ಕಾಂತಾರ 1ರಲ್ಲಿ ಮೂಲಪುರುಷನೇ ಮೋಹನ್ ಲಾಲ್; ಕಾಡಬೆಟ್ಟು ಶಿವನ ತಾತನ ಪಾತ್ರ ಓಕೆ ಅಯ್ತಾ?
ಕಾಂತಾರ ಚಿತ್ರದಿಂದ ಹೊರ ಬಂತು ಬಿಗ್ ಬ್ರೇಕಿಂಗ್ ನ್ಯೂಸ್. ಶಿವನ ತಾತನ ಪಾತ್ರದಲ್ಲಿ ಯಾರು ಕಾಣಿಸಿಕೊಳ್ಳಲಿದ್ದಾರೆ.
ರಿಷಬ್ ಶೆಟ್ಟಿ ನಟನೆ-ನಿರ್ದೇಶನದ ಕಾಂತಾರ ಸೀಕ್ವೆಲ್ ಬಗ್ಗೆ ಅದ್ಯಾವ ಪರಿಯ ನಿರೀಕ್ಷೆ ಇದೆ ಅನ್ನೋದು ನಿಮಗೆ ಗೊತ್ತೇ ಇದೆ. ಈ ಬಹು ನಿರೀಕ್ಷೆಯ ಸಿನಿಮಾ ಕುರಿತ ಮತ್ತೊಂದು ಇನ್‌ಟ್ರೆಸ್ಟಿಂಗ್ ಸಂಗತಿಯನ್ನು ಈಗ ಹೇಳ್ತಿವಿ ಕೇಳಿ. ಈ ಹಿಂದೆಯೇ ಕಾಂತಾರದಲ್ಲಿ ರಿಷಬ್ ಜೊತೆಗೆ ಮೋಹನ್ ಲಾಲ್ ನಟಿಸಲಿದ್ದಾರೆ ಅನ್ನೋ ಸುದ್ದಿಯಾಗಿತ್ತು. ಇದೀಗ ಲಾಲೆಟ್ಟನ್ ಯಾವ ಪಾತ್ರ ಮಾಡ್ತಾ ಇದ್ದಾರೆ ಅನ್ನೋದು ರಿವೀಲ್ ಆಗಿದೆ.
ಯೆಸ್! ಕಾಂತಾರ ಸೀಕ್ವೆಲ್ ಕುರಿತು ಒಂದು ಇನ್‌ಟ್ರೆಸ್ಟಿಂಗ್ ಅಪ್‌ಡೇಟ್ ಹೊರಬಿದ್ದಿದೆ. ಅಸಲಿಗೆ ಈ ಕಳೆದ ಏಪ್ರಿಲ್ ತಿಂಗಳಲ್ಲಿ ಮೋಹನ್ ಲಾಲ್ ಮತ್ತು ರಿಷಬ್ ಶೆಟ್ಟಿಯನ್ನು ಭೇಟಿ ಮಾಡಿದ್ದರು. ಆ ಸಮಯದಲ್ಲಿ ಕರಾವಳಿಯ ಕೆಲ ದೇಗುಲಗಳಿಗೆ ಭೇಟಿ ಕೊಟ್ಟಿದ್ದ ಮೋಹನ್ ಲಾಲ್‌ಗೆ, ರಿಷಬ್ ದಂಪತಿ ಜೊತೆಯಾಗಿದ್ದರು. ಲೆಜೆಂಡ್ ಮೋಹನ್ ಲಾಲ್ ಜೊತೆ ಕಳೆದ ಕ್ಷಣಗಳು ಅಮೋಘ ಅಂತ ಸೋಷಿಯಲ್ ಮಿಡಿಯಾದಲ್ಲಿ ಪೋಸ್ಟ್ ಹಾಕಿದ್ದರು.ಆಗಲೇ ಕಾಂತಾರ ಸೀಕ್ವೆಲ್‌ನಲ್ಲಿ ಮೋಹನ್ ಲಾಲ್ ನಟನೆ ಮಾಡ್ತಾರೆ ಅನ್ನೋ ಗುಸು ಗುಸು ಹರಿದಾಡುತ್ತಿತ್ತು. ಆ ವದಂತಿ ನಿಜ ಅನ್ನೋದು ಪ್ರೂವ್ ಆಗಿದೆ. ಅಸಲಿಗೆ ಕಾಂತಾರ ಚಾಪ್ಟರ್ -1 ನಲ್ಲಿ ಮೋಹನ್ ಲಾಲ್, ರಿಷಬ್ ಶೆಟ್ಟಿಯ ತಂದೆ ಪಾತ್ರ ಮಾಡ್ತಾ ಇದ್ದಾರಂತೆ.
ಸಮಂತಾ ನನಗೆ ಬೇಕೆಂದು ನಾಗಾರ್ಜುನ ಬಳಿನೇ ಕೇಳಿದ್ರಾ KTR; ಅಸಲಿ ಸತ್ಯ ಇಲ್ಲಿದೆ...
ಕಾಂತಾರದಲ್ಲಿ ಕಾಡಬೆಟ್ಟು ಶಿವನ ಕಥೆಯಿತ್ತು. ಮತ್ತೆ ಈಗ ಮಾಡುತ್ತಿರುವ ಚಾಪ್ಟರ್ 1 ನಲ್ಲಿ ಶಿವನ ತಂದೆ ದೈವಪಾತ್ರಿಯ ಕಥೆ ಹೇಳಲಾಗುತ್ತಿದೆ. ಈ ದೈವಪಾತ್ರಿಯ ತಂದೆಯ ಪಾತ್ರದಲ್ಲಿ ಮೋಹನ್ ಲಾಲ್ ಇದ್ದಾರಂತೆ. ಅಲ್ಲಿಗೆ ಕಾಂತಾರ ಮೂಲಪುರುಷನೇ ಮೋಹನ್ ಲಾಲ್ ಆಗಿರಲಿದ್ದಾರೆ. ಕಾಂತಾರ ಸಿನಿಮಾಗೆ - ಇದು ದಂತಕಥೆ ಅನ್ನೋ ಟ್ಯಾಗ್ ಲೈನ್ ಇದೆ. ಸದ್ಯ ಭಾರತೀಯ ಸಿನಿರಂಗದ ದಂತಕಥೆಯೇ ಅನ್ನಿಸಿಕೊಂಡಿರೋ ಮೋಹಲ್ ಲಾಲ್ ಇದರಲ್ಲಿ ನಟಿಸುತ್ತಿದ್ದಾರೆ ಅನ್ನೋದು ನಿಜಕ್ಕೂ ಬಿಗ್ ನ್ಯೂಸ್. ಅಂತೆಯೇ ಇಡೀ ದೇಶವೇ ಈ ಸುದ್ದಿ ಕೇಳಿ ದಂಗಾಗಿದೆ. ಮೋಹನ್ ಲಾಲ್ ಮೂರು ಬಾರಿ ಅತ್ಯುತ್ತಮ ನಟ ರಾಷ್ಟ್ರಪ್ರಶಸ್ತಿ ಪಡೆದ ಪ್ರತಿಭಾನ್ವಿತ. ಈ ಸಾರಿ ಕೂಡ ರಾಷ್ಟ್ರಪ್ರಶಸ್ತಿ ರೇಸ್ ನಲ್ಲಿ ಕೊನೆವರೆಗೂ ಮೋಹನ್ ಲಾಲ್ ಹೆಸರಿತ್ತು. ಕೊನೆಗೆ ಮೋಹನ್ ಲಾಲ್‌ರನ್ನು ಮೀರಿಸಿ ಕಾಂತಾರದ ನಟನೆಗೆ ರಿಷಬ್‌ಗೆ ಪ್ರಶಸ್ತಿ ನೀಡಲಾಯ್ತು.ಈಗ ಇಬ್ಬರೂ ನ್ಯಾಷನಲ್ ಅವಾರ್ಡ್ ವಿನ್ನರ್ಸ್ ಕಾಂತಾರ ಪ್ರೀಕ್ವೆಲ್‌ನಲ್ಲಿದ್ದಾರೆ ಅನ್ನೋದು ಸಹಜವಾಗೇ ಸಿನಿಪ್ರಿಯರನ್ನು ಥ್ರಿಲ್ ಆಗುವಂತೆ ಮಾಡಿದೆ. ಕಾಂತಾರ ಪ್ರೀಕ್ವೆಲ್‌ನಲ್ಲಿ ಅದೆಂಥಾ ಕಥೆ ಇರುತ್ತೆ .. ಮೋಹನ್ ಲಾಲ್ ಲುಕ್ ಆಂಡ್ ಕ್ಯಾರೆಕ್ಟರ್ ಹೇಗಿರಬಹುದು ಅನ್ನೋದನ್ನು ನೆನೆದು ಫ್ಯಾನ್ಸ್ ಎಕ್ಸೈಟ್ ಆಗಿದ್ದಾರೆ.
ಇನ್ನು ಮುಂದೆ ಸಂಪೂರ್ಣ ನಿರ್ಧಾರ ನನ್ನದು, ವರ್ಷಕ್ಕೆ 2-3 ಮೂರು ಸಿನಿಮಾ ರಿಲೀಸ್ ಮಾಡಬೇಕು: ಅಶ್ವಿನಿ ಪುನೀತ್
ಒಟ್ಟಾರೆ ಕಾಂತಾರ ಪ್ರೀಕ್ವೆಲ್ ಚಿತ್ರೀಕರಣ ಸದ್ಯ ಭರದಿಂದ ನಡೀತಾ ಇದ್ದು, ಚಿತ್ರದಲ್ಲಿರೋ ಒಂದೊಂದೇ ವಿಸ್ಮಯಗಳು ಒಂದರ ಬಳಿಕ ಒಂದು ರಿವೀಲ್ ಆಗ್ತಾ ಇವೆ. ರಿಷಬ್ ಶೆಟ್ಟರ ಕಾಂತಾರದಲ್ಲಿ ಇನ್ನೂ ಏನೇನೂ ಅಚ್ಚರಿಗಳಿವೆಯೋ ಅಂತ ಫ್ಯಾನ್ಸ್ ಕಾಯುವಂತೆ ಆಗಿದೆ.