ಆಕ್ಟ್ 1978 ಚಿತ್ರತಂಡಕ್ಕೆ ದರ್ಶನ್ ಬೆಂಬಲ ಸಿಕ್ಕಿದೆ. ಚಿತ್ರದ ಬಗ್ಗೆ ಕೇಳಿ ಬರುತ್ತಿರುವ ಮೆಚ್ಚುಗೆ ಮಾತುಗಳು, ಮಾಧ್ಯಮಗಳಲ್ಲಿ ಬಂದಿರುವ ವಿಮರ್ಶೆಗಳನ್ನು ನೋಡಿ ಖುಷಿಯಾಗಿ ದರ್ಶನ್ ಚಿತ್ರತಂಡವನ್ನು ತಮ್ಮ ಮನೆಗೆ ಕರೆಸಿಕೊಂಡು ಶುಭ ಹಾರೈಸಿದ್ದಾರೆ.
‘ಲಾಕ್‌ಡೌನ್ ನಂತರ ಬರುತ್ತಿರುವ ಹೊಸ ಸಿನಿಮಾ. ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಿರುವ ಈ ಚಿತ್ರವನ್ನು ಕನ್ನಡದ ಎಲ್ಲ ಪ್ರೇಕ್ಷಕರು ನೋಡಿ ಗೆಲ್ಲಿಸಬೇಕಿದೆ. ಸಿನಿಮಾ ತೆರೆಕಂಡ ಎಲ್ಲ ಕಡೆ ಒಳ್ಳೆಯ ರೆಸ್ಪಾನ್ಸ್ ಬರುತ್ತಿದೆ ಎಂದು ಕೇಳಿ ಖುಷಿ ಆಯಿತು. ಇಡೀ ತಂಡ ಒಳ್ಳೆಯ ಕೆಲಸ ಮಾಡಿದೆ. ಸರ್ಕಾರಿ ಕಚೇರಿಗಳಲ್ಲಿ ಇರುವ ಪರಿಸ್ಥಿತಿ, ಅಲ್ಲಿನ ಸಮಸ್ಯೆಗಳನ್ನು ಚಿತ್ರದಲ್ಲಿ ತುಂಬಾ ಚೆನ್ನಾಗಿ ತೋರಿಸಿದ್ದಾರೆ. ಇಂಥ ಚಿತ್ರವನ್ನು ಎಲ್ಲರು ನೋಡಬೇಕು’ ಎಂದಿದ್ದಾರೆ ದರ್ಶನ್.
ಎದೆಗೆ ನಾಟುವ ತುಂಬು ಬಸುರಿಯ ನಿಟ್ಟುಸಿರು; ಆಕ್ಟ್ 1978
ಚಿತ್ರಕ್ಕೆ ಪ್ರೇಕ್ಷಕರ ಮೆಚ್ಚುಗೆ
ಕಳೆದ ಮೂರು ದಿನಗಳಿಂದ ಬೆಂಗಳೂರಿನ ವೀರೇಶ್ ಚಿತ್ರಮಂದಿರ ಹೌಸ್‌ಫುಲ್ಲಾಗಿದೆ. ಚಿತ್ರರಂಗ ಹಾಗೂ ಪ್ರೇಕ್ಷಕರು ಹೀಗೆ ಥಿಯೇಟರ್‌ಗಳ ಮುಂದೆ ಹೌಸ್‌ಫುಲ್ ಬೋರ್ಡ್ ನೋಡಿ ತುಂಬಾ ತಿಂಗಳುಗಳಾಗಿದ್ದವು. ಈ ಕೊರತೆಯನ್ನು ನೀಗಿಸಿರುವುದು ‘ಆಕ್ಟ್ 1978’ ಸಿನಿಮಾ. ಮಂಸೋರೆ, ಟಿಕೆ ದಯಾನಂದ, ವೀರೇಂದ್ರ ಮಲ್ಲಣ್ಣ ಹಾಗೂ ನಿರ್ಮಾಪಕ ದೇವರಾಜ್ ಶ್ರಮಕ್ಕೆ ನಿಧಾನಕ್ಕೆ ಫಲಿತಾಂಶ ಸಿಗುತ್ತಿದೆ. ಯಜ್ಞಾ ಶೆಟ್ಟಿ, ಬಿ ಸುರೇಶ್, ಸಂಚಾರಿ ವಿಜಯ್ ನಟನೆಯ ‘ಆಕ್ಟ್ 1978’ ಚಿತ್ರಕ್ಕೆ ಬೆಂಗಳೂರು, ಶಿವಮೊಗ್ಗ, ಮೈಸೂರು, ಹುಬ್ಬಳ್ಳಿಯಲ್ಲಿ ದೊಡ್ಡ ಮಟ್ಟದಲ್ಲಿ ಯಶಸ್ಸು ಸಿಗುತ್ತಿದೆ.
