ಇಂದು (ಫೆ.28) ಶುಕ್ರ​ವಾರ ತೆರೆ ಕಾಣು​ತ್ತಿದೆ. ಫೆ.28ರಂದು ಚಿತ್ರ​ಮಂದಿ​ರಕ್ಕೆ ಸಿನಿಮಾ ಬರು​ತ್ತಿ​ರುವ ಪ್ರಯು​ಕ್ತ​ವಾಗಿ ಚಿತ್ರ​ತಂಡ ಮಾಧ್ಯ​ಮ​ಗಳ ಮುಂದೆ ಬಂತು. ದಿನ​ಕರ್‌ ಕಪೂರ್‌ ನಿರ್ದೇ​ಶನ, ಅಮೂಲ್ಯ ದಾಸ್‌ ನಿರ್ಮಾಣ ಮಾಡಿ​ರುವ ಚಿತ್ರ​ವಿದು. ಹಾಸ್ಯ ನಟ ಕೃಷ್ಣ ಅಭಿ​ಷೇಕ್‌, ಅರ್ಜುನ್‌ ಮುಘಲ್‌, ಅನು​ಸ್ಮೃತಿ ಸರ್ಕಾರ್‌, ಅನಘ ದೇಸಾಯಿ, ಪ್ರದೀಪ್‌ ಕಬ್ರ ಮುಂತಾ​ದ​ವರು ಚಿತ್ರದ ಮುಖ್ಯ ಪಾತ್ರ​ಗ​ಳಲ್ಲಿ ನಟಿ​ಸಿ​ದ್ದಾರೆ. ಕನ್ನ​ಡ​ದಲ್ಲಿ ಈ ಚಿತ್ರ​ವನ್ನು ನರ್ಗಿಸ್‌ ಬಾಬು ಬಿಡು​ಗಡೆ ಮಾಡು​ತ್ತಿ​ದ್ದಾರೆ.

ಸಿನಿಮಾ ಬಿಡು​ಗಡೆ ಆಗು​ತ್ತಿ​ರುವ ಹೊತ್ತಿ​ನಲ್ಲಿ ನಟ ಜೆಕೆ ಮುಖ​ದಲ್ಲಿ ಸಂಭ್ರಮ ಇತ್ತು. ‘ಧಾರಾ​ವಾಹಿ ಮೂಲಕ ಬಾಲಿ​ವುಡ್‌ ಪ್ರವೇಶ ಮಾಡಿದೆ. ರಾವ​ಣ​ನಾಗಿ ನನ್ನ ಅಲ್ಲಿನ ಪ್ರೇಕ್ಷ​ಕರು ಸ್ವೀಕ​ರಿ​ಸಿ​ದರು. ಅದೇ ಖ್ಯಾತಿ ನನ್ನ ಹಿಂದಿ ಮತ್ತು ಕನ್ನಡ ಚಿತ್ರಕ್ಕೆ ನಾಯಕ​ನ್ನಾ​ಗಿ​ಸಿದೆ. ಓ ಪುಷ್ಪ ಐ ಹೇಟ್‌ ಟಿಯರ್ಸ್‌ ಎನ್ನು​ವುದು ಕಾಮಿಡಿ ಕಂ ಥ್ರಿಲ್ಲರ್‌ ಸಿನಿಮಾ. ಬಹು ದೊಡ್ಡ ತಾರಾ​ಗ​ಣ​ವನ್ನು ಒಳ​ಗೊಂಡಿ​ರುವ ಸಿನಿಮಾ. ಈ ಚಿತ್ರ​ದಲ್ಲಿ ನನ್ನ ಪಾತ್ರ ತುಂಬಾ ಚೆನ್ನಾ​ಗಿದೆ. ಪ್ರೇಮ ಕತೆ ಜತೆಗೆ ಥ್ರಿಲ್ಲರ್‌ ಅಂಶ ಇರು​ವುದು ಅಪ​ರೂಪ. ಈ ಹಿನ್ನೆ​ಲೆ​ಯಲ್ಲಿ ಈ ಸಿನಿಮಾ ವಿಶೇಷ ಎನ್ನ​ಬ​ಹುದು. ಒಂದು ಒಳ್ಳೆಯ ವೃತ್ತಿ​ಪರ ತಂಡದ ಜತೆಗೆ ಕೆಲಸ ಮಾಡಿದ ಖುಷಿ ನನಗೆ ಇದೆ’ ಎಂದರು ಜೆಕೆ.

ಕನ್ನಡದಲ್ಲಿಯೂ ಬರುತ್ತಿದೆ ಜೆಕೆ ನಟನೆಯ `ಓ ಪುಷ್ಪಾ ಐ ಹೇಟ್ ಟಿಯರ್ಸ್'!

ನಿರ್ದೇ​ಶಕ ದಿನ​ಕರ್‌ ಕಪೂರ್‌ ಅವ​ರಿಗೆ ಎರಡು ಭಾಷೆ​ಯಲ್ಲಿ ಸಿನಿಮಾ ತೆರೆಗೆ ಬರು​ತ್ತಿ​ರು​ವುದು ಮೊದಲ ಅನು​ಭವ. ಡಬ್ಬಿಂಗ್‌ ಸ್ಟುಡಿ​ಯೋ​ದಲ್ಲಿ ಚಿತ್ರ​ವನ್ನು ನೋಡಿ ನರ್ಗಿಸ್‌ ಬಾಬು ಅವರು ಕನ್ನ​ಡ​ದಲ್ಲೂ ಈ ಚಿತ್ರ​ವನ್ನು ಬಿಡು​ಗಡೆ ಮಾಡು​ವು​ದಕ್ಕೆ ಮುಂದಾ​ಗಿ​ದ್ದನ್ನು ನಿರ್ದೇ​ಶ​ಕರು ನೆನ​ಪಿ​ಸಿ​ಕೊಂಡರು. ಒಟ್ಟು 300 ಚಿತ್ರ​ಮಂದಿ​ರ​ಗ​ಳಲ್ಲಿ ‘ಓ ಪುಷ್ಪ ಐ ಹೇಟ್‌ ಟಿಯರ್ಸ್‌’ ಚಿತ್ರ ಬಿಡು​ಗಡೆ ಆಗು​ತ್ತಿದೆ, ಎಲ್ಲ​ರಿಗೂ ಇಷ್ಟ​ವಾ​ಗುವ ಸಿನಿಮಾ ಇದು ಎಂಬು​ದ​ರಲ್ಲಿ ಅನು​ಮಾ​ನ​ವಿಲ್ಲ ಎನ್ನು​ತ್ತಾರೆ ನಿರ್ದೇ​ಶ​ಕರು. ನಾಯಕಿ ಅನು​ ಸ್ಮೃತಿ ಸರ್ಕಾರ್‌ ಅವ​ರಿಗೆ ಇದು ಮೊದಲ ಸಿನಿಮಾ. ಹಿಂದಿ​ಯಲ್ಲಿ ಕಂಡ ಯಶಸ್ಸು, ಕನ್ನ​ಡ​ದಲ್ಲೂ ಕಾಣುವ ಭರ​ವಸೆ ಅವ​ರದ್ದು. ಅರವಿಂದ್‌ ಸಿಂಗ್‌ ಪೂವಾರ್‌ ಛಾಯಾಗ್ರಹಣ, ರಾಂಜಿ ಗುಲಾಟಿ ಸಂಗೀತ ಈ ಚಿತ್ರ​ಕ್ಕಿದೆ.

 

 
 
 
 
 
 
 
 
 
 
 
 
 

A great show at @redfm_india935 Bajaate Raho for the promotion of our upcoming movie O’ Pushpa I Hate Tears ☺️ O’Pushpa I Hate Tears releasing on 28th feb 2020 in Hindi & Kannada 😍 so please go and watch at your nearest theatres 🤗 @arjummanmughalofficial @anusmritisarkarofficial @starbuzzstudios @opiht_thefilm @star__bollybuzz @krushna30 🤗 Love You All 🤗 Om Sai Ram @sanjay_choraria @jfit47 Shivaraju Gowda #bollywood #sandalwood #kannadamovies #movies #films #jkfans #jkfanclub #jkfanclubforever #pushpaihatetears #motivation #inspiration #workout #gym #lotussportsandfitness #vriddhifitnessandwellness #bodybuilding #bodytransformation #health #fitindia #BangaloreTimes #timesofindia #tiktok @suvarnanews @fortunelifeline

A post shared by Karthik Jayaram (@karthik.jayaram) on Feb 25, 2020 at 5:36pm PST