ರೀಮೇಕ್‌ ಆಗ​ಲಿ​ರುವ ಚಿತ್ರದ ಹೆಸರು ‘ನಿನ್ನು ಕೋರಿ’. ನಾನಿ ನಟ​ನೆ​ಯ ಸೂಪರ್‌ ಹಿಟ್‌ ಆದ ಸಿನಿಮಾ. ಇದೇ ಚಿತ್ರ​ವನ್ನು ಪೀಪಲ್‌ ಮೀಡಿಯಾ ಫ್ಯಾಕ್ಟ್ರಿ ಬ್ಯಾನ​ರ್‌​ನಲ್ಲಿ ರೀಮೇಕ್‌ ಮಾಡುವ ತಯಾರಿ ಮಾಡಿ​ಕೊ​ಳ್ಳ​ಲಾ​ಗು​ತ್ತಿದೆ ಎಂದು ಮೂಲಗಳು ತಿಳಿಸಿವೆ.

ಟಿಕ್‌ಟಾಕ್ ಲೋಕದಲ್ಲಿ 'ಪೊಗರು' ತೋರಿಸುತ್ತಿದ್ದಾರೆ 'ಬಹದ್ದೂರ್‌ ಹುಡುಗ'!

ಈ ಹಿಂದೆ ಶರಣ್‌ ನಟ​ನೆ​ಯಲ್ಲಿ ‘ಅಧ್ಯಕ್ಷ ಇನ್‌ ಅಮೆ​ರಿ​ಕಾ’ ಚಿತ್ರ​ವನ್ನು ನಿರ್ಮಿ​ಸಿದ ಸಂಸ್ಥೆಯೇ ಈ ಪೀಪಲ್ಸ್‌ ಮೀಡಿಯಾ ಫ್ಯಾಕ್ಟ್ರಿ. ಈಗ ಧ್ರುವ ಸರ್ಜಾ ಅವರ ಕಾಲ್‌​ಶೀಟ್‌ ಕೂಡ ಈ ಸಂಸ್ಥೆ​ಯ​ಲ್ಲಿದ್ದು, ತೆಲು​ಗಿ​ನಲ್ಲಿ ತಾವೇ ನಿರ್ಮಿ​ಸಿ​ರುವ ‘ನಿನ್ನು ಕೋರಿ’ ಚಿತ್ರ​ವನ್ನು ರೀಮೇಕ್‌ ಮಾಡುವ ಪ್ಲಾನ್‌ ಮಾಡು​ತ್ತಿ​ದ್ದಾ​ರಂತೆ.

ಈ ಸಿನಿಮಾ ಯಾವಾಗ ಸೆಟ್ಟೇ​ರು​ತ್ತದೆ ಎಂಬುದು ಗೊತ್ತಿಲ್ಲ. ಯಾಕೆಂದರೆ ‘ಪೊಗ​ರು’ ಚಿತ್ರದ ನಂತರ ಉದಯ್‌ ಮೆಹ್ತಾ ನಿರ್ಮಾ​ಣ​ದ ಸಿನಿಮಾ ಸರ​ದಿ​ಯ​ಲ್ಲಿ​ದೆ. ಈ ಚಿತ್ರಕ್ಕೂ ನಂದ ಕಿಶೋರ್‌ ಅವರೇ ಆ್ಯಕ್ಷನ್‌ ಕಟ್‌ ಹೇಳು​ತ್ತಿ​ದ್ದಾರೆ. ಎಲ್ಲವೂ ಅಂದು​ಕೊಂಡಂತೆ ಆದ​ರೆ ಮೇ ತಿಂಗ​ಳಲ್ಲಿ ಉದಯ್‌ ಮೆಹ್ತಾ ನಿರ್ಮಾ​ಣದ ಸಿನಿಮಾ ಸೆಟ್ಟೇ​ರ​ಲಿದೆ. ಈ ಎರಡೂ ಚಿತ್ರ​ಗಳ ನಡುವೆ ನಿರ್ಮಾ​ಪಕ ಕಂ ನಿರ್ದೇ​ಶಕ ರಾಘ​ವೇಂದ್ರ ಹೆಗಡೆ ಸಿನಿಮಾ ಕೂಡ ಕಾಯು​ತ್ತಿದೆ. ಈ ಹಿಂದೆ ‘ಜಗ್ಗು​ದಾ​ದಾ’ ಚಿತ್ರ​ವನ್ನು ನಿರ್ಮಿ​ಸಿ, ನಿರ್ದೇ​ಶಿ​ಸಿದ್ದ ರಾಘ​ವೇಂದ್ರ ಹೆಗಡೆ ಅವರ ಎರ​ಡನೇ ಪ್ರಯ​ತ್ನದ ಚಿತ್ರ ಧ್ರುವ ಸರ್ಜಾ ಕಾಂಬಿ​ನೇ​ಷ​ನ್‌​ನಲ್ಲಿ ಸೆಟ್ಟೇ​ರು​ತ್ತಿದೆ.

ಧ್ರುವ ಸರ್ಜಾ ಮನೆ ಮುಂದೆ ಫ್ಯಾನ್ಸ್‌ ಅಬ್ಬರ; ಬ್ಯೂಟಿಫುಲ್‌ ಹುಡ್ಗಿ ಮಾಸ್‌ ಡೈಲಾಗ್‌!

ಅಧಿ​ಕೃ​ತ​ವಾಗಿ ಎರಡು ಚಿತ್ರ​ಗ​ಳಿಗೆ ಗ್ರೀನ್‌ ಸಿಗ್ನಲ್‌ ಕೊಟ್ಟಿರುವ ಧ್ರುವ ಸರ್ಜಾ, ‘ನಿನ್ನು ಕೋರಿ’ ಚಿತ್ರದ ರೀಮೇ​ಕ್‌ಗೂ ಸೈ ಎನ್ನು​ತ್ತಾ​ರೆಯೇ ಎಂಬುದು ಕಾದು ನೋಡ​ಬೇ​ಕಿದೆ.

"