ಏಪ್ರಿಲ್ 1ರಂದು ಬಿಡುಗಡೆಗೆ ಸಿದ್ಧವಾಗುತ್ತಿರುವ ಯುವರತ್ನ ಸಿನಿಮಾ ತಂಡ ಮಾರ್ಚ್‌.20ರಂದು ಅದ್ಧೂರಿಯಾಗಿ ಸುದ್ದಿಗೋಷ್ಠಿ ನಡೆಯಿತು. ತಂಡ ಪ್ರತಿಯೊಬ್ಬ ಕಲಾವಿದನೂ ಚಿತ್ರದ ಬಗ್ಗೆ ಹಾಗೂ ತಮ್ಮ ಪಾತ್ರದ ಬಗ್ಗೆ ಮಾತನಾಡಿದ್ದಾರೆ. ಅದರಲ್ಲೂ ಬಹುಭಾಷಾ ನಟ ಪ್ರಕಾಶ್ ರೈ ನೀಡಿದ ಹೇಳಿದ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿ ಮಾಡುತ್ತಿದೆ.

ಹುಟ್ಟುಹಬ್ಬದ ಸಂಭ್ರಮ ಅಭಿಮಾನಿಗಳು ಕೊಟ್ಟ ಕಾಣಿಕೆ: ಪುನೀತ್‌ರಾಜ್‌ಕುಮಾರ್

ಪ್ರಕಾಶ್ ಹೇಳಿಕೆ:

'ನನ್ನ ಇಷ್ಟು ವರ್ಷದ ಜರ್ನಿಯಲ್ಲಿ ಯುವರತ್ನ ಬಹಳ ಖುಷಿ ಕೊಟ್ಟಿರುವ ಸಿನಿಮಾ. ಒಬ್ಬ ಕನ್ನಡಿಗನಾಗಿ ಬೇರೆ ಭಾಷೆಗಳ ಮುಂದೆ ನಾನು ಎದೆ ಉಬ್ಬಿಸಿ ನಿಂತುಕೊಳ್ಳವ ತರ ಮಾಡಿದ ಸಿನಿಮಾ ಯುವರತ್ನ' ಎಂದು ಹೇಳುತ ಚಿತ್ರದ ಬಗ್ಗೆ ಮಾತನಾಡಿದ್ದಾರೆ.

'ಬಿಗ್ ಬಜೆಟ್ ಅದ್ಧೂರಿ ಸಿನಿಮಾಗಳು ನನ್ನ ಜರ್ನಿಯಲ್ಲಿ ಹೊಸತಲ್ಲ ಬಹಳಷ್ಟು ಸಿನಿಮಾ ಈಗಾಗಲೇ ಮಾಡಿದ್ದೀನಿ, ದೇಶ ಸುತ್ತಿ ಬಂದಿದ್ದೇನೆ. ಯುವರತ್ನ ಇಂದು ವಿಶೇಷ ಹಾಗೂ ಇಂದಿನ ಸಮಾಜಕ್ಕೆ ಅಗತ್ಯವಿರುವ ಸಿನಿಮಾ. ಅದಕ್ಕಾಗಿ ಈ ಚಿತ್ರ ಮಾಡಿದೆ. ಚಿತ್ರದಲ್ಲಿ ಡ್ಯಾನ್ಸ್ ಬರುತ್ತೆ, ಫೈಟ್ ಇರುತ್ತೆ, ಅಭಿಮಾನಿಗಳು ಹೆಚ್ಚು ಇದ್ದಾರೆ ಸೋ ಮಾರ್ಕೆಟ್ ಇದೆ. ಸಮಾಜಕ್ಕೆ ಒಂದೊಳ್ಳೆ ಸಂದೇಶ ರವಾನಿಸುವ ಒಳ್ಳೆ ಮೌಲ್ಯವನ್ನು ಜನರಿಗೆ ತಲುಪಿಸಬೇಕು ಎಂದ ಉದ್ದೇಶದಿಂದ ಸಿನಿಮಾ ಮಾಡುವುದು ಅಪ್ಪು ದೊಡ್ಡ ಗುಣ' ಎಂದು ಪ್ರಶಾಕ್ ರೈ ಹೇಳಿದ್ದಾರೆ.

ಅಪ್ಪು ಹುಟ್ಟುಹಬ್ಬದ ಫ್ಯಾನ್ಸ್‌ಗೆ ಸಿಗ್ತು ಸೂಪರ್ ಗಿಫ್ಟ್‌; ಫೀಲ್ ದಿ ಪವರ್ ಪ್ರೋಮೋ! 

ಸಂತೋಷ್ ನಿರ್ದೇಶನದ ರಾಜಕುಮಾರ ಚಿತ್ರದಲ್ಲೂ ಪುನೀತ್‌ಗೆ ಎದುರಾಗಿ ಪ್ರಕಾಶ್ ಅಭಿನಯಿಸಿದ್ದಾರೆ. ಚಿತ್ರದ ಆರಂಭದಲ್ಲಿ ವಿಲನ್ ಆಗಿರುವ ಪ್ರಕಾಶ್ ತಂದೆಯ ಪ್ರೀತಿಗೆ ಸೋತು ಒಳ್ಳೆಯ ವ್ಯಕ್ತಿ ಅಗುವುದು ವೀಕ್ಷಕರ ಮನಸ್ಸು ಮುಟ್ಟಿತ್ತು. ಯುವರತ್ನ ಚಿತ್ರದಲ್ಲೂ ವೀಕ್ಷಕರಿಗೆ ಹತ್ತಿರವಾಗುವ ಪಾತ್ರವೇ ಎಂದು ಏಪ್ರಿಲ್ 1ಕ್ಕೆ ಕಾದು ನೋಡಬೇಕಿದೆ.