Asianet Suvarna News Asianet Suvarna News

ರಾಮಲಲ್ಲಾ ಪ್ರತಿಷ್ಠಾಪನೆಗೆ ಪ್ರಥಮ್​ ಧಮಾಕಾ: ರಜೆ, ಡಬಲ್​ ಸಂಬಳ ಜೊತೆ ವಿಮಾನದಲ್ಲಿ ಅಯೋಧ್ಯೆ ದರ್ಶನ!

ರಾಮಲಲ್ಲಾ ಪ್ರಾಣಪ್ರತಿಷ್ಠಗೆ ರಜೆ ಘೋಷಿಸಿರುವುದೂ ಅಲ್ಲದೇ, ಡಬಲ್​ ಸಂಬಳ ನೀಡುವುದಾಗಿ ಹೇಳಿರುವ ನಟ ಪ್ರಥಮ್​, ಇನ್ನೇನು ಆಫರ್​ ಕೊಟ್ಟಿದ್ದಾರೆ ನೋಡಿ...
 

Actor Pratham announced a holiday for Ramlalla Prana Pratistha with double salary suc
Author
First Published Jan 22, 2024, 5:48 PM IST

ಇಂದು ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣಪ್ರತಿಷ್ಠೆ ನಡೆಯಿತು. ಐದು ಶತಮಾನಗಳಿಂದ ಕಾದು ಕುಳಿತಿದ್ದ ಐತಿಹಾಸಿಕ ಕ್ಷಣಕ್ಕೆ ಅಯೋಧ್ಯೆ ಇಂದು ಸಾಕ್ಷಿಯಾಯಿತು. ದೇಶ-ವಿದೇಶಗಳ ಜನರು ಈ ಐತಿಹಾಸಿಕ ಕ್ಷಣವನ್ನು ಕಣ್ತುಂಬಿಸಿಕೊಂಡರು. ಭಾರತ ಮಾತ್ರವಲ್ಲದೇ ವಿದೇಶದಲ್ಲಿಯೂ ಇದರ ನೇರ ಪ್ರಸಾರ ಆಯೋಜನೆ ಮಾಡಲಾಗಿತ್ತು. ನಾಲ್ಕು ಲಕ್ಷ ಜನರ ಬಲಿದಾನದ ಬಳಿಕ 550 ವರ್ಷಗಳ ನಂತರ ಇಂಥದ್ದೊಂದು ದಿನವನ್ನು ಸಂಭ್ರಮಿಸುವುದು ಎಂದರೆ ಅದು ಸುಲಭದ ಮಾತಲ್ಲ. ಅಯೋಧ್ಯೆ ಮಾತ್ರವಲ್ಲದೇ ಬಹುತೇಕ ನಗರಗಳು ಶ್ರೀರಾಮನ ಜಪದಲ್ಲಿಯೇ ಮಿಂದೆದ್ದವು. ಎಲ್ಲೆಲ್ಲೂ ದೀಪಾಲಂಕಾರಗಳನ್ನು ನೋಡಬಹುದಾಗಿತ್ತು.

ಇಂಥದ್ದೊಂದು ಕ್ಷಣವನ್ನು  ನೇರಪ್ರಸಾರದಲ್ಲಿಯೇ ಕಣ್ತುಂಬಿಸಿಕೊಳ್ಳಲು ಕೇಂದ್ರ ಸರ್ಕಾರ ತನ್ನ ಕಚೇರಿ, ಸಂಸ್ಥೆಗಳಿಗೆ ಅರ್ಧ ದಿನದ ರಜೆ ಘೋಷಿಸಿದ್ದರೆ,  ಹಲವು ರಾಜ್ಯಗಳಲ್ಲಿ ದಿನ ಪೂರ್ತಿ ರಜೆ ಘೋಷಣೆ ಮಾಡಿದ್ದವು. ಮಕ್ಕಳಲ್ಲಿ ಧಾರ್ಮಿಕ ಮನೋಭಾವ ತುಂಬುವ ನಿಟ್ಟಿನಲ್ಲಿ, ನಮ್ಮ ಸಂಸ್ಕೃತಿ-ಸಂಪ್ರದಾಯವನ್ನು ಅರಿಯುವ ನಿಟ್ಟಿನಲ್ಲಿ ಕೆಲವು ರಾಜ್ಯಗಳಲ್ಲಿ ಶಾಲಾ-ಕಾಲೇಜುಗಳಿಗೂ ರಜೆ ನೀಡಲಾಗಿತ್ತು. ಅದೇ ರೀತಿ ಬಿಗ್​ ಬಾಸ್ ಖ್ಯಾತಿಯ ಒಳ್ಳೆ ಹುಟುಗ ಎಂದೇ ಬಿರುದು ಪಡೆದುಕೊಂಡಿರುವ ಪ್ರಥಮ್​ ಅವರು ಕೂಡ ತಮ್ಮ ‘ಕರ್ನಾಟಕದ ಅಳಿಯ’ ಚಿತ್ರತಂಡಕ್ಕೆ ರಜೆ ಘೋಷಿಸಿದ್ದರು. ಇಷ್ಟೇ ಅಲ್ಲದೇ ಇವರು ಇಂದು ಇಡೀ ಚಿತ್ರತಂಡಕ್ಕೆ ಡಬಲ್​ ಸಂಬಳ  ಘೋಷಣೆ  ಮಾಡಿದ್ದಾರೆ. ಇಷ್ಟೇ ಅಲ್ಲದೇ ತಮ್ಮ ‘ಕರ್ನಾಟಕದ ಅಳಿಯ’ ಸಿನಿಮಾ ಶೂಟಿಂಗ್ ಮುಗಿದ ಬಳಿಕ ತಂಡದಲ್ಲಿ ಕೆಲಸ ಮಾಡಿದ ಹಿಂದೂ ಕಾರ್ಮಿಕರನ್ನು ವಿಮಾನದ ಮೂಲಕ ಅಯೋಧ್ಯೆಗೆ ಕರೆದುಕೊಂಡು ಹೋಗುವುದಾಗಿ ಹೇಳಿದ್ದಾರೆ. 

ನೃತ್ಯ, ಸಂಗೀತ, ಜಪದ ಮೂಲಕ ಸ್ಯಾಂಡಲ್​ವುಡ್​​ನಲ್ಲಿ ರಾಮನ ಸ್ಮರಣೆ... ಯಾರು ಹೇಗೆಲ್ಲಾ ಆಚರಿಸಿದ್ರು ನೋಡಿ...

ಅಂದಹಾಗೆ  ಪ್ರಥಮ್ (Pratham) ಅವರು ಸದ್ಯ ನಿರ್ದೇಶಿಸಿ, ನಾಯಕನಾಗಿ ನಟಿಸಿರುವ ‘ಕರ್ನಾಟಕದ ಅಳಿಯ’ ಚಿತ್ರದ ಶೂಟಿಂಗ್​ ಭರ್ಜರಿಯಾಗಿ ನಡೆಯುತ್ತಿದೆ. ಕಳೆದ ಸೆಪ್ಟೆಂಬರ್​ನಲ್ಲಿ ಈ ಕುರಿತು ಪ್ರಥಮ್​ ಅವರು ಮಾಹಿತಿ ನೀಡಿದ್ದರು. ಅದರ ‘ಮನಸಿಗೆ ಹಿಡಿಸಿದನು ಇವನು’ ಎಂಬ ಹಾಡನ್ನು ರಿಲೀಸ್​ ಮಾಡಿದ್ದರು. ನಂತರ ಚಿತ್ರದ ಕುರಿತು ಮಾಹಿತಿ ನೀಡಿದ್ದ ಪ್ರಥಮ್​,   ಇದೊಂದು ವಾಮಾಚಾರದ ಕುರಿತಾದ ಸಿನಿಮಾವಾಗಿದ್ದು, ಮೂವತ್ತು ವರ್ಷಗಳ ಹಿಂದೆ “ತುಳಸಿದಳ” ಎಂಬ ಸಿನಿಮಾ ಬಂದಿತ್ತು. ಆನಂತರ ದೀರ್ಘವಾಗಿ ವಾಮಾಚಾರದ ಕುರಿತು ಬಂದಿರುವ ಸಿನಿಮಾ ಇದೇ ಇರಬಹುದು.  ನಾನು ನಿರ್ದೇಶನದೊಂದಿಗೆ ನಾಯಕನಾಗೂ ನಟಿಸಿದ್ದೇನೆ. ರಾಘವೇಂದ್ರ ರಾಜಕುಮಾರ್ ಅವರು ನನ್ನ ತಂದೆ ಪಾತ್ರದಲ್ಲಿ ಅಭಿನಯಿಸಿದ್ದಾರೆ‌. ಅಕ್ಷಿತ ಬೋಪಯ್ಯ, ಜ್ಯೋತಿ,  ಸ್ಪರ್ಶ ರೇಖಾ, ಓಂಪ್ರಕಾಶ್ ರಾವ್, ರಾಮಕೃಷ್ಣ, ಕೋಟೆ ಪ್ರಭಾಕರ್, ಶ್ರೀಧರ್, ವಿ.ಮನೋಹರ್, ರಮೇಶ್ ಭಟ್ ಮುಂತಾದವರು ತಾರಾಬಳಗದಲ್ಲಿದ್ದಾರೆ ಎಂದು ತಿಳಿಸಿದ್ದರು.

ಇದೀಗ ಅವರು, ಕಾರ್ಮಿಕರಿಗೆ ರಜೆ, ಡಬಲ್​ ಸಂಬಳದ ಜೊತೆಗೆ ಅಯೋಧ್ಯೆಗೆ ವಿಮಾನದಲ್ಲಿ ಕರೆದುಕೊಂಡು ಹೋಗುವುದಾಗಿ ಹೇಳುವ ಮೂಲಕ ಸಕತ್​ ಸದ್ದು ಮಾಡುತ್ತಿದ್ದಾರೆ.  ನನ್ನ ದೇಶ, ನನ್ನ ಸಂಸ್ಕೃತಿ, ನನ್ನ ಪರಂಪರೆ ನನ್ನ ದೇವರು ಇದೆಲ್ಲ ಆದ್ಮೇಲೆ ನಾನೊಬ್ಬ ಕಲಾವಿದ ಎಂದಿರುವ ಪ್ರಥಮ್​ ಅವರು, ರಾಮ ನಾಮ ಸ್ಮರಣೆ ಇನ್ಮೇಲೆ ಪ್ರತಿದಿನದ ಕಾಯಕಗಳಲ್ಲಿ ಎಂದು   ಬರೆದುಕೊಂಡಿದ್ದಾರೆ. ಇವರ ಈ ಮಾತಿಗೆ ಅಭಿಮಾನಿಗಳು ತಲೆದೂಗುತ್ತಿದ್ದಾರೆ. ದೇಶ, ಸಂಸ್ಕೃತಿ, ಪರಂಪರೆಯ ಬಗ್ಗೆ ಅರಿವಿರುವ ನೀವೇ ನಮ್ಮ ರಾಜ್ಯದ ಮುಖ್ಯಮಂತ್ರಿಯಾಗಬೇಕಿತ್ತು ಎಂದೂ ಕೆಲವರು ಕಮೆಂಟ್​ನಲ್ಲಿ ಹೇಳುತ್ತಿದ್ದಾರೆ. ಇನ್ನು ಕೆಲವರು ನಿಮ್ಮ ಇದೊಂದೇ ಮಾತಿನಿಂದ ನಾನು ನಿಮ್ಮ ಚಿತ್ರವನ್ನು ನೋಡುತ್ತೇನೆ ಎಂದಿದ್ದಾರೆ.  

ಕೊಟ್ಟ ಮಾತಿನಂತೆ ನಡೆದ ಹನುಮಾನ್​ ಚಿತ್ರತಂಡ: ಅಯೋಧ್ಯೆಗೆ 2.67 ಕೋಟಿ ದೇಣಿಗೆ- ಹೀಗಿದೆ ಲೆಕ್ಕಾಚಾರ

Follow Us:
Download App:
  • android
  • ios