Asianet Suvarna News Asianet Suvarna News

ಅಂಜನಾದ್ರಿಗೆ ಪುನೀತ್‌ : ಸಿಗದ ದೇವರ ದರ್ಶನ

  • ಕೊರೋನಾ ಹಿನ್ನೆಲೆಯಲ್ಲಿ ವಾರಾಂತ್ಯದಲ್ಲಿ ಭಕ್ತರ ದರ್ಶನಕ್ಕೆ ನಿಷೇಧ 
  • ಇಲ್ಲಿನ ಪ್ರಸಿದ್ಧ ಪುಣ್ಯಕ್ಷೇತ್ರ ಅಂಜನಾದ್ರಿಯ ಆಂಜನೇಯನ ದರ್ಶನ ಸಿಗದೇ, ನಟ ಪುನೀತ್‌ ರಾಜ್‌ಕುಮಾರ್‌ ವಾಪಸ್‌
Actor puneeth rajkumar visits Anjanadri hill snr
Author
Bengaluru, First Published Sep 6, 2021, 8:14 AM IST
  • Facebook
  • Twitter
  • Whatsapp

ಗಂಗಾವತಿ (ಸೆ.06): ಕೊರೋನಾ ಹಿನ್ನೆಲೆಯಲ್ಲಿ ವಾರಾಂತ್ಯದಲ್ಲಿ ಭಕ್ತರ ದರ್ಶನಕ್ಕೆ ನಿಷೇಧ ಹೇರಿರುವ ಕಾರಣ, ಇಲ್ಲಿನ ಪ್ರಸಿದ್ಧ ಪುಣ್ಯಕ್ಷೇತ್ರ ಅಂಜನಾದ್ರಿಯ ಆಂಜನೇಯನ ದರ್ಶನ ಸಿಗದೇ, ನಟ ಪುನೀತ್‌ ರಾಜ್‌ಕುಮಾರ್‌ ವಾಪಸ್‌ ಆಗಿದ್ದಾರೆ.

 

ಈ ಸಂದರ್ಭದಲ್ಲಿ ಸಣ್ಣಾಪುರ ಜಲಾಶಯ ಮತ್ತು ನದಿ ತೀರದಲ್ಲಿರುವ ಗುಡ್ಡ, ಬೆಟ್ಟಗಳನ್ನು ವೀಕ್ಷಿಸಿದ್ದಾರೆ.

ಕುರಿಗಾಹಿಗಳ ಜತೆ ಕಂಬಳಿ ಮೇಲೆ ಕೂತು ಊಟ ಮಾಡಿ ಸರಳತೆ ಮೆರೆದ ಪುನೀತ್​ ರಾಜ್​ಕುಮಾರ್

ಕೊಪ್ಪಳದ ಗಂಗಾವತಿ ತಾಲೂಕಿನ ಅಂಜನಾದ್ರಿ ಪರ್ವತಕ್ಕೆ ಪುನೀತ್ ರಾಜ್​ಕುಮಾರ್ ಭೇಟಿ ನೀಡಿದರು. ಆದರೆ, ಬೆಟ್ಟ ಬಂದ್ ಆಗಿತ್ತು. ಹೀಗಾಗಿ, ಗಂಗಾವತಿ ಸಮೀಪದ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಅವರು ಸುತ್ತಾಟ ನಡೆಸಿದ್ದಾರೆ.  ಈ ವೇಳೆ ಕಣ್ಣಿಗೆ ಬಿದ್ದ ಕುರಿಗಾಯಿಗಳನ್ನ ಭೇಟಿ ಮಾಡಿ ಅವರ ಜೊತೆ ಕೂತು ಊಟ ಮಾಡಿದ್ದಾರೆ.

ಹೊಸಪೇಟೆ ಕಮಲಾಪುರ ಹತ್ತಿರವಿರುವ ಆರೆಂಜ್ ಕೌಂಟಿ ಹೋಟೆಲ್ ನಲ್ಲಿ ಚಲನಚಿತ್ರ ಚಿತ್ರೀಕರಣ ಕಾರ್ಯದಲ್ಲಿ ತೊಡಗಿದ ಪುನೀತ್ ರಾಜ್ ಕುಮಾರ್ ಭಾನುವಾರ ಬಿಡುವು ಮಾಡಿಕೊಂಡು ಅಂಜನಾದ್ರಿಯ ಶ್ರೀ ಆಂಜನೇಯ ಸ್ವಾಮಿಯ ದರ್ಶನಕ್ಕೆ ಆಗಮಿಸಿದ್ದರು. ಆದ್ರೆ, ಕೊರೋನಾ ಕಾರಣ ಸರ್ವಜನಿಕ ದರ್ಶನಕ್ಕೆ ನಿಷೇಧ ಇದ್ದಿರಿಂದ ಅವರಿಗೆ ದರ್ಶನ ಭಾಗ್ಯ ಸಿಗಲಿಲ್ಲ.

Follow Us:
Download App:
  • android
  • ios