Asianet Suvarna News Asianet Suvarna News

ಮೇಕಪ್‌ ಇಲ್ಲದೆ ಜನ ನನ್ನನ್ನು ಗುರುತಿಸುತ್ತಿರಲಿಲ್ಲ: ರಾಜವರ್ಧನ್

ಬಿಚ್ಚುಗುತ್ತಿ ಚಿತ್ರದ ಪಾತ್ರ ವೀಕ್ಷಕರ ಮೇಲೆ ಎಷ್ಟು ಪರಿಣಾಮ ಬೀರಿದೆ ಹಾಗೂ ಯಾವ ಕಾರಣಕ್ಕೆ ಕಮರ್ಷಿಯಲ್ ಸಿನಿಮಾ ಒಪ್ಪಿಕೊಂಡಿರುವುದು ಎಂಬುದನ್ನು ರಿವೀಲ್ ಮಾಡಿದ ರಾಜವರ್ಧನ್. 
 

Actor Rajavardhan talks about Bicchugatti look impact in film journey vcs
Author
Bangalore, First Published Sep 23, 2021, 4:44 PM IST
  • Facebook
  • Twitter
  • Whatsapp

ಕನ್ನಡ ಚಿತ್ರರಂಗದ ಹಿರಿಯ ಕಲಾವಿದ ಡಿಂಗ್ರಿ ನಾಗರಾಜ್ ಅವರ ಪುತ್ರ ರಾಜವರ್ಧನ್ 'ಬಿಚ್ಚುಗುತ್ತಿ' ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಸಿನಿಮಾ ಸೂಪರ್ ಹಿಟ್ ಆದರೂ, ರಾಜವರ್ಧನ್‌ ಅವರಿಗೆ ಕೊಟ್ಟ ಕ್ರೆಡಿಟ್ ಬೇರೆಯೇ ಆಗಿತ್ತು. ಪಾತ್ರದ ಲುಕ್‌ ಹೊರತು ಪಡಿಸಿ ರಾಜವರ್ಧನ್‌ ಅಭಿಮಾನಿಗಳು ಗುರುತು ಹಿಡಿಯುತ್ತಿರಲಿಲ್ಲ ಎಂದು ಹೇಳಿದ್ದಾರೆ.

'ಬಿಚ್ಚುಗತ್ತಿ' ನಂತರ ಮಾಸ್‌ ಎಂಟ್ರಿ ಕೊಟ್ಟ ರಾಜ್‌ವರ್ಧನ್‌!

'ಬಿಚ್ಚುಗುತ್ತಿಯಿಂದ ನನಗೆ ಕೊಂಚ ಬದಲಾವಣೆ ಬೇಕಿದೆ. ನಾನು ಸಿನಿಮಾದಲ್ಲಿ ಕಾಣಿಸಿಕೊಂಡ ಪಾತ್ರಕ್ಕೆ ಜನರು ನನ್ನನ್ನು ಹೊಗಳುತ್ತಿದ್ದಾರೆ. ಐತಿಹಾಸಿಕ ಸಿನಿಮಾ ಆಗಿದ್ದ ಕಾರಣ ನನ್ನ ಹೈಟ್‌ಗೆ ಅಷ್ಟು ಬಾಡಿ ಬ್ಯುಲ್ಟ್ ಮಾಡಬೇಕಿತ್ತು. ಆದರೆ ಅದೇ ನನಗೆ disadvantage ಆಗಿತ್ತು. ಮೇಕಪ್ ಇಲ್ಲದೆ ಜನರು ನನ್ನು ಗುರುತಿಸುತ್ತಿರಲಿಲ್ಲ. ಈ ಕಾರಣಕ್ಕೆ ನಾನು ಪಕ್ಕಾ ಕಮರ್ಷಿಯಲ್ ಸಿನಿಮಾ ಒಪ್ಪಿಕೊಂಡೆ. ಸ್ಟೋರಿ ಕೇಳುತ್ತಿರುವಾಗಲೇ ನನಗೆ ಇದು ಸೂಪರ್ ಎಂದೆನಿಸಿತ್ತು. ಉದ್ದ ಹುಡುಗ ಕುಳ್ಳಗಿರುವ ಹುಡುಗಿ ನಡುವಿನ ಪ್ರೇಮ ಕತೆ ಇದು,' ಎಂದು ರಾಜವರ್ಧನ್ ಟೈಮ್ಸ್‌ಗೆ ನೀಡಿರುವ ಹೇಳಿದ್ದಾರೆ. 

Actor Rajavardhan talks about Bicchugatti look impact in film journey vcs

ರಾಜವರ್ಧನ್‌ಗೆ ಜೋಡಿಯಾಗಿ ನೈನಾ ಕಾಣಿಸಿಕೊಂಡಿದ್ದಾರೆ. ಚಿತ್ರದ ಬಹುತೇಕ ಚಿತ್ರೀಕರಣ ಮಡಿಕೇರಿಯಲ್ಲಿ ನಡೆದಿದೆ. ಚಿತ್ರದ ಶೀರ್ಷಿಕೆ ಇನ್ನೂ ರಿವೀಲ್ ಮಾಡಿಲ್ಲ. ಇದರ ಜೊತೆಗೆ ರಾಜವರ್ಧನ್ 'ಚಕ್ರಿ' ಸಿನಿಮಾ ಸಹಿ ಮಾಡಿದ್ದಾರೆ.  ಮ್ಯಾಸಿವ್ ಸ್ಟಾರ್ ರಾಜವರ್ಧನ್‌ ಎರಡನೇ ಸಿನಿಮಾ ಕನ್ನಡ ಹಾಗೂ ತಮಿಳು ಭಾಷೆಯಲ್ಲಿ ಬಿಡುಗಡೆ ಆಗುತ್ತಿದೆ.

Follow Us:
Download App:
  • android
  • ios