ಬೆಳಗ್ಗಿನಿಂದಲೇ ಬೆಂಗಳೂರಿನ ಜೆಪಿ ನಗರದಲ್ಲಿರುವ ನಿಖಿಲ್‌ ಕುಮಾರ್‌ ನಿವಾಸಕ್ಕೆ ಅವರ ಅಭಿಮಾನಿಗಳು ಆಗಮಿಸಿದ್ದರು. ಬೃಹತ್‌ ಕೇಕು, ಹೂವಿನ ಆಹಾರಗಳೊಂದಿಗೆ ಬಂದಿದ್ದ ಅಭಿಮಾನಿಗಳ ಜತೆ ನಿಖಿಲ್‌ ಕುಮಾರ್‌ ಸಂಭ್ರಮಿಸಿದರು. ಕೆಲವರು ನಿಖಿಲ್‌ ಕುಮಾರ್‌ ಜತೆ ಸೆಲ್ಫಿ ಫೋಟೋ ತೆಗೆಸಿಕೊಂಡು ಖುಷಿ ಪಟ್ಟರು.

ಸ್ಯಾಂಡಲ್‌ವುಡ್ ಯುವರಾಜನಿಗೆ ಮೂವತ್ತು, ನಿಖಿಲ್‌ ಬಗ್ಗೆ ನಿಮಗೆಷ್ಟು ಗೊತ್ತು!?

ಈ ಸಂದರ್ಭದಲ್ಲಿ ಮಾತನಾಡಿದ ನಿಖಿಲ್‌ ಕುಮಾರ್‌, ‘ಈ ಬಾರಿ ಕುಟುಂಬದ ಜತೆಗೆ ಅಭಿಮಾನಿಗಳು ಹಾಗೂ ನಮ್ಮ ಪಕ್ಷದ ಮುಖಂಡರು, ಕಾರ್ಯಕರ್ತರು ನನ್ನ ಹುಟ್ಟುಹಬ್ಬವನ್ನು ಆಚರಿಸುವ ಮೂಲಕ ನನಗೆ ವಿಶೇಷ ಉಡುಗೊರೆ ನೀಡಿದ್ದಾರೆ. ನನ್ನ ನಟನೆಯಲ್ಲಿ ಒಂದಿಷ್ಟುಸಿನಿಮಾಗಳು ಸೆಟ್ಟೇರಲಿವೆ.

7ನೇ ಕ್ಲಾಸಿನಲ್ಲೇ ನಿಖಿಲ್ ಬಳಿ ಇತ್ತು ಕಾರು; ಇಲ್ಲಿದೆ ಕುಮಾರಸ್ವಾಮಿ ಪುತ್ರನ 'ಕಾರುಬಾರು'!

ಈ ಪೈಕಿ ಮೊದಲಿಗೆ ತೆಲುಗಿನ ವಿಜಯ್‌ ಕೊಂಡ ನಿರ್ದೇಶನದ ಚಿತ್ರಕ್ಕೆ ಚಾಲನೆ ಕೊಡಲಿದ್ದೇನೆ. ಅದ್ದೂರಿಯಾಗಿ, ಬಹು ಭಾಷೆಯಲ್ಲಿ ರೂಪಿಸುತ್ತಿರುವ ಸಿನಿಮಾ ಇದು. ಸದ್ಯಕ್ಕೆ ಪ್ರೀ ಪ್ರೊಡಕ್ಷನ್‌ ಕೆಲಸಗಳು ನಡೆಯುತ್ತಿವೆ. ಸದ್ಯದಲ್ಲೇ ಸಿನಿಮಾ ಸೆಟ್ಟೇರಲಿದೆ. ಈ ಬಾರಿಯೂ ಒಂದು ಹೊಸ ರೀತಿಯ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದೇನೆ’ ಎಂದರು.