ಲಿ ದರ್ಶನ್‌, ಪವಿತ್ರಾ ಹಾಗೂ ಇತರರು ಕೊಂದಿದ್ದರು.

ತಿಂಗಳಿಗೆ 10 ಸಾವಿರ ಕೊಡುವೆ ಎಂದಿದ್ದ ರೇಣುಕಾ: 'ನಿನ್ನ ಸೌಂದರ್ಯಕ್ಕೆ ನಾನು ಸೋತು ಹೋಗಿದ್ದೇನೆ..', 'ನಿನ್ನ ಜೊತೆ ನಾನು ಮಾತನಾಡಬೇಕು ಕಣೆ..', 'ನಿನ್ನಷ್ಟು ರೂಪಸಿ ಯಾರೂ ಇಲ್ಲ ಬಿಡು..', 'ನಿನ್ನ ಫೋಟೋ ನೋಡಿಕೊಂಡೇ ನಾನು ಹಸ್ತಮೈಥುನ ಮಾಡಿಕೊಂಡೆ ಕಣೆ.', 'ನೀನು ನೋಡುತ್ತೀಯಾ ನನ್ನ **..' ಎಂದು ಹೇಳಿ ಮರ್ಮಾಂಗದ ಫೋಟೋ ಹಾಗೂ ವಿಡಿಯೋಗಳನ್ನು ರೇಣುಕಾಸ್ವಾಮಿ ಕಳುಹಿಸಿದ್ದಾನೆ.

39 ಗಾಯ, ಕಾಟೇರನ ರಕ್ಕಸ ಕ್ರೌರ್ಯ: 6 ಗಂಟೆಗಳ ನರಕ ಯಾತನೆ: FSL ರಿಪೋರ್ಟ್ ತೆರೆದಿಟ್ಟ ಸತ್ಯವೇನು..?

ಅಲ್ಲದೆ, 'ನನ್ನ ಜೊತೆ ಲಿವಿಂಗ್‌ ಇನ್‌ ರಿಲೇಷನ್‌ಷಿಪ್‌ನಲ್ಲಿರು. ಪ್ರತಿ ತಿಂಗಳು 10 ಸಾವಿರ ರೂಪಾಯಿ ಕೊಡುತ್ತೇನೆ. ಬೆಂಗಳೂರಿಗೆ ನಾನು ಪ್ರತಿ ತಿಂಗಳು ಬರುತ್ತೇನೆ..' 'ನಿನ್ನ ಸೌಂದರ್ಯಕ್ಕೆ ಫಿದಾ ಆಗಿದ್ದೇನೆ..', 'ನಿನ್ನ ಜೊತೆ ಯಾವಾಗ ಸೇರುತ್ತೇನೋ..', ನೀನು ಫೋಟೋದಲ್ಲಿ ನೋಡೋದಕ್ಕೆ ಹೀಗಿದ್ದೀಯ, ಇನ್ನೂ..' ಹೀಗೆ ಪವಿತ್ರಾ ಗೌಡಗೆ ನಿರಂತರವಾಗಿ ರೇಣುಕಾಸ್ವಾಮಿ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದ ಎಂದು ಆರೋಪಪಟ್ಟಿಯಲ್ಲಿ ವಿವರಿಸಲಾಗಿದೆ.

ಗೊತ್ತೆ ಇಲ್ಲದ ರೇಣುಕಾಸ್ವಾಮಿಯನ್ನು ದರ್ಶನ್ ಗ್ಯಾಂಗ್ ಪತ್ತೆ ಹಚ್ಚಿದ್ದು ಹೇಗೆ? ಸಿನಿಮೀಯ ಕಾರ್ಯಾಚರಣೆ!

Latest Videos
Follow Us:
Download App:
  • android
  • ios