ನಟ ರಕ್ಷಿತ್ ಶೆಟ್ಟಿಗೆ ಬಂಧನ ಭೀತಿ, ಜಾಮೀನಿಗಾಗಿ ಸೆಷನ್ಸ್ ಕೋರ್ಟ್ ಮೊರೆ
ನಟ,ನಿರ್ದೇಶಕ ರಕ್ಷಿತ್ ಶೆಟ್ಟಿಗೆ ಬಂಧನದ ಭೀತಿ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ರಕ್ಷಿತ್ ಶೆಟ್ಟಿ ಜಾಮೀನಿಗಾಗಿ ಸೆಷನ್ಸ್ ಕೋರ್ಟ್ ಮೊರೆ ಹೋಗಿದ್ದಾರೆ.
ಬೆಂಗಳೂರು (ಜು.20): ನಟ,ನಿರ್ದೇಶಕ ರಕ್ಷಿತ್ ಶೆಟ್ಟಿಗೆ ಬಂಧನದ ಭೀತಿ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ರಕ್ಷಿತ್ ಶೆಟ್ಟಿ ಜಾಮೀನಿಗಾಗಿ ಸೆಷನ್ಸ್ ಕೋರ್ಟ್ ಮೊರೆ ಹೋಗಿದ್ದಾರೆ. ಸಿಆರ್ಪಿಸಿ 438 ಅಡಿಯಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದು, ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡಿರುವ ಸಿಸಿಎಚ್ 61 ಕೋರ್ಟ್ ಮುಂದಿನ ವಿಚಾರಣೆಯನ್ನು ಜುಲೈ 24ಕ್ಕೆ ಮುಂದೂಡಿದೆ.
ರಕ್ಷಿತ್ ಶೆಟ್ಟಿ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಸಮಯ ಕೋರಿದ್ದು, ಸರ್ಕಾರದ ಪಿಪಿಯಿಂದ ನ್ಯಾಯಾಲಯಕ್ಕೆ ಸಮಯ ಕೋರಲಾಗಿದೆ. ಮನವಿ ಪುರಸ್ಕರಿದ ನ್ಯಾಯಧೀಶರಾದ ಪ್ರಕಾಶ್ ಸಂಗಪ್ಪ ಹೆಚ್ , ಅರ್ಜಿಯ ವಿಚಾರಣೆ ಬುಧವಾರಕ್ಕೆ ಮುಂದೂಡಿದ್ದಾರೆ.
ಅನಂತ್-ರಾಧಿಕಾ ಅದ್ಧೂರಿಯಲ್ಲಅತೀ ಕಂಜೂಸ್ ಮದುವೆ, ಇದು ನಿಜ ಅಂಬಾನಿ ಜಿಪುಣರಲ್ಲೇ ಜಿಪುಣ, ಕಾರಣಗಳು ಹಲವು!
ಕಾಪಿ ರೈಟ್ಸ್ ಉಲ್ಲಂಘನೆ ಆರೋಪದಲ್ಲಿ ಆರೋಪಿ ರಕ್ಷಿತ್ ಶೆಟ್ಟಿ ಸಿಲುಕಿದ್ದು, ನ್ಯಾಯ ಎಲ್ಲಿದೆ ಸಾಂಗ್ ಕಾಪಿ ರೈಟ್ಸ್ ಉಲ್ಲಂಘನೆಯ ಆರೋಪ ಕೇಳಿ ಬಂದಿದೆ. ಬ್ಯಾಚುಲರ್ಸ್ ಪಾರ್ಟಿ ಸಿನಿಮಾಗಾಗಿ ನ್ಯಾಯ ಎಲ್ಲಿದೆ ಸಾಂಗ್ ಅನಧಿಕೃತವಾಗಿ ಬಳಕೆ ಮಾಡಲಾಗಿದೆ ಎಂದು ಆರೋಪವಿದೆ. ರಕ್ಷಿತ್ ಶೆಟ್ಟಿ ಒಡೆತನದ ಪರಂವಾ ಸ್ಟುಡಿಯೋಸ್ ನಿರ್ಮಾಣ ಮಾಡಿರುವ ‘ಬ್ಯಾಚುಲರ್ ಪಾರ್ಟಿ’ ಸಿನಿಮಾದಲ್ಲಿ ‘ನ್ಯಾಯ ಎಲ್ಲಿದೆ’, ‘ಒಮ್ಮೆ ನಿನ್ನನ್ನು..’ ಹಾಡುಗಳ ಬಳಕೆ. ಅನುಮತಿ ಪಡೆಯದೆ ,ಕಾನೂನು ಬಾಹಿರವಾಗಿ ಬಳಕೆ ಮಾಡಿಕೊಂಡಿದ್ದಾರೆಂದು ಆರೋಪಿಸಿ ಕೇಸ್ ದಾಖಲಾಗಿದೆ.
ವಿಶ್ವದ ಅತಿದೊಡ್ಡ ಮಾವು ಬೆಳೆಗಾರ ಮುಕೇಶ್ ಅಂಬಾನಿ, ಇದರ ಹಿಂದಿದೆ ಒಂದು ರೋಚಕ ಕಥೆ!
ಈ ಸಂಬಂಧ MRT ಮ್ಯೂಸಿಕ್ ಸಂಸ್ಥೆಯ ನವೀನ್ ಕುಮಾರ್ ದೂರು ನೀಡಿದ್ದರು. ಯಶವಂತಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಆಗಿತ್ತು. ಕಾಪಿ ರೈಟ್ಸ್ ಆ್ಯಕ್ಸ್ ಸೆ. 63 ರಡಿ ಅನುಮತಿ ಇಲ್ಲದೇ ಹಾಡು ಬಳಕೆ ಮಾಡಿದ ಆರೋಪದಲ್ಲಿ ನಟ ರಕ್ಷಿತ್ ಶೆಟ್ಟಿ ವಿರುದ್ಧ ಕೇಸ್ ದಾಖಲು ಮಾಡಲಾಗಿತ್ತು.
ರಕ್ಷಿತ್ ಶೆಟ್ಟಿ ಅರ್ಪಿಸುವ ಏಕಂ ಸೀರೀಸ್ ಸ್ಟ್ರೀಮಿಂಗ್:
ರಕ್ಷಿತ್ ಶೆಟ್ಟಿ ಅವರ ಪರಂವಃ ಸ್ಟುಡಿಯೋಸ್ ಹಾಗೂ ಜರ್ನಿಮ್ಯಾನ್ ಫಿಲಂಸ್ ಜಂಟಿಯಾಗಿ ನಿರ್ಮಿಸಿರುವ ಕನ್ನಡ ವೆಬ್‌ಸರಣಿ ‘ಏಕಂ’ ekamtheseries.com ವೆಬ್‌ಸೈಟ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಆಸಕ್ತರು 149 ರೂಪಾಯಿ ನೀಡಿ ಈ ವೆಬ್‌ಸೈಟ್ ಚಂದಾದಾರಾಗಬಹುದು. ಒಂದು ಸಿನಿಮಾ ಟಿಕೆಟ್ ದರದಲ್ಲಿ ಏಕಂನ ಎಲ್ಲಾ ಸರಣಿಗಳನ್ನು ವೀಕ್ಷಿಸುವ ಅವಕಾಶದ ಜೊತೆಗೆ ಇತರ ಕೆಲವು ಸೌಲಭ್ಯಗಳೂ ಇಲ್ಲಿ ಸಿಗುತ್ತವೆ.
ಸುಮಂತ್ ಭಟ್ ಮತ್ತು ಸಂದೀಪ್ ಪಿ ಎಸ್ ಈ ಸೀರೀಸ್ ಮೂಲಕ ಭಿನ್ನ ಬಗೆಯಲ್ಲಿ ಇದರಲ್ಲಿ ಕತೆ ಹೇಳುವ ಪ್ರಯತ್ನ ಮಾಡಿದ್ದಾರೆ. ರಾಜ್ ಬಿ ಶೆಟ್ಟಿ, ಪ್ರಕಾಶ್ ರಾಜ್ ಮೊದಲಾದವರು ನಟಿಸಿರುವ ‘ಏಕಂ’ ಬಗ್ಗೆ ಅಲ್ಲಲ್ಲಿ ಮೆಚ್ಚುಗೆಯ ಮಾತು ಕೇಳಿಬರುತ್ತಿದೆ.
‘ನಾನು ಯಾರು? ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಪ್ರಯತ್ನದಲ್ಲಿರುವವರಿಗೆ ಏಕಂ ಹಾದಿ ತೋರಬಹುದು’ ಎಂದು ಈ ಸರಣಿಯ ಬಗ್ಗೆ ರಕ್ಷಿತ್ ಶೆಟ್ಟಿ ಹೇಳಿದ್ದಾರೆ.