Asianet Suvarna News Asianet Suvarna News

ನಟ ಧನಂಜಯ್, ನಟಿ ಮೇಘನಾ ಗಾಂವ್ಕರ್ ಪಾರ್ಟಿ ಫೋಟೋ ವೈರಲ್; ಬಾಟಲ್ ಮೇಲೆ ನೆಟ್ಟಿಗರ ಕಣ್ಣು!

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ಫೋಟೋ ಯಾವುದು? ಎಷ್ಟು ವರ್ಷ ಹಳೆಯ ಫೋಟೋ.....?
 

Actor Dhananjay Meghana Gaonkar and friend party photo goes viral vcs
Author
First Published Aug 19, 2024, 3:09 PM IST | Last Updated Aug 19, 2024, 3:14 PM IST

ಕನ್ನಡ ಚಿತ್ರರಂಗದಲ್ಲಿ ಕಲಾವಿದರು ಒಬ್ಬರಿಗೊಬ್ಬರು ತುಂಬಾನೇ ಕ್ಲೋಸ್ ಆಗಿದ್ದಾರೆ. ಕಷ್ಟ ಸುಖಗಳಲ್ಲಿ ಕೈ ಜೋಡಿಸಿ ಮುಂದೆ ನಡೆಯುತ್ತಾರೆ. ಒಬ್ಬರ ಸಿನಿಮಾ ರಿಲೀಸ್ ಆಗುತ್ತಿರುವ ಮತ್ತೊಬ್ಬರು ಬೆನ್ನೆಲುಬಾಗಿ ನಿಂತು ಪ್ರಚಾರ ಮಾಡುತ್ತಾರೆ. ಒಟ್ಟಿಗೆ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟವರಲ್ಲಿ ಕೆಲವರು ಹಿಟ್ ಕಂಡರೆ ಇನ್ನು ಕೆಲವರು ಫ್ಲಾಪ್ ಕಂಡಿದ್ದಾರೆ, ಪರಿಸ್ಥಿತಿ ಏನೇ ಇದ್ದರೂ ಒಟ್ಟಾಗಿರುತ್ತಾರೆ. ಬಿಡುವಿನ ಸಮಯದಲ್ಲಿ ಆಗಾಗ ಭೇಟಿ ಮಾಡುತ್ತಾರೆ, ಜಾಲಿ ಮಾಡುವಾಗ ಕ್ಲಿಕ್ ಮಾಡಿರುವ ಫೋಟೋ ಈಗ ವೈರಲ್ ಆಗುತ್ತಿದೆ. 

ಇಂಗ್ಲಿಷ್ ಪತ್ರಕರ್ತೆ ಸುನಾಯಾ ಸುರೇಶ್‌, ಡಾಲಿ ಧನಂಜಯ್, ನಟ ಸೂರ್ಜ್‌ ಗೌಡ, ನಟಿ ಮೇಘನಾ ಗಾಂವ್ಕರ್ ಮತ್ತು ಆರ್ಟಿಸ್ಟ್‌ ಬಾದಲ್ ನಂಜುಂಡಸ್ವಾಮಿ ಒಟ್ಟಿಗೆ ಪಾರ್ಟಿ ಮಾಡುತ್ತಿರುವ ಫೋಟೋ ವೈರಲ್ ಆಗುತ್ತಿದೆ. 'ವೇ ಬ್ಯಾಕ್‌ ವೆಡ್‌ನ್ಸಡೇ. 8 ವರ್ಷಗಳ ಹಿಂದಿನ ಫೋಟೋ. ಬಾದಲ್‌ ಫೇಸ್‌ಬುಕ್‌ ಖಾತೆಯಲ್ಲಿ ನೆನಪಿಗೆ ಬಂದ ಫೋಟೋ' ಎಂದು ಸುನಾಯಾ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ಈ ಫೋಟೋಗೆ ವಾವ್ ಎಂದು ಮೇಘನಾ ಗಾಂವ್ಕರ್ ಕಾಮೆಂಟ್ ಮಾಡಿದ್ದಾರೆ.

ಸಿನಿಮಾ ನೋಡಲ್ಲ ಗೆಲ್ಲಿಸುವುದಿಲ್ಲ ಅಂದ್ರೆ ಪರ್ವಾಗಿಲ್ಲ ನೋಡುವವರಿಗೆ ಮಾಡೋಣ; ಕಿಚ್ಚ ಸುದೀಪ್‌ ಕೊಟ್ಟ ಟಾಂಗ್ ವೈರಲ್

ಚಿತ್ರರಂಗಕ್ಕೆ ಆರಂಭದಲ್ಲಿ ಕಾಲಿಡುವ ಸಮಯದಲ್ಲಿ ಧನಂಜಯ್ ಹೇಗಿದ್ದರು ಹಾಗೇ ಇದ್ದರೆ. ಆಗಷ್ಟೇ ಒಳ್ಳೆ ಸಿನಿಮಾ ಒಳ್ಳೆ ಹೆಸರು ಮಾಡಬೇಕು ಎನ್ನುವ ಹುಮ್ಮಸಿನಲ್ಲಿರುವ ಕಲಾವಿದರು ಒಟ್ಟಿಗೆ ಸೇರಿರುವ ಫೋಟೋ ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರಿಗೆ ಟೇಬಲ್ ಮೇಲೆ ಇರುವ ಬ್ರೀಜರ್ (ಎಣ್ಣೆ) ಬಾಟಲ್ ಮೇಲೆ ಕಣ್ಣಿದೆ. 

ಹರ್ಷಿಕಾ ಮನೆಯಲ್ಲಿ ಹಬ್ಬದ ಸಂಭ್ರಮ; ವರಮಹಾಲಕ್ಷ್ಮಿ ಮುಂದೆ ಮಂಡಿಯೂರಿದ್ದೀರಿ ಲಕ್ಷ್ಮಿನೇ ಬರೋದು ಎಂದ ನೆಟ್ಟಿಗರು!

ಟಗರು ಸಿನಿಮಾ ಧನಂಜಯ್ ಜೀವನದಲ್ಲಿ ಬಿಗ್ ಟರ್ನಿಂಗ್ ಪಾಯಿಂಟ್ ಎನ್ನಬಹುದು. ಇದಾದ ಮೇಲೆ ಡಾಲಿ ನಟಿಸಿದ್ದ ಪ್ರತಿಯೊಂದು ಚಿತ್ರವೂ ಸೂಪರ್ ಹಿಟ್. ನಟನೆ ಜೊತೆ ನಿರ್ಮಾಣ ಸಂಸ್ಥೆ ಕೂಡ ಆರಂಭಿಸಿದ ಡಾಲಿ ಕೋಟಿ ಕೋಟಿ ಬಂಡವಾಳ ಹಾಕಿ ಅಷ್ಟೇ ಆದಾಯ ಎತ್ತಿದ್ದರು. ಅಲ್ಲೊಂದು ಇಲ್ಲೊಂದು ಇಂಟ್ರೆಸ್ಟಿಂಗ್‌ ಸ್ಟೋರಿಗಳನ್ನು ಕೇಳಿ ಸಿನಿಮಾ ಮಾಡ್ತಿದ್ದಾರೆ ಮೇಘನಾ. ನಿನ್ನ ಸನಿಹಕೆ ಸಿನಿಮಾದಲ್ಲಿ ಸೂರಜ್ ನಟಿಸಿದ್ದರು. ಇನ್ನು ತಮ್ಮ ಕಲೆ ಮೂಲಕ ಸಾಮಾಜಿಕ ಚಟುವಟಿಕೆಗಳಲ್ಲಿ ಬಾದಲ್ ತೊಡಗಿಸಿಕೊಂಡಿದ್ದಾರೆ.

 

Latest Videos
Follow Us:
Download App:
  • android
  • ios