ನಟ,ಪತ್ರಕರ್ತ ಯತಿರಾಜ್‌ 'ಮೈಂಡ್‌ ಇಟ್‌' ಕಿರುಚಿತ್ರಕ್ಕೆ ನಟ ವಸಿಷ್ಠ ಸಿಂಹ ಹಿನ್ನಲೆ ಧ್ವನಿ. 

ಹೆಲ್ಮೆಟ್‌ನ ಮಹತ್ವ ಸಾರುವ ಚಿತ್ರವನ್ನು ನಟ, ಪತ್ರಕರ್ತ ಯತಿರಾಜ್ ಕಲಾವಿದ ಫಿಲಂ ಅಕಾಡೆಮಿ ಮೂಲಕ ನಿರ್ಮಿಸಿದ್ದಾರೆ. ಮುಖ್ಯ ಪಾತ್ರದಲ್ಲೂ ನಟಿಸಿದ್ದಾರೆ. ಆರು ನಿಮಿಷದ ಈ ಕಿರುಚಿತ್ರ ಹೆಲ್ಮೆಟ್ ಇಲ್ಲದ ಬೈಕ್ ಸವಾರಿ ಹೇಗೆ ಮಾರಣಾಂತಿಕ ಎಂಬುದನ್ನು ಮನದಟ್ಟು ಮಾಡುವ ಪ್ರಯತ್ನ ಮಾಡುತ್ತದೆ. ಸಂಚಾರಿ ವಿಜಯ್ ಅವರ ದುರ್ಮರಣವನ್ನೂ ನೆನಪಿಸುತ್ತದೆ. ವಸಿಷ್ಠ ಸಿಂಹ ಅವರ ಹಿನ್ನೆಲೆ ದನಿಯೊಂದಿಗೆ ಮೂಡಿಬಂದಿದೆ.

ಸಂಚಾರಿ ವಿಜಯ್‌ ಬಗ್ಗೆ ಹಬ್ಬಿಸುತ್ತಿದ್ದಾರೆ ಬೇಡದ ಸುದ್ದಿ! 

ಆತನೊಬ್ಬ ರಂಗಭೂಮಿ ಕಲಾವಿದ. ಅಡಿಶನ್‌ನಲ್ಲಿ ಈತನ ಅಭಿನಯ ಕಂಡ ಸಿನಿಮಾ ನಿರ್ದೇಶಕರು ತಮ್ಮ ಸಿನಿಮಾಕ್ಕೆ ನಾಯಕನನ್ನಾಗಿ ಮಾಡುತ್ತಾರೆ. ಈ ಖುಷಿಯನ್ನುಪತ್ನಿಯೊಂದಿಗೆ ಹಂಚಿಕೊಂಡು ತನ್ನ ಸಿನಿಮಾದ ಮುಂಗಡ ಹಣ ಪಡೆಯಲು ಬೈಕ್‌ನಲ್ಲಿ ಹೆಲ್ಮೆಟ್ ಧರಿಸದೇ ಹೋಗುತ್ತಾನೆ. ನಡುವೆ ಫೋನ್‌ನಲ್ಲಿ ಮಾತನಾಡುತ್ತಾ ಹಳ್ಳ ತಪ್ಪಿಸಲು ಹೋಗಿ ಬಿದ್ದು ಪ್ರಾಣ ಕಳೆದುಕೊಳ್ಳುತ್ತಾನೆ. ನಯನ, ಬೆಂ ಕೋ ಶ್ರೀನಿವಾಸ್, ಬೇಬಿ ಸ್ಮೃತಿ ನಟಿಸಿದ್ದಾರೆ.