ಮಂಗಳೂರು (ಸೆ.13): ತುಳುನಾಡಿನ ಕಾರ್ಣಿಕ ದೈವ ಕೊರಗಜ್ಜನ ದೈವಾರಾಧನೆ ಬಗ್ಗೆ ಸಿನೆಮಾವೊಂದರಲ್ಲಿ ತೋರಿಸಿರುವುದು ಈಗ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಸಿನಿಮಾದಲ್ಲಿ ಕೊರಗಜ್ಜ ದೈವದ ದೃಶ್ಯ ಪ್ರದರ್ಶನಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಇಂದು ಬಿಡುಗಡೆಯಾದ ಕನ್ನಡ ಸಿನಿಮಾಗೆ ಬಹಿಷ್ಕಾರದ ಬೆದರಿಕೆ ಎದುರಾಗಿದೆ. ಮತ್ತೆ ಚಲನಚಿತ್ರದಲ್ಲಿ ದೈವದ ಬಳಕೆ ವಿರುದ್ಧ ದೈವಾರಾಧಕರು ಗರಂ ಆಗಿದ್ದಾರೆ.

ಕಾಲ ಕಲ್ಜಿಗ ಎಂಬ ಕನ್ನಡ ಸಿನಿಮಾದಲ್ಲಿ ದೈವರಾಧನೆಯ ಬಳಕೆ ಮಾಡಲಾಗಿದೆ. ಈ ಸಿನಿಮಾದಲ್ಲಿ ಕೊರಗಜ್ಜ ದೈವ ಪ್ರತ್ಯಕ್ಷವಾಗುವ ದೃಶ್ಯವಿದೆ. ಇದು ದೈವಾರಾಧಕರ ಕೆಂಗಣ್ಣಿಗೆ ಗುರಿಯಾಗಿದೆ. ದೈವರಾಧನೆ ದೃಶ್ಯ ಬಳಕೆ ಮಾಡಿದ ಚಿತ್ರದ ವಿರುದ್ಧ ಬಾಯ್ ಕಾಟ್ ಕೂಗು ಕೇಳಿಬಂದಿದೆ. ಇದರ ಬೆನ್ನಲ್ಲೇ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ಚಿತ್ರತಂಡದ ವಿರುದ್ಧ ತುಳುನಾಡ ದೈವಾರಾಧನೆ ಸಂರಕ್ಷಣಾ ಸಂಘಟನೆ ಪ್ರಾರ್ಥನೆ ಮಾಡಿದ್ದು,  ಕಾನೂನು ಹೋರಾಟದ ಎಚ್ಚರಿಕೆ ಕೂಡ ನೀಡಿದೆ.

ಸಿಂಗಾರ ಸಿರಿಯೇ ಅನ್ನುತ್ತಲೇ ಸಿಂಗರ್‌ ಜೊತೆ ಎಂಗೇಜ್ ಆದ ಚಿತ್ರ ಸಾಹಿತಿ ಪ್ರಮೋದ್ ಮರವಂತೆ!

ಮುಂದೆ ಯಾರೇ ದೈವಗಳ ದೃಶ್ಯ ಬಳಸಿದರೂ ನಾವು ಉಗ್ರ ಹೋರಾಟ ಮಾಡುತ್ತೇವೆ. ನಾವು ಆರಾಧಿಸುವ ದೈವಸ್ಥಾನದಲ್ಲಿ ಪ್ರಾರ್ಥನೆ ಮಾಡುತ್ತೇವೆ. ಕಂಡ ಕಂಡಲ್ಲಿ ದೈವಾರಾಧನೆ ಪ್ರದರ್ಶನದ ವಸ್ತುವಲ್ಲ. ನಾವೆಲ್ಲಾ ಬಹಳಷ್ಟು ಶ್ರದ್ಧೆ ಮತ್ತು ಭಕ್ತಿಯಿಂದ ದೈವಾರಧನೆ ನಡೆಸುತ್ತೇವೆ. ನಮ್ಮ ಕಣ್ಣಿರು ಬಿಟ್ಟು ದೈವಸ್ಥಾನದಲ್ಲಿ  ತೆಂಗಿನಕಾಯಿ ಒಡೆಯುತ್ತೇವೆ. ಇಲ್ಲಿಯ ತನಕ ಸಹಿಸುವಷ್ಟು  ಸಹಿಸಿದ್ದೇವೆ. ಇನ್ನೂ ಸಹಿಸೋದಿಲ್ಲ ದೈವಸ್ಥಾನಕ್ಕೆ ಹೋಗಿ ಪ್ರಾರ್ಥಿಸುತ್ತೇವೆ  ದೈವವೇ ನೋಡಿಕೊಳ್ಳಲಿ. ದೈವರಾಧನೆಗೆ ಇತಿಹಾಸ ಪರಂಪರೆ ಇದೆ ಅದರ ಬಗ್ಗೆ ಯಾಕೆ ಸಿನಿಮಾ ಮಾಡಬೇಕು. ದೈವಾರಾಧನೆ ನಿರ್ದಿಷ್ಟ ಕಟ್ಟು ಪಾಡುಗಳೊಂದಿಗೆ ನಡೆಯುತ್ತೆ. ಸಿನಿಮಾಗಳಲ್ಲಿ ದೈವದ ವೇಷ ತೊಟ್ಟು ನಟಿಸುತ್ತಾರೆ. ಸಿನಿಮಾ ಹಾಗು  ನಾಟಕಗಳಲ್ಲಿ ದೈವದ ವೇಷ ತೊಟ್ಟ  ನಟರ ಮೈ ಮೇಲೆ ಯಾರು ಬರುತ್ತಾರೆ? ಎಂದು ಮಂಗಳೂರಿನ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ದೈವಾರಾಧಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಶ್ಮಿಕಾ ಮಂದಣ್ಣ ನನ್ನ ರೂಮ್ ಮೇಟ್, ಅರ್ಧರಾತ್ರಿ ರೋಡಲ್ಲಿ ಹೀಗೆ ಇದ್ವಿ ಬಿಗ್‌ಬಾಸ್‌ ಪ್ರೇರಣಾ ಬಿಚ್ಚಿಟ್ಟ ರಹಸ್ಯ!

ಕೊರಗಜ್ಜನ ಸನ್ನಿಧಾನಕ್ಕೆ ಓಡೋಡಿ ಬಂದ ನಟ
ಕಲ್ಜಿಗ ಸಿನಿಮಾದಲ್ಲಿ ತುಳುನಾಡಿನ ಕಾರಣಿಕ ಕೊರಗಜ್ಜ ದೈವದ ಬಳಕೆ ವಿಚಾರವಾಗಿ ದೈವದ ಬಳಕೆಗೆ ವಿರೋಧದ ಬೆನ್ನಲ್ಲೇ ಕೊರಗಜ್ಜನ ಸನ್ನಿಧಾನಕ್ಕೆ ನಟ ಓಡೋಡಿ ಬಂದಿದ್ದಾರೆ.

ಕಲ್ಜಿಗ ಚಿತ್ರದ ನಾಯಕ ನಟ ಅರ್ಜುನ್ ಕಾಪಿಕಾಡ್ ಮತ್ತು ಇಡೀ ಚಿತ್ರ ತಂಡ ಮಂಗಳೂರು ಹೊರವಲಯದ ಕಲ್ಲಾಪು ಬುರ್ದುಗೋಳಿ ಕೊರಗಜ್ಜ ಆದಿಸ್ಥಳಕ್ಕೆ ಭೇಟಿ ನೀಡಿ ಕೊರಗಜ್ಜ ದೈವದ ಮುಂದೆ ವಿಶೇಷ ಪ್ರಾರ್ಥನೆ ಸಲ್ಲಿಸಿದೆ. ಚಿತ್ರದ ಯಶಸ್ವಿಗಾಗಿ ಚಿತ್ರ ತಂಡ ಪ್ರಾರ್ಥನೆ ಸಲ್ಲಿಸಿದೆ.

ಸಿನೆಮಾದದಲ್ಲಿ ಕೊರಗಜ್ಜನ ವೇಷಭೂಷಣ ಧರಿಸಿ ಸಿನಿಮಾದ ಶೂಟಿಂಗ್ ಗಾಗಿ ನರ್ತನ ಮಾಡಲಾಗಿದೆ. ಮಂಗಳೂರಿನ ದೈವಾರಾಧನೆ ಸಂರಕ್ಷಣಾ ವೇದಿಕೆ ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದು, ಸಾಮಾಜಿಕ ಜಾಲತಾಣದಲ್ಲೂ ಬಾಯ್ಕಾಟ್ ಕಲ್ಜಿಗ ಅಭಿಯಾನ ಆರಂಭವಾಗಿದೆ.

ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿರುವ ಕಲ್ಜಿಗ ಸಿನಿಮಾವನ್ನು ಕೋಸ್ಟಲ್ ವುಡ್ (ತುಳು ಚಿತ್ರರಂಗದ) ಕಲಾವಿದರೆ ನಿರ್ಮಿಸಿರುವ ಸ್ಯಾಂಡಲ್ ವುಡ್ ಸಿನಿಮಾವಾಗಿದೆ. ಕೋಸ್ಟಲ್ ವುಡ್ ನ ಪ್ರಸಿದ್ದ ನಟ ಅರ್ಜುನ್ ಕಾಪಿಕಾಡ್ ಈ ಸಿನೆಮಾದಲ್ಲಿ ನಟಿಸಿದ್ದಾರೆ. ಸಿನಿಮಾದಲ್ಲಿ ಕೊರಗಜ್ಜ ದೈವದ ಚಿತ್ರೀಕರಣ ಮಾಡಿ ಅನುಕರಣೆ ಮಾಡಿರುವುದಕ್ಕೆ ದೈವರಾಧಕರ ಅಸಮಾಧಾನ ಹೊರಹಾಕಿರುವುದು ಈಗ ಚಿತ್ರತಂಡಕ್ಕೆ ಸಂಕಷ್ಟ ತಂದಿಟ್ಟಿದ್ದು, ದೈವದ ಮೊರೆ ಹೋಗಿದ್ದಾರೆ.