ವಜ್ರಮುನಿ ಅವತಾರದಲ್ಲಿ ಕೋಮಲ್ ಕುಮಾರ್ ಕಮಾಲ್; ಹರಿಶ್ಚಂದ್ರನ ಪಾತ್ರಕ್ಕೆ ಹೊಸ ಎಂಟ್ರಿ!

ನಟ ಕೋಮಲ್ ಹೊಸ ಲುಕ್‌ಗೆ ನೆಟ್ಟಿಗರಿಂದ ಮೆಚ್ಚುಗೆ...ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್...

Actor Komal kumar yela kunni teaser release new look catches cini lovers attention vcs

ಸ್ಯಾಂಡಲ್​ವುಡ್​ನ ನಟ ಭಯಂಕರ ವಜ್ರಮುನಿ ಸಿನಿಮಾದಲ್ಲಿದ್ದಾರೆ ಅಂದ್ರೆ ಮುಗಿತು ಹೀರೋಗಳು ಕೂಡ ಸೈಡ್​ಗೆ ಹೋಗಬೇಕು. ಹೀರೋಗಳು ತೆರೆ ಮೇಲೆ ವಿಜೃಂಭಿಸಬೇಕು ಅಂದ್ರೆ ಆ ಸಿನಿಮಾದಲ್ಲಿ ವಜ್ರಮುನಿ ವಿಲನ್ ಆಗಿರಲೇ ಬೇಕಿತ್ತು. ಇಂತಹ ವಜ್ರಮುನಿ ಈಗ ಎಲಾ ಕುನ್ನಿ ಅಂತ ತನ್ನ ಫೇಮಸ್ ಡೈಲಾಗ್ ಹೊಡೆಯುತ್ತಾ ಮತ್ತೆ ತೆರೆ ಮೇಲೆ ಬಂದಿದ್ದಾರೆ.ಸ್ಯಾಂಡಲ್‌ವುಡ್ ನಟ ಭಯಂಕರ, ನಟ ಭೈರವ ಅಂತ ಹೇಳುವುದು ಖಳನಟ ವಜ್ರಮುನಿ ಅವರಿಗೆ ಮಾತ್ರ. ವಜ್ರಮುನಿ ಅವರ ಕಂಚಿನ ಕಂಠ, ಬೆಂಕಿ ಉಗುಳೋ ಕಣ್ಣುಗಳು, ರೋಷ, ದ್ವೇಶವನ್ನ ತೋರಿಸೋ ಅವರ ಅಭಿನಯ ನೋಡಿದ್ರೆ ಎಂಥವರು ಒಮ್ಮೆ ಹೆದರಿಕೊಳ್ಳುತ್ತಾರೆ. ವಜ್ರಮನಿ ಅವರಿಗೆ ವಜ್ರಮುನಿ ಅವರೇ ಸರಿ ಸಾಟಿ, ವಜ್ರಮುನಿಯಂತಹ ಮತ್ತೊಬ್ಬ ಖಳನಟ ಕನ್ನಡಕ್ಕೆ ಇದುವರೆಗೂ ಸಿಕ್ಕೇ ಇಲ್ಲ

ಯೆಸ್! ನಟ ಭಯಂಕರ ವಜ್ರಮುನಿ ಮತ್ತೆ ಸ್ಯಾಂಡಲ್​ವುಡ್​​ನಲ್ಲಿ ಸೌಂಡ್ ಮಾಡುತ್ತಿದ್ದಾರೆ. ಅದಕ್ಕೆ ಕಾರಣ ಕಾಮಿಡಿ ಸ್ಟಾರ್ ಕೋಮಲ್ ಕುಮಾರ್. ಕೋಮಲ್​ ಈಗ ಎಲಾ ಕುನ್ನಿ ಅಂತ ಸಿನಿಮಾ ಮಾಡುತ್ತಿದ್ದಾರೆ. ಎಲಾ ಕುನ್ನಿ ವಜ್ರಮುನಿ ಅವರ ಸಿನಿಮಾದ ಫೇಮಸ್ ಡೈಲಾಗ್. ಈ ಡೈಲಾಗೇ ಈಗ ಸಿನಿಮಾ ಟೈಟಲ್ ಆಗಿದ್ದು, ಎಲಾ ಕುನ್ನಿ ಟೀಸರ್ ರಿಲೀಸ್ ಆಗಿದೆ. ಕೋಮಲ್​ ಕುಮಾರ್ ಎಲಾ ಕುನ್ನಿ ಲುಕ್​​ ಸಿಕ್ಕಾಪಟ್ಟೆ ಟ್ರೆಂಡ್ ಆಗಿತ್ತು. ಯಾಕಂದ್ರೆ ಕೋಮಲ್ ಥೇಟ್ ವಜ್ರಮುನಿ ಅವರಂತೇ ಕಾಣಿಸಿಕೊಂಡಿದ್ರು. ಈಗ ಎಲಾ ಕುನ್ನಿ ಟೀಸರ್ ಬಂದಿದೆ. ವಜ್ರಮುನಿ ಅವತಾರದಲ್ಲಿ ಕೋಮಲ್​ ವಿಜೃಂಭಿಸಿದ್ದಾರೆ.  ಇಲ್ಲಿ ಕೋಮಲ್​​ರದ್ದು ಡಬಲ್ ರೋಲ್. ಒಂದು ವಜ್ರಮುನಿ ಆದ್ರೆ ಮತ್ತೊಂದು ಅವರ ಮಗ ಸತ್ಯ ಹರಿಶ್ಚಂದ್ರನ ಪಾತ್ರ. 

ಜೊತೆಗಿದ್ದ ಯುವತಿಗೆ ಲೈಂಗಿಕ ಕಿರುಕುಳ ಕೊಟ್ರಾ ಜಾನಿ ಮಾಸ್ಟರ್; ಏನಿದು ಲವ್ ಸೆಕ್ಸ್ ಧೋಖಾ?

ವಜ್ರಮುನಿ ಅವರ ಪಾತ್ರಕ್ಕೆ ಎಐ ತಂತ್ರಜ್ಞಾನ ಬಳಸಿ ರಿಯಲ್ ವಜ್ರಮುನಿ ವಾಯ್ಸ್ ಇಟ್ಟಿದ್ದಾರೆ. ವಜ್ರಮುನಿ ಮಗ ಸತ್ಯ ಹರಿಶ್ಚಂದ್ರನ ಚೈಲ್ಡ್​ವುಡ್ ರೋಲ್​​ನ ವಜ್ರಮುನಿ ಅವರ ರೀಯಲ್​ ಮೊಮ್ಮಗ ಆಕರ್ಶ ನಟಿಸಿದ್ದಾನೆ. ದತ್ತಣ್ಣ ಮಿತ್ರಾ ಶಿವರಾಜ್ ಕೆ ಆರ್ ಪೇಟೆ ರಾಜು ತಾಳಿಕೋಟೆ, ಮಾನಸ ಸುದೀರ್​, ಸುಮನ್ಅಗರ್ ಕಾರ್ ಚಿತ್ರದಲ್ಲಿದ್ದಾರೆ. ಕೋಮಲ್​ ಸಹನಾ ಮೂರ್ತಿ ನಿರ್ಮಾಣದ ಎಲಾ ಕುನ್ನಿ ಚಿತ್ರಕ್ಕೆ ಎನ್ ಆರ್​​​ ಪ್ರದೀಪ್ ಆಕ್ಷನ್ ಕಟ್ ಹೇಳಿದ್ದಾರೆ.

5 ವರ್ಷದ ಬಳಿಕವೂ ನಿಂತಿಲ್ಲ 'ಕುರುಕ್ಷೇತ್ರ'ದ ಶಾಪ; ಅಂಬಿ, ದರ್ಶನ್, ನಿಖಿಲ್, ಮೇಘನಾ....ಇನ್ನು ಯಾರಿದ್ದಾರೆ?

Latest Videos
Follow Us:
Download App:
  • android
  • ios