ಸರ್ಕಾರದ ಮಾತು ಮೀರಿ ಬಿಟ್ಟಿದ್ದೇ ಡಾ.ರಾಜ್ ಅಪಹರಣಕ್ಕೆ ಕಾರಣವಾಯ್ತು: ಎಸ್.ಎಂ.ಕೃಷ್ಣರ ವಿಡಿಯೋ ವೈರಲ್
ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನಡೆದ ಡಾ.ರಾಜ್‌ಕುಮಾರ್ ಅಪಹರಣದ ಬಗ್ಗೆ ತಿಳಿಸಿದ್ದ ಹಳೆಯ ವಿಡಿಯೋ ಈಗ ವೈರಲ್ ಆಗುತ್ತಿದೆ. ಅದಕ್ಕೆ ಅವರು ಹೇಳಿದ್ದೇನು?
ನವ ಬೆಂಗಳೂರಿನ ನಿರ್ಮಾತೃ ಎಂದೇ ಪ್ರಸಿದ್ಧಿ ಪಡೆದಿದ್ದ ಮುತ್ಸದ್ದಿ ರಾಜಕಾರಣಿ ಎಸ್.ಎಂ.ಕೃಷ್ಣ ಅವರು ಇಂದು ಅಗಲಿದ ಬೆನ್ನಲ್ಲೇ ಅವರಿಗೆ ಸಂಬಂಧಿಸಿದ ಹಲವು ಕಥನಗಳು ಒಂದೊಂದೇ ತೆರೆದುಕೊಳ್ಳುತ್ತಿವೆ. ಇವರು 1999 ರಿಂದ 2004ರವರೆಗೆ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಅವರ ಅವಧಿಯಲ್ಲಿಯೇ ನಡೆದ ಬಹು ದೊಡ್ಡ ಕರಾಳ ಘಟನೆ ಡಾ.ರಾಜ್ ಕುಮಾರ್ ಅವರ ಅಪಹರಣ. 108 ದಿನಗಳ ಸುದೀರ್ಘ ಅವಧಿಯವರೆಗೆ ಡಾ.ರಾಜ್ ಅವರು ಕಾಡುಗಳ್ಳ ವೀರಪ್ಪನ್ ಸೆರೆಯಾಗಿದ್ದ ಇದ್ದದ್ದು, ಅಂದು ರಾಜ್ಯದಲ್ಲಿ ನಡೆದ ಕೋಲಾಹಲ ತಲ್ಲಣ ಸೃಷ್ಟಿಸುವಂಥದ್ದು. ರಾಜ್ ಕುಮಾರ್ ಅವರನ್ನು ಕರೆತರಲು ಎಸ್.ಎಂ. ಕೃಷ್ಣ ಅವರು, ನಡೆಸಿದ ಹೋರಾಟವೂ ಅಷ್ಟಿಷ್ಟಲ್ಲ. ಇದರ ನಡುವೆಯೇ, ಅಪಹರಣದ ಕುರಿತಂತೆ ಎಸ್.ಎಂ.ಕೃಷ್ಣ ಅವರು ನೀಡಿದ್ದ ಸಂದರ್ಶನ ಇದೀಗ ಮತ್ತೊಮ್ಮೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ರಾಜ್‌ಕುಮಾರ್ ಅವರ ಅಪಹರಣದ ಸಂದೇಹ ಮೊದಲೇ ರಾಜ್ಯ ಸರ್ಕಾರಕ್ಕೆ ಇದ್ದ ಕಾರಣ, ಅವರಿಗೆ ಮೊದಲೇ ಸರ್ಕಾರದ ವತಿಯಿಂದ ತಿಳಿವಳಿಕೆ ಕೊಡಲಾಗಿತ್ತು. ಎಲ್ಲಿಯೇ ಹೋದರೂ ಸರ್ಕಾರಕ್ಕೆ ತಿಳಿಸಿಯೇ ಹೋಗಬೇಕು ಎಂದು ಹೇಳಲಾಗಿತ್ತು. ಅದನ್ನು ಅವರು ಪಾಲಿಸುತ್ತಿದ್ದರು. ಇದೇ ಕಾರಣಕ್ಕೆ ಅವರು ಹೋದ ಕಡೆಗಳಲ್ಲಿ ಸರ್ಕಾರವೇ ಪೊಲೀಸ್ ಭದ್ರತೆಯನ್ನು ನೀಡುತ್ತಿತ್ತು. ಆದರೆ ಅಂದು ಮಾತ್ರ ಅದ್ಯಾಕೋ ರಾಜ್‌ಕುಮಾರ್ ಅವರು, ಸರ್ಕಾರಕ್ಕೆ ತಿಳಿಸದೇ ಹೋಗಿಬಿಟ್ಟರು. ಆಗಲೇ ಈ ಅವಘಡ ನಡೆದು ಹೋಗಿತ್ತು. ಅವರು ಸರ್ಕಾರಕ್ಕೆ ಯಾವುದೇ ತಿಳಿವಳಿಕೆ ನೀಡದೇ ಹೋಗಿಬಿಟ್ಟರು ಎಂದು ಕೃಷ್ಣ ಅವರು ಹೇಳಿರುವ ವಿಡಿಯೋ ಈಗ ಸದ್ದು ಮಾಡುತ್ತಿದೆ.
ಅಪ್ಪು ಬಣ್ಣ ಕಪ್ಪು ಎಂದವರಿಗೆ ಡಾ.ರಾಜ್ ಹೇಳಿದ್ದೇನು? ಕುತೂಹಲದ ಹಳೆಯ ವಿಡಿಯೋ ವೈರಲ್
ಅಂದಹಾಗೆ, ಅಪಹರಣದ ಕುರಿತು ಹೇಳುವುದಾದರೆ, 2000ನೇ ಜುಲೈ 30 ರಂದು ರಾತ್ರಿ ಗಾಜನೂರಿನ ಫಾರ್ಮ್ ಹೌಸ್‌ದಿಂದ ರಾಜ್ ಅವರನ್ನು ಅಪಹರಣ ಮಾಡಲಾಗಿತ್ತು. ಅವರ ಅಪಹರಣ ಹಾಗೂ ನಂತರದ ದಿನಗಳ ಕುರಿತು ಕೃಷ್ಣ ಅವರು ಆತ್ಮಕಥೆ 'ಸ್ಮೃತಿವಾಹಿನಿ'ಯಲ್ಲಿ ಬರೆದಿದ್ದರು. ಅಪಹರಣದ ಬಳಿಕ ಆದ ಘಟನೆಗಳನ್ನು ಅದರಲ್ಲಿ ವಿವರಿಸಿದ್ದಾರೆ.
ಅಂದು ಸಂಜೆ ರಾಜ್ ಕುಮಾರ್ ಮತ್ತು ಪಾರ್ವತಮ್ಮ ದಂಪತಿ, ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕು ಗಾಜನೂರಿನಲ್ಲಿ ಮಲಗಿದ್ದ ಸಂದರ್ಭದಲ್ಲಿ ಅವರಣ ನಡೆದಿತ್ತು. ಅಂದು ಯಾರೋ ಬಾಗಿಲು ತಟ್ಟಿದರು. ಬಾಗಿಲು ತೆಗೆದರೆ ವೀರಪ್ಪನ್ ಮತ್ತು ಆತನ ಸಹಚರರು ಅಲ್ಲಿದ್ದರು. ಹೆಗಲ ಮೇಲೆ ಬಂದೂಕು ನಾಲ್ಕು ಜನರ ಜೊತೆ ಒಳಗೆ ಬಂದ ವೀರಪ್ಪನ್ ನನ್ನ ಜೊತೆ ರಾಜ್ ಕುಮಾರ್ ಬರಬೇಕು ಇಲ್ಲವಾದಲ್ಲಿ ಸುಟ್ಟು ಬಿಡುತ್ತೇನೆ ಎಂದು ಹೇಳಿದ್ದ. ರಾಜ್ ಕುಮಾರ್ 'ಅಗತ್ಯವಾಗಿ ಆಗಲಿ ಎಲ್ಲಿಗೆ ಬೇಕಾದರೂ ಬರುತ್ತೇನೆ' ಎಂದು ಹೇಳಿದ್ದರು. ಅಲ್ಲಿಂದಲೇ ಅಪಹರಣ ಮಾಡಲಾಗಿತ್ತು ಎಂದು ಅಂದಿನ ಘಟನೆ ನೆನಪಿಸಿದ್ದ ಕೃಷ್ಣ ಅವರು, ಕೊನೆಗೆ ಪತ್ರಕರ್ತ ನಕ್ಕೀರನ್ ಗೋಪಾಲ್ ಅವರನ್ನು ಭೇಟಿ ಮಾಡಿ, ವೀರಪ್ಪನ್ ಬಳಿಗೆ ಹೋಗುವಂತೆ ಅಂಗಲಾಚಿದ್ದು, ನಂತರ ನಡೆದ ಘಟನೆಗಳು ಎಲ್ಲವನ್ನೂ ಇದರಲ್ಲಿ ವಿವರಿಸಿದ್ದಾರೆ.
ಮಹಿಳೆಯರಿಗೆ ಪ್ರಧಾನಿ ಬಂಪರ್ ಯೋಜನೆ: ಮಾಸಿಕ 7 ಸಾವಿರ-ಉದ್ಯೋಗಕ್ಕೆ ದಾರಿ; ಅರ್ಜಿ ಸಲ್ಲಿಕೆ ಹೀಗಿದೆ