ಅತ್ತ ಪ್ರತಿಭಾನ್ವಿತ ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ನಂತರ ಬಾಲಿವುಡ್‌ನ ನೆಪೋಟಿಸಂ ಕೂಗು ಸಿಕ್ಕಾಪಟ್ಟೆ ಮುನ್ನಲೆಗೆ ಬರುತ್ತಿದೆ. ಈ ಹೊತ್ತಲ್ಲೇ ಅಶ್ವಿನಿ ನಕ್ಷತ್ರ ಧಾರಾವಾಹಿ ಖ್ಯಾತಿಯ ನಟ ಜೆಕೆ ಅಲಿಯಾಸ್‌ ಜಯರಾಮ್‌ ಕಾರ್ತಿಕ್‌  ಸ್ಯಾಂಡಲ್‌ವುಡ್‌ನಲ್ಲಿ ನಡೆಯುತ್ತಿರುವ ನೆಪೊಟಿಸಂ ಬಗ್ಗೆ ಮಾತನಾಡಿದ್ದಾರೆ.  ಸ್ವತಃ ನೆಪೊಟಿಸಂಗೆ ತುತ್ತಾಗಿರುವುದಾಗಿ ಜೆಕೆ ಹೇಳಿರುವ ಮಾತುಗಳಿವು...

ಜೆಕೆ ಹೇಳಿಕೆ:
ಖಾಸಗಿ ವಾಾಹಿನಿಯ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದ ನಟ ಜಯರಾಮ್‌ ಕಾರ್ತಿಕ್‌, ಕನ್ನಡ ಚಿತ್ರರಂಗದಲ್ಲಿ ನಡೆಯುತ್ತಿರುವ ಸ್ವಜನಪಕ್ಷಪಾತ ಬಗ್ಗೆ ನೇರವಾಗಿ ತಮ್ಮ ಅಭಿಪ್ರಾಯ ಮತ್ತು ಅನುಭವವನ್ನು ಹಂಚಿಕೊಂಡಿದ್ದಾರೆ.  

'ಸ್ಯಾಂಡಲ್‌ವುಡ್‌‌ನಲ್ಲಿಯೂ ಸ್ವಜನಪಕ್ಷಪಾತ ಹಾಗೂ ನಂಬಿಕೆ ದ್ರೋಹ ಇದೆ. ಚಿತ್ರರಂಗದಲ್ಲಿ ಒಳ ರಾಜಕೀಯ ಇರೋದು ಎಲ್ಲರಿಗೂ ಗೊತ್ತು. ಅದನ್ನು ನಾನು ಸ್ವತಃ ಅನುಭವಿಸಿದ್ದೇನೆ. ಅರ್ಹತೆ ಇರುವ ಇನ್ನೊಬ್ಬರ ಸಾಧನೆಗೆ ಅಡ್ಡಗಾಲು ಹಾಕುತ್ತಾರೆ,' ಎಂದು ಜೆಕೆ ಹೇಳಿದ್ದಾರೆ.

'ಮಾಳಿಗೈ' ಚಿತ್ರದ ಮೂಲಕ ಕಾಲಿವುಡ್‌ಗೆ ಕಾಲಿಟ್ಟಜೆಕೆ

ಇನ್ನು ಚಿತ್ರರಂಗದಲ್ಲಿ ನೆಪೊಟಿಸಂ ತೊಲುಗುವವರೆಗೂ ಪರಿಸ್ಥಿತಿ ಸುಧಾರಿಸುವುದು ಕಷ್ಟ. ಹಾಗೂ ಅವರವರ ಸಾಮ್ರಾಜ್ಯ ಉಳಿಸಿಕೊಳ್ಳವ ಪ್ರಯತ್ನದಲ್ಲಿ ಬೇರೆಯವರನ್ನು ನಾಶ ಮಾಡಲಾಗುತ್ತಿದೆ. ನಮ್ಮ ಚಿತ್ರರಂಗದಲ್ಲಿ ಹೊಸಬರಿಗೆ ಮಾತ್ರವಲ್ಲ, ಈಗಾಗಲೇ ಗುರುತಿಸಿಕೊಂಡವರಿಗೂ ನೆಪೊಟೊಸಂ ಕಾಟ ತಪ್ಪಿದ್ದಲ್ಲ,' ಎಂದು ಮುಕ್ತವಾಗಿ ಮಾತನಾಡಿದ್ದಾರೆ.

ಜೆಕೆ ಜರ್ನಿ:
2013-2015ರಲ್ಲಿ ಅತಿ ಹೆಚ್ಚು ಜನಪ್ರಿಯತೆ ಪಡೆದುಕೊಂಡ ಧಾರಾವಾಹಿ 'ಅಶ್ವಿನಿ ನಕ್ಷತ್ರ'ದ ಪ್ರಮುಖ ಪಾತ್ರಧಾರಿ ಜಯರಾಮ್ ಕಾರ್ತಿಕ್ ಬಿಗ್‌ ಬಾಸ್‌ ಸೀಸನ್‌ 5ರಲ್ಲಿ ಸ್ಪರ್ಧಿಸುವ ಮೂಲಕ ಪ್ರೇಕ್ಷಕರ ಮನಸ್ಸಿಗೆ ಇನ್ನಷ್ಟು ಹತ್ತಿರವಾದರು. ಈ ಅವಧಿಯಲ್ಲಿ ಅನೇಕ ಕನ್ನಡ ಸಿನಿಮಾಗಳಲ್ಲಿ ಸಪೋರ್ಟಿಂಗ್ ರೋಲ್‌ನಲ್ಲಿಯೂ ಕಾಣಿಸಿಕೊಂಡಿದ್ದರು.  ಅಷ್ಟೆ ಅಲ್ಲದೆ 'ಜಸ್ಟ್‌ ಲವ್', ಬೆಂಗಳೂರು 560023' ಮತ್ತು 'ಆ ಕರಾಳ ರಾತ್ರಿ' ಸಿನಿಮಾದಲ್ಲಿ ನಟನಾಗಿ ಅಭಿನಯಿಸಿದ್ದಾರೆ. 6 ಬಾರಿ ಉತ್ತಮ ನಟ ಪ್ರಶಸ್ತಿಗೆ ಆಯ್ಕೆಯಾದರೂ ಯಾವುದು ದೊರೆತಿಲ್ಲ.