ಕೊಲೆ ಆರೋಪದ ಮೇಲೆ ನಟ ದರ್ಶನ್‌ ಜೈಲು ಸೇರಿದ ಬೆನ್ನಲ್ಲೇ ಕನ್ನಡ ಚಿತ್ರರಂಗದ ಹಿರಿಯ ನಟ ನವರಸ ನಾಯಕ, ರಾಜಕಾರಣಿ ಜಗ್ಗೇಶ್‌ ಮಾಡಿರುವ ಟ್ವೀಟ್‌ ಎಲ್ಲೆಡೆ ವೈರಲ್‌ ಆಗುತ್ತಿದ್ದು, ಬಹಳ ಚರ್ಚೆಗೆ ಗ್ರಾಸವಾಗುತ್ತಿದೆ.

ಬೆಂಗಳೂರು (ಜೂ.12): ಕೊಲೆ ಆರೋಪದ ಮೇಲೆ ನಟ ದರ್ಶನ್‌ ಜೈಲು ಸೇರಿದ ಬೆನ್ನಲ್ಲೇ ಕನ್ನಡ ಚಿತ್ರರಂಗದ ಹಿರಿಯ ನಟ ನವರಸ ನಾಯಕ, ರಾಜಕಾರಣಿ ಜಗ್ಗೇಶ್‌ ಮಾಡಿರುವ ಟ್ವೀಟ್‌ ಎಲ್ಲೆಡೆ ವೈರಲ್‌ ಆಗುತ್ತಿದ್ದು, ಬಹಳ ಚರ್ಚೆಗೆ ಗ್ರಾಸವಾಗುತ್ತಿದೆ. ದರ್ಶನ್ ಅವರ ಹೆಸರನ್ನೂ ಎಲ್ಲೂ ಪ್ರಸ್ತಾಪಿಸದ ನಟ ಜಗ್ಗೇಶ್‌ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ ಎನ್ನಲಾಗಿದೆ. 

‘ಸರ್ವ ಆತ್ಮಾನೇನ ಬ್ರಹ್ಮ’ ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದಾರೆ. ಇದರ ಅರ್ಥವನ್ನು ಅವರು ವಿವರಿಸಿದ್ದಾರೆ. ‘ಸರ್ವ ಜೀವಿಯಲ್ಲಿ ದೇವರಿದ್ದಾನೆ. ಯಾರನ್ನು ಕೊಲ್ಲುವ ಹಕ್ಕು ಯಾರಿಗೂ ಇಲ್ಲ’ ಎಂದು ಜಗ್ಗೇಶ್ ಹೇಳಿದ್ದಾರೆ. ಈ ಮೂಲಕ ಅವರು ದರ್ಶನ್ ಬಗ್ಗೆಯೇ ಟ್ವೀಟ್ ಮಾಡಿದ್ದಾರೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ‘ಕರ್ಮ ಜೀವನವನ್ನು ಹಿಂಬಾಲಿಸುತ್ತದೆ. ಅವನ ಪಾಪಕರ್ಮ ಅವನ ಸುಡುತ್ತದೆ. 

Scroll to load tweet…


ಕಲಿಯುಗದಲ್ಲಿ ದೇವರು ಕಲ್ಲಲ್ಲ. ಎಲ್ಲಾ ಕರ್ಮಕ್ಕೂ ತತ್ತಕ್ಷಣ ಫಲಿತಾಂಶ ಉಂಟು. ರಾಮನಾಗು ರಾವಣನಾದರೆ ಅಂತ್ಯ ಎಂದಿದೆ ಸನಾತನ ಕೃತಿ’ ಎಂದು ಅವರು ಬರೆದುಕೊಂಡಿದ್ದಾರೆ. ‘ಮದಕ್ಕೆ ಕಾರುಣ್ಯದ ಅರಿವಿಲ್ಲಾ’ ಎನ್ನುವ ವಾಕ್ಯವನ್ನೂ ಜಗ್ಗೇಶ್ ಅವರು ಬಳಸಿದ್ದಾರೆ. ಅಂದರೆ ಮದ ಇದ್ದವನಿಗೆ ಕರುಣೆ ಎಂಬುದೆಲ್ಲ ಇರುವುದಿಲ್ಲ ಎಂಬುದು ಈ ವಾಕ್ಯದ ಅರ್ಥ. ಈ ಟ್ವೀಟ್ ಸಖತ್ ವೈರಲ್ ಆಗುತ್ತಿದೆ.

ಈ ಹಿಂದೆ ದರ್ಶನ್ ಅಭಿಮಾನಿಗಳು ಮುತ್ತಿಗೆ ಹಾಕಿದ್ದರು: ಕನ್ನಡದ ಹಿರಿಯ ನಟ ಜಗ್ಗೇಶ್ ಹಾಗೂ ದರ್ಶನ್ ಅಭಿಮಾನಿಗಳ ನಡುವೆ ಈ ಹಿಂದೆ ವಿವಾದ ಸೃಷ್ಟಿ ಆಗಿತ್ತು. ಆ ವಿವಾದ ದೊಡ್ಡ ಮಟ್ಟಕ್ಕೆ ತಲುಪಿತ್ತು. ಮೈಸೂರಿನಲ್ಲಿ ಜಗ್ಗೇಶ್ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದ ವೇಳೆ, ಸ್ಥಳಕ್ಕೆ ಕೆಲವು ದರ್ಶನ್ ಅಭಿಮಾನಿಗಳು ಮುತ್ತಿಗೆ ಹಾಕಿದ್ದರು. ಜಗ್ಗೇಶ್ ಅವರ ವಿರುದ್ಧ ಧಿಕ್ಕಾರ ಕೂಗಿದ್ದರು. 

ದರ್ಶನ್​ ಬಂಧನ ಬೆನ್ನಲ್ಲೇ ಇನ್​ಸ್ಟಾದಲ್ಲಿ ಪತಿಯನ್ನು ಅನ್​ಫಾಲೋ ಮಾಡಿ ಡಿಪಿ ಡಿಲೀಟ್‌ ಮಾಡಿದ ವಿಜಯಲಕ್ಷ್ಮಿ!

ದರ್ಶನ್ ಅಭಿಮಾನಿಗಳು ಈ ರೀತಿ ಮುತ್ತಿಗೆ ಹಾಕಲು ನಟ ಜಗ್ಗೇಶ್ ಅವರು ಮಾತನಾಡಿದ ಆಡಿಯೋ ಒಂದು ಕಾರಣ ಆಗಿತ್ತು. ಹಾಗಾಗಿ ದರ್ಶನ್ ಅವರ ಬಗ್ಗೆ ನೀವು ಮಾತನಾಡಿದ್ದು ಸರಿಯಿಲ್ಲ, ನೀವು ಫ್ಯಾನ್ಸ್ ಬಳಿ ಕ್ಷಮೆ ಕೇಳಿ ಎಂದು ದರ್ಶನ್ ಅಭಿಮಾನಿಗಳು ಜಗ್ಗೇಶ್‌ ಅವರನ್ನು ಮುತ್ತಿಕೊಂಡಿದ್ದರು. ಈ ಘಟನೆಯಿಂದ ನಟ ಜಗ್ಗೇಶ್ ಮನನೊಂದಿದ್ದರು. ಟ್ವಿಟ್ಟರ್ ಮೂಲಕ ಈ ಬಗ್ಗೆ ಆಕ್ರೋಶ ಹೊರ ಹಾಕಿದ್ದರು. ಈ ವಿವಾದದ ಬಳಿಕ ಅನೇಕ ಬಾರಿ ಇಬ್ಬರೂ ಒಂದೇ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.