ಮಗಳು ಹುಟ್ಟಿದ ನಾಲ್ಕೇ ದಿನಕ್ಕೆ 'ಪರಿ' ಅಂತ ಹೆಸರಿಡಲು ಕಾರಣ ರಿವೀಲ್ ಮಾಡಿದ ಡಾರ್ಲಿಂಗ್ ಕೃಷ್ಣ!
ಮಗಳಿಗೆ ಶಾರ್ಟ್ ಆಂಡ್ ಸ್ವೀಟ್ ಆಗಿ ಪರಿ ಎಂದು ನಾಮಕರಣ ಮಾಡಿದ ಡಾರ್ಲಿಂಗ್- ಮಿಲನಾ. ಮನೆಯಲ್ಲಿರುವ ಶ್ವಾನದ ರಿಯಾಕ್ಷನ್ ಬೇಕಿತ್ತು......
ಕನ್ನಡ ಚಿತ್ರರಂಗಕ್ಕೆ ಹಾರ್ಟ್ ಟಚ್ಚಿಂಗ್ ಲವ್ ಸ್ಟೋರಿ ಸಿನಿಮಾ ನೀಡಿದ ಮಿಲನಾ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ ಸೆಪ್ಟೆಂಬರ್ 5ರಂದು ಮೆನೆಗೆ ಮಹಾಲಕ್ಷ್ಮಿ ಎನ್ನು ಬರ ಮಾಡಿಕೊಂಡರು. ವಿಭಿನ್ನ ಶೈಲಿಯ ಫೋಟೋಶೂಟ್ ಮೂಲಕ ಗುಡ್ ನ್ಯೂಸ್ ರಿವೀಲ್ ಮಾಡಿದ ಜೋಡಿ, ಮಗಳನ್ನು ಅದ್ಧೂರಿಯಾಗಿ ಬರ ಮಾಡಿಕೊಂಡರು. ಅಲ್ಲದೆ ಮಗಳ ಮುಖ ಮತ್ತು ಹೆಸರು ಎರಡನ್ನೂ ರಿವೀಲ್ ಮಾಡಿದ್ದಾರೆ. ಅಭಿಮಾನಿಗಳ ಜೊತೆ ಇಷ್ಟೋ ಓಪನ್ ಆಗಿರುವುದಕ್ಕೆ ಪ್ರತಿಯೊಂದನ್ನು ನಿಮ್ಮ ಜೊತೆ ಕನೆಕ್ಟ್ ಮಾಡಿಕೊಂಡು ಕ್ಲೋಸ್ ಫೀಲ್ ಮಾಡುವುದು ಅಂತಾರೆ ನೆಟ್ಟಿಗರು.
ಮಗಳ ಹೆಸರು ಆಯ್ಕೆ:
'ನಮ್ಮಿಬ್ಬರಿಗೂ ಹೆಣ್ಣು ಮಗು ಬೇಕಿತ್ತು ಅದರಂತೆ ಮಗಳು ಹುಟ್ಟಿದ್ದಾಳೆ. ಜೀವನದಲ್ಲಿ ಖಂಡಿತಾ ಖುಷಿಯಾಗಿದೆ. ನಾಲ್ಕು ದಿನಗಳಿಂದ ಮಗಳನ್ನು ಆಸ್ಪತ್ರೆಯಲ್ಲಿ ನೋಡಿ ನೋಡಿ ಖುಷಿ ಆಗುತ್ತಿತ್ತು ಆದರೆ ಮನೆಯಲ್ಲಿ ಇರುವ ಸಾಕು ನಾಯಿ ರೋಮಿಯೋ ಹೇಗೆ ರಿಯಾಕ್ಟ್ ಮಾಡ್ತಾನೆ ಅಂತ ಕ್ಯೂರಿಯಾಸಿಟಿ ಇತ್ತು...ಮಗು ನೋಡುತ್ತಿದ್ದಂತೆ ಬೊಗಳುವುದು ನೋವು ಮಾಡುವುದು ಏನೂ ಮಾಡಲಿಲ್ಲ ನಮಗೆ ಅದೇ ಖುಷಿ. ನಮ್ಮ ಮಗಳಿಗೆ ಪಾ ಅಕ್ಷರದಿಂದ ಹೆಸರು ಇಡಬೇಕು ಅಂತ ಬಂತ್ತು ಆಗ ಒಂದು ನಿಮಿಷ ಯೋಚನೆ ಮಾಡಿದಾಗ ಪರಿ ಅಂತ ಇಟ್ಟರೆ ಚೆನ್ನಾಗಿರುತ್ತದೆ ಅನಿಸಿತ್ತು, ಮನೆಯವರು ಚೆನ್ನಾಗಿರುತ್ತದೆ ಎಂದು ಹೇಳಿದ್ದರು ಸರಿ ಅಂತ ಅದನ್ನು ಇಟ್ಟೆ. ಮಗಳ ಬಗ್ಗೆ ಏನೂ ಕನಸುಗಳು ಇಲ್ಲ ಆಕೆ ಬೆಳೆಯುವುದನ್ನು ನೋಡಲು ಎಂಜಾಯ್ ಮಾಡಬೇಕು ಆ ಸಮಯಕ್ಕೆ ಏನಾಗುತ್ತದೆ ಅದನ್ನು ನೋಡಿಕೊಂಡು ಪ್ಲ್ಯಾನ್ ಮಾಡಬೇಕು. ನನ್ನ ಮಗಳಿಗೆ ನಮ್ಮ ಸಂಪೂರ್ಣ ಸಪೋರ್ಟ್ ಇರಲಿದೆ. ಮಗಳು ಮತ್ತು ಮಿಲನಾ ಇಬ್ಬರು ಸಂತೋಷವಾಗಿದ್ದಾರೆ ಹಾಗೂ ಆರೋಗ್ಯವಾಗಿದ್ದಾರೆ' ಎಂದು ಖಾಸಗಿ ಟಿವಿ ಸಂದರ್ಶನದಲ್ಲಿ ಡಾರ್ಲಿಂಗ್ ಕೃಷ್ಣ ಮಾತನಾಡಿದ್ದಾರೆ.
15 ವರ್ಷಗಳ ನಂತರ ಮನೆಗೆ ಹೊಸ ದುಬಾರಿ ಫ್ರಿಡ್ಜ್ ತಂದ ವರುಣ್ ಆರಾಧ್ಯ; ಜನರ ಬಿಕ್ಷೆ ಎಂದ ನೆಟ್ಟಿಗರು!
ಪರಿ ಅರ್ಥವೇನು:
ಪರಿ ಹೆಸರನ್ನು ಬರೆಯುವುದಕ್ಕೆ, ಹೇಳುವುದಕ್ಕೆ ಸುಲಭ ಅನಿಸುತ್ತದೆ ಹಾಗೆಯೇ ಅದರ ಅರ್ಥ ಕೂಡ ಅಷ್ಟೇ ಸಿಂಪಲ್ ಆಗಿದೆ. ಪರಿ ಅನ್ನೋ ಪದ ಬಂದಿರುವುದು ಹಿಂದಿಯಿಂದ, ಕೆಲವರು ಅದನ್ನು ಪರ್ಷಿಯನ್ ಹೆಸರು ಅಂತಲೂ ಹೇಳುತ್ತಾರೆ. ಪರಿ ಅಂದರೆ ದೇವತಿ, ಪರ್ಷಿಯನ್‌ನಲ್ಲಿ ಏಂಜಲ್ ಎಂದು.
ಬಿಗ್ಬಾಸ್ ಮನೆ ಸೇರಿದ ದರ್ಶನ್ ಆಪ್ತರು; ಒಂಟಿ ಮನೆಯಲ್ಲೂ ಇರುತ್ತಾ ದಾಸನ ಕಥೆ ವ್ಯಥೆ?
ಡಾರ್ಲಿಂಗ್- ಮಿಲನಾ ಮದುವೆ:
ಫೆಬ್ರವರಿ 14, 2021ರಂದು ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಅದ್ಧೂರಿಯಾಗಿ ಮದುವೆ ಮಾಡಿಕೊಂಡರು. ಹಲವು ವರ್ಷಗಳ ಕಾಲ ಪ್ರೀತಿಸಿದ ಈ ಜೋಡಿ ಗುರು ಹಿರಿಯ ಒಪ್ಪಿಗೆ ಪಡೆದು ಮದುವೆಯಾಗಿದ್ದಾರೆ. ಇಬ್ಬರೂ ಒಂದೇ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಕಾರಣ ಒಟ್ಟಿಗೆ ಸಿನಿಮಾಗಳಲ್ಲಿ ನಟಿಸಿ, ನಿರ್ದೇಶಿಸಿ ಹಾಗೂ ನಿರ್ಮಾಣ ಮಾಡಿದ್ದಾರೆ. ಚಿತ್ರರಂಗಕ್ಕೆ ಇವರ ಕೊಡುಗೆ ಅಪಾರ. ಹೀಗಾಗಿ ಮಗಳನ್ನು ನಾಯಕಿ ಮಾಡಿಬಿಟ್ಟರೆ ಅದ್ಭುತ ಅಂತ ನೆಟ್ಟಿಗರು ಈಗಲೇ ಲೆಕ್ಕಾಚಾರ ಹಾಕುತ್ತಿದ್ದಾರೆ.