Asianet Suvarna News Asianet Suvarna News

ಸಿನಿಮಾ ನೋಡಲ್ಲ ಗೆಲ್ಲಿಸುವುದಿಲ್ಲ ಅಂದ್ರೆ ಪರ್ವಾಗಿಲ್ಲ ನೋಡುವವರಿಗೆ ಮಾಡೋಣ; ಕಿಚ್ಚ ಸುದೀಪ್‌ ಕೊಟ್ಟ ಟಾಂಗ್ ವೈರಲ್

ಪೆಪ್ಪೆ ಸಿನಿಮಾ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ಬಗ್ಗೆ ಧ್ವನಿ ಎತ್ತಿದ ಕಿಚ್ಚ ಸುದೀಪ್. ಆಲದ ಮರ ಬೆಳೆದು ನಿಂತಿದೆ ಯಾರೂ ಬೀಳಿಸುವುದಕ್ಕೆ ಆಗಲ್ಲ ಎಂದ ನಟ....
 

Actor Kiccha Sudeep says Kannada film industry is like big banyan tress in pepe film trailer launch event vcs
Author
First Published Aug 19, 2024, 12:28 PM IST | Last Updated Aug 19, 2024, 12:28 PM IST

ವಿನಯ್ ರಾಜ್‌ಕುಮಾರ್ ನಟನೆಯ ಪೆಪ್ಪೆ ಸಿನಿಮಾದ ಟ್ರೈಲರ್ ರಿಲೀಸ್ ಕಾರ್ಯಕ್ರಮ ಬೆಂಗಳೂರಿನ ಮಾಲ್ ಆಫ್‌ ಏಷ್ಯಾದಲ್ಲಿ ಅದ್ಧೂರಿಯಾಗಿ ನಡೆದಿದೆ. ದೊಡ್ಡ ಮನೆಗೆ ಹತ್ತಿರವಾಗಿರುವ ನಟ ಕಿಚ್ಚ ಸುದೀಪ್ ವಿಶೇಷ ಅತಿಥಿಯಾಗಿ ಆಗಮಿಸಿ ಟ್ರೈಲರ್ ಲಾಂಚ್ ಮಾಡಿಕೊಟ್ಟರು. ಟ್ರೈಲರ್ ನೋಡುತ್ತಿದ್ದಂತೆ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಾಗೋದು ಗ್ಯಾರಂಟಿ. ಈ ವೇಳೆ ವೇದಿಕೆ ಮೇಲೆ ಕಿಚ್ಚ ಸುದೀಪ್ ಕನ್ನಡ ಚಿತ್ರರಂಗದ ಬಗ್ಗೆಯೂ ಮಾತನಾಡಿದ್ದಾರೆ. 

' ಆಲದ ಮರ ಸಸಿಯಾಗಿರುವಾಗ ಯಾವ ಸೈಜ್ ಇರುತ್ತದೆ? ದೊಡ್ಡದಾಗುತ್ತಾ ಎಷ್ಟು ದೊಡ್ಡದಾಗುತ್ತೆ? ದೊಡ್ಡದಾದ ಮೇಲೆ ಸೀಸನ್‌ ಬದಲಾಗುತ್ತದೆ, ಸಮ್ಮರ್‌ನಲ್ಲಿ ಎಲೆಗಳು ಉದುರಿ ಹೋಗುತ್ತದೆ, ಮಳೆಗಾಲ ಎಲೆಗಳು ಚಿಗುರುತ್ತದೆ. ಒಂದು ಸಸಿಯಷ್ಟು ಇದ್ದ ಕನ್ನಡ ಚಿತ್ರರಂಗ ಬಹಳಷ್ಟು ವರ್ಷಗಳಿಂದ ಆಲದ ಮರವಾಗಿ ಬೆಳೆದ ಮೇಲೆ, ಇವತ್ತಿಗೆ ಬಿದ್ದು ಹೋಯ್ತು ಸೋತ್ತು ಹೋಯ್ತು ಹಾಗೂ ಗೆಲ್ಸಿ.....ನಾವು ಅರ್ಥ ಮಾಡಿಕೊಳ್ಳಬೇಕಾಗಿದ್ದು ಏನು ಅಂದ್ರೆ ಎಲ್ಲಾ ಚಿತ್ರರಂಗನೂ ನಮ್ಮ ಲೈಫ್‌ಗೂ ಡಿಫರೆಂಟ್. ಸೋಲೋದೇ ಗೆಲ್ಲುವುದಕ್ಕೆ ಹೀಗಿರುವಾಗ ನಮ್ಮ ಕನ್ನಡ ಚಿತ್ರರಂಗದಲ್ಲಿ ಎಷ್ಟು ಕನ್ನಡ ಸಿನಿಮಾ ಸೋತ್ತಿದೆ? ಈ 70 ವರ್ಷಗಳಲ್ಲಿ ಎಷ್ಟು ಸಿನಿಮಾಗಳು ಸೋತಿದೆ ಎಷ್ಟು ಸಿನಿಮಾಗಳು ಗೆದ್ದಿದೆ? ಎಷ್ಟು ಕಷ್ಟಗಳು ಎದುರಾದರೂ ಕನ್ನಡ ಚಿತ್ರರಂಗ ಎಷ್ಟು ದೃಢವಾಗಿ ನಿಂತಿದೆ? ಕನ್ನಡ ಸಿನಿಮಾ ಸೋಲುತ್ತಿದೆ ನೀವು ಗೆಲ್ಲಿಸಬೇಕು ಎಂದು ನಾವು ಕರ್ನಾಟಕದಲ್ಲಿ ಇದ್ದು ಕನ್ನಡ ಜನತೆಗಳನ್ನು ಕೇಳುವುದೇ ಮೊದಲ ತಪ್ಪು' ಎಂದು ಕಿಚ್ಚ ಸುದೀಪ್ ಮಾತನಾಡಿದ್ದಾರೆ.

ಹರ್ಷಿಕಾ ಮನೆಯಲ್ಲಿ ಹಬ್ಬದ ಸಂಭ್ರಮ; ವರಮಹಾಲಕ್ಷ್ಮಿ ಮುಂದೆ ಮಂಡಿಯೂರಿದ್ದೀರಿ ಲಕ್ಷ್ಮಿನೇ ಬರೋದು ಎಂದ ನೆಟ್ಟಿಗರು!

'ನಿಮ್ಮನ್ನು ನೀವು ನಂಬಿ ಕೆಲಸ ಮಾಡಿ ನಮ್ಮ ವೀಕ್ಷಕರನ್ನು ನಂಬಿ ಗೆಲ್ಲಿಸುತ್ತಾರೆ, ಸಿನಿಮಾ ನೋಡೋಕೆ ಆಗದೇ ಇರುವವರು ಸಿನಿಮಾ ನೋಡೋದು ಬೇಡ, ನೋಡುವವರಿಗೋಸ್ಕರ ಸಿನಿಮಾ ಮಾಡಿ. ಮನೆಯಲ್ಲಿ ಚೆನ್ನಾಗಿ ಅಡುಗೆ ಮಾಡಲ್ವಾ...ಹಾಗಂತ ಹೋಟೆಲ್‌ನಲ್ಲಿ ಊಟ ಮಾಡಲ್ವಾ? ಹೋಟೆಲ್‌ನಲ್ಲಿ ಊಟ ಮಾಡಿದ್ದೀವಿ ಅಂತ ಮನೆಯಲ್ಲಿ ಊಟ ಮಾಡಲ್ವಾ? ಕನ್ನಡ ಸಿನಿಮಾ ಸೋಲುವುದಕ್ಕೆ ಏನೋ ಒಂದು ಕಾರಣವಾಯ್ತು ಅನ್ನೋದಕ್ಕಿಂತ ಹೆಚ್ಚಾಗಿ ಒಳ್ಳೆ ಸಿನಿಮಾಗಳು ಬಂದಿರುವುದಿಲ್ಲ ಅದು ಒಂದೇ ಸ್ಟ್ರೆಚ್‌ನಲ್ಲಿ ಆಗಿರುತ್ತದೆ' ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.

Latest Videos
Follow Us:
Download App:
  • android
  • ios