Asianet Suvarna News Asianet Suvarna News

ಅಭಿಮಾನಿಗಳ ಬಳಿ ದುನಿಯಾ ವಿಜಯ್ ವಿಶೇಷ ಮನವಿ: ಫ್ಯಾನ್ಸ್‌ಗೆ ಕೈ ಮುಗಿದು ಕೇಳಿಕೊಂಡಿದ್ದೇನು ಭೀಮ?

ಜನವರಿ 20ಕ್ಕೆ ದುನಿಯಾ ವಿಜಯ್ ಲಕ್ಷಾಂತರ ಅಭಿಮಾನಿಗಳ  ಜೊತೆ ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ. ನಟ ದುನಿಯಾ ವಿಜಯ್ ತಮ್ಮ ಹುಟ್ಟುಹಬ್ಬವನ್ನು ಜನವರಿ 20ರಂದು ಹುಟ್ಟೂರಾದ ಆನೇಕಲ್ನ ಕುಂಬಾರನಹಳ್ಳಿಯಲ್ಲಿ ಆಚರಿಸಿಕೊಳ್ಳಲಿದ್ದಾರೆ.

Actor Duniya Vijay Requests Fans To Not Erect Flex And Banners On His Birthday gvd
Author
First Published Jan 17, 2024, 12:57 PM IST

ಜನವರಿ 8 ಬಂದ್ರೆ ಯಶ್ ಅಭಿಮಾನಿಗಳೆಲ್ಲಾ ಸಂಭ್ರಮಿಸೋ ದಿನ. ಯಾಕಂದ್ರೆ ಅಂದು ಯಶ್ ಹುಟ್ಟುಹಬ್ಬ. ಆದ್ರೆ ಜನವರಿ 8 ಬಂದ್ರೆ ಯಶ್ ಫ್ಯಾನ್ಸ್ ಜೊತೆ ಸೇರಿ ಸಂಭ್ರಮಿಸೋದು ಬಿಟ್ಟು ಭಯದಲ್ಲೇ ಇರ್ತಾರೆ. ಯಾಕಂದ್ರೆ ಆ ದಿನ ಯಶ್ರ ಅಭಿಮಾನಿಗಳು ಅನಾಹುತದಲ್ಲಿ ಪ್ರಾಣ ಬಿಟ್ಟುಬಿಡ್ತಾರೆ ಅನ್ನೋ ಭಯ.. ಈ ಕಳೆದ ಎರಡು ವರ್ಷದಲ್ಲಿ ಯಶ್ ಹುಟ್ಟುಹಬ್ಬ ಆಚರಿಸೋಕೆ ಹೋಗಿ ಐವರು ಅಭಿಮಾನಿಗಳು ಜೀವ ಬಿಟ್ಟಿರೋ ಘಟನೆ ಎಲ್ಲಾ ಸ್ಟಾರ್ಗಳ ತಲೆ ಕೆಡಿಸಿದೆ. ಜನವರಿ 8ರಂದು ಯಶ್ ಬೇಸರದಲ್ಲಿ ಜನ್ಮದಿನ ಆಚರಿಸಿದ್ದಾರೆ. ಯಾಕಂದ್ರೆ ಆ ದಿನ ಯಶ್ ರ ನಾಲ್ಕು ಜನ ಫ್ಯಾನ್ಸ್ ದುರಂತದಲ್ಲಿ ಪ್ರಾಣ ಬಿಟ್ಟಿದ್ರು. ಈ ನೆನಪು ಮಾಸುವ ಮುನ್ನವೇ ಈಗ ಕನ್ನಡದ ಮತ್ತೊಬ್ಬ ಸೆಲೆಬ್ರೆಟಿ ನಟ ದುನಿಯಾ ವಿಜಯ್ ಹುಟ್ಟುಹಬ್ಬ ಎದುರಾಗಿದೆ. 

ಜನವರಿ 20ಕ್ಕೆ ದುನಿಯಾ ವಿಜಯ್ ಲಕ್ಷಾಂತರ ಅಭಿಮಾನಿಗಳ  ಜೊತೆ ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ. ನಟ ದುನಿಯಾ ವಿಜಯ್ ತಮ್ಮ ಹುಟ್ಟುಹಬ್ಬವನ್ನು ಜನವರಿ 20ರಂದು ಹುಟ್ಟೂರಾದ ಆನೇಕಲ್ನ ಕುಂಬಾರನಹಳ್ಳಿಯಲ್ಲಿ ಆಚರಿಸಿಕೊಳ್ಳಲಿದ್ದಾರೆ. ಹೀಗಾಗಿ  ಅಭಿಮಾನಿಗಳ ಬಳಿ ವಿಶೇಷ ಮನವಿ ಮಾಡಿದ್ದಾರೆ. ಯಶ್ ಹುಟ್ಟುಹಬ್ಬದ ದಿನ ಆದ ಯಾವ್ದೇ ಘಟನೆಗಳು ನಡೆಯಬಾರದು ಹೀಗಾಗಿ ಎಲ್ಲಾ ಅಭಿಮಾನಿಗಳು ಹುಷಾರಾಗಿ ಬರಬೇಕು. ಹೂವು ಹಾರ ಕೇಕ್ ಯಾವ್ದನ್ನೂ ತರಬೇಡಿ. ಎಲ್ಲಾ ಅಭಿಮಾನಿಗಳು ಸೇಫ್ ಆಗಿ ಬಂದು ಊಟ ಮಾಡಿಕೊಂಡು ಹೋಗಬೇಕು ಅಂತ ಕೇಳಿಕೊಂಡಿದ್ದಾರೆ. 

ಸ್ಟಾರ್ಸ್ ಬರ್ತ್ಡೇ ಅಂದ್ರೆ ಒಂದ್ ಸಪ್ರೈಸ್ ಇದ್ದೇ ಇರುತ್ತೆ. ಈ ಭಾರಿ ವಿಜಯ್ ಹುಟ್ಟುಹಬ್ಬಕ್ಕೆ ಸ್ಪೆಷಲ್ ಸರ್ಪ್ರೈಸ್ ರೆಡಿ ಮಾಡಿದ್ದಾರೆ. ಅದೇ ಭೀಮ ಟೀಸರ್ ಟ್ರೀಟ್. ಭೀಮ ಸಿನಿಮಾದ ಮೂರು ಹಾಡುಗಳು ಬಂದಿದ್ದು ಹಿಟ್ ಆಗಿವೆ. ವಿಜಯ್ ಫ್ಯಾನ್ಸ್ ಸೈಕ್ ಆಗಿದ್ದು ಭೀಮನನ್ನ ತೆರೆ ಮೇಲೆ ನೋಡೋಕೆ ಕಾಯ್ತಿದ್ದಾರೆ. ಹೀಗಾಗಿ ಬರ್ತ್ಡೇ ಸ್ಪೆಷಲ್ ಆಗಿ ಭೀಮ ಟೀಸರ್ ರಿವೀಲ್ ಮಾಡುತ್ತಿದ್ದಾರೆ ವಿಜಯ್. ಭೀಮ ಸಿನಿಮಾ ವರ್ಕ್ ಕೊನೆ ಹಂತಕ್ಕೆ ಬಂದಿದೆ. ಎರಡು ಹಾಡಿನ ಶೂಟಿಂಗ್ ಜನವರಿಯಲ್ಲಿ ಮುಗಿಯಲಿದೆ. ನಿರ್ಮಾಪಕ ಕೃಷ್ಣ ಸಾರ್ತಕ್ ಭೀಮನನ್ನ ಫೆಬ್ರವರಿ ಕೊನೆ ವಾರ ತೆರೆ ಮೇಲೆ ತರೋ ತಯಾರಿಯಲ್ಲಿದ್ದಾರೆ. ಈಗ ವಿಜಯ್ ಜನ್ಮದಿನ ಬಂದಿರೋದ್ರಿಂದ ಭೀಮನ ಟೀಸರ್ ರಿಲೀಸ್ಗೆ ಕೌಂಟ್ಡೌನ್ ಸ್ಟಾರ್ಟ್ ಆಗಿದೆ. 

Follow Us:
Download App:
  • android
  • ios