ಭಾರತದಲ್ಲಿ ಮೊದಲ ಬಾರಿಗೆ ಒಂದು ವಿಶಿಷ್ಟ ಕಾನ್ಸೆಪ್ಟ್ ಇಟ್ಟುಕೊಂಡು ‘ಬಿಳಿ ಚುಕ್ಕಿ ಹಳ್ಳಿ ಹಕ್ಕಿ’ ಸಿನಿಮಾ ನಿರ್ಮಾಣ ಮಾಡಲಾಗಿದೆ. ಈ ಸಿನಿಮಾದ ಟ್ರೇಲರ್‌ಗೆ ಒಳ್ಳೆಯ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಸಿನಿಮಾ ಬಗ್ಗೆ ನಟ ಶ್ರೀಮುರಳಿ, ಪ್ರತಾಪ್ ಸಿಂಹ ಕೂಡ ಮೆಚ್ಚಿದ್ದಾರೆ.
ಮಹಿರಾ ಸಿನಿಮಾದ ನಿರ್ದೇಶನ ಮಾಡಿದ್ದ ಮಹೇಶ್ ಗೌಡ ಅವರು ಭಾರತದಲ್ಲಿ ಮೊದಲ ಬಾರಿಗೆ ಒಂದು ವಿಶಿಷ್ಟವಾದ ಕಾನ್ಸೆಪ್ಟ್ ಇರುವ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಈಗ ಈ ಸಿನಿಮಾಕ್ಕೆ ನಟ ಶ್ರೀಮುರಳಿ, ಪ್ರತಾಪ್ ಸಿಂಹ ಕೂಡ ಮೆಚ್ಚುಗೆ ಸೂಚಿಸಿದ್ದಾರೆ.
ಮಹೇಶ್ ಗೌಡ ಅವರು ಸಿನಿಮಾ ನಿರ್ಮಾಣ ಮಾಡಿದ್ದು, ನಿರ್ದೇಶನ ಮಾಡಿ ನಟಿಸಿರುವ ಈ ಸಿನಿಮಾಕ್ಕೆ ‘ಬಿಳಿಚುಕ್ಕಿ ಹಳ್ಳಿಹಕ್ಕಿ' ಎಂದು ಹೆಸರು ಇಡಲಾಗಿದೆ. ಅಕ್ಟೋಬರ್ 24ರಂದು ಈ ಸಿನಿಮಾ ರಾಜ್ಯಾದ್ಯಂತ ಬಿಡುಗಡೆಗೊಳ್ಳಲಿದೆ. ಈಗಾಗಲೇ ಹಾಡುಗಳ ಮೂಲಕ ಗಮನ ಸೆಳೆದಿರುವ ಈ ಸಿನಿಮಾದ ಟ್ರೇಲರ್‌ನ್ನು ರೋರಿಂಗ್ ಸ್ಟಾರ್ ಶ್ರೀಮುರುಳಿ ಬಿಡುಗಡೆ ಮಾಡಿದ್ದರು.
ಶ್ರೀ ಮುರುಳಿ ಏನಂದ್ರು?
ರೋರಿಂಗ್ ಸ್ಟಾರ್ ಶ್ರೀ ಮುರುಳಿ ಮಾತನಾಡಿ, “ಭಾರತೀಯ ಚಿತ್ರರಂಗದಲ್ಲಿಯೇ ಮೊದಲ ಸಲ ತೊನ್ನು ಎಂಬ ಸಮಸ್ಯೆಯ ಸುತ್ತ ಇರುವ ಸಿನಿಮಾವಿದು. ಸ್ವತಃ ಆ ಸಮಸ್ಯೆ ಹೊಂದಿರುವ ವ್ಯಕ್ತಿಯೇ ಈ ಸಿನಿಮಾವನ್ನು ನಿರ್ದೇಶನ ಮಾಡಿ, ನಿರ್ಮಾಣ ಮಾಡಿದ್ದು, ನಟಿಸಿದ್ದಾರೆ. ವಿಟಿಲಿಗೋ ಸಮಸ್ಯೆ ಸುತ್ತ ಕೇಂದ್ರಿತವಾದ ಈ ಸಿನಿಮಾವನ್ನು ಮನಸಾರೆ ಮೆಚ್ಚಿಕೊಂಡಿದ್ದಾರೆ” ಎಂದು ಹೇಳಿದ್ದಾರೆ.
ಶಾಲಾ ದಿನಗಳಲ್ಲಿ ನನ್ನ ಸ್ನೇಹಿತ ವಿಟಿಲಿಗೋ ಸಮಸ್ಯೆಯಿಂದ ಬಳಲುತ್ತಿದ್ದನು ಎಂದು ಕೂಡ ಶ್ರೀಮುರಳಿ ಹೇಳಿದ್ದಾರೆ. ಈ ಸಿನಿಮಾದ ವಿತರಣೆಗೂ ಸಹಾಯ ಮಾಡುವ ಭರವಸೆ ನೀಡಿದರು.
ಮಹೇಶ್ ಗೌಡ ಮಾತನಾಡಿ, “ವಿಟಿಲಿಗೋ ಸಮಸ್ಯೆ ಇರುವ ಸಿನಿಮಾ ಅಂದಾಕ್ಷಣ ಮನರಂಜನೆ ಇರುವುದಿಲ್ಲ ಅಂದುಕೊಳ್ಳಬೇಡಿ. ಇದೊಂದು ಪಕ್ಕಾ ಕಮರ್ಶಿಯಲ್ ದಾಟಿಯಲ್ಲೇ ಹೇಳಿರುವ ಸಿನಿಮಾವಿದು. ಗಂಭೀರವಾಗಿ ಹೇಳಿದರೆ ಸಿನಿಮಾವು, ಪ್ರೇಕ್ಷಕರಿಗೆ ತಲುಪೋದು ಕಷ್ಟ. ತೆಳು ಹಾಸ್ಯದ ಮೂಲಕ ವೀಕ್ಷಕರಿಗೆ ಕಥೆ ಹೇಳಬಹುದು” ಎಂದಿದ್ದಾರೆ.
ಪ್ರತಾಪ್ ಸಿಂಹ ಏನಂದ್ರು?
ಇತ್ತೀಚಿನ ದಿನಗಳಲ್ಲಿ ಚಿತ್ರರಂಗದಲ್ಲಿ ಹೊಸ ಪ್ರಯತ್ನಗಳಾಗುತ್ತಿವೆ. ಕಾಂತಾರ ಸಿನಿಮಾ ಸೀಮಿತ ಬಜೆಟ್‌ನಲ್ಲಿ ತಯಾರಾಗಿ ದೊಡ್ಡ ಗೆಲುವು ಕಂಡಿತ್ತು. ಆಮೇಲೆ ಅದರ ಪ್ರೀಕ್ವೆಲ್ ಕೂಡ ಯಶಸ್ಸು ಕಂಡಿದೆ. ಸು ಫ್ರಂ ಸೋ ಕೂಡಾ ಗೆಲುವು ಕಂಡಿದೆ. ಬಿಳಿಚುಕ್ಕಿ ಹಳ್ಳಿಹಕ್ಕಿ ಸಿನಿಮಾವು ರಿಲೀಸಸ್ ಆಗುತ್ತಿದೆ. ಇಂಥ ಹೊಸತನದ ಸಿನಿಮಾವನ್ನು ಗೆಲ್ಲಿಸಿದರೆ ಮಹೇಶ್ ಗೌಡ ಅವರ ಕಡೆಯಿಂದ ಮತ್ತೊಂದಷ್ಟು ಒಳ್ಳೆ ಸಿನಿಮಾಗಳು ರೂಪುಗೊಳ್ಳುತ್ತವೆಂದು ಪ್ರತಾಪ್ ಸಿಂಹ ಅಭಿಪ್ರಾಯ ಪಟ್ಟಿದ್ದಾರೆ.
ಪ್ರತಾಪ್ ಸಿಂಹ ಮಾತನಾಡಿ, “ಯಾರನ್ನೇ ಆದರೂ ಅವರ ದೈಹಿಕ ನ್ಯೂನತೆಗಳು, ಕಾಯಿಲೆಗಳ ಮೂಲಕ ಮಾನಸಿಕವಾಗಿ ಕುಗ್ಗಿಸುವಂತೆ ಮಾಡೋದು ಸರಿಯಲ್ಲ. ತೊನ್ನು ಕೂಡಾ ಸಾಮಾನ್ಯವಾದ ದೈಹಿಕ ಸಮಸ್ಯೆ. ಇಂಥ ಸಮಸ್ಯೆಗಳ ನಡುವೆಯೂ ಎದೆಗುಂದದೆ ಬದುಕಬೇಕು” ಎಂದು ಹಾರೈಸಿದ್ದಾರೆ.
ಹೊನ್ನುಡಿ ಪ್ರೊಡಕ್ಷನ್ಸ್ ಬ್ಯಾನರಿನಡಿಯಲ್ಲಿ ಈ ಸಿನಿಮಾ ನಿರ್ಮಾಣಗೊಂಡಿದೆ. ಕಾಜಲ್ ಕುಂದರ್, ವೀಣಾ ಸುಂದರ್, ರವಿ ಭಟ್, ಜಹಾಂಗೀರ್, ಲಕ್ಷ್ಮಿ ಸಿದ್ದಯ್ಯ ಮುಂತಾದವರು ನಟಿಸಿದ್ದಾರೆ. ಕಿರಣ್ ಸಿಎಚ್‌ಎಂ ಛಾಯಾಗ್ರಹಣ, ಮೊನಿಷ್ ಸಂಕಲನ, ರಿಯೋ ಆಂಟನಿ ಸಂಗೀತ- ಹಿನ್ನೆಲೆ ಸಂಗೀತ, ಅದಿತಿ ನಾರಾಯಣ್, ರಘು ನೃತ್ಯ ನಿರ್ದೇಶನ ಈ ಸಿನಿಮಾಕ್ಕಿದೆ.
