ವಿಷ್ಣುವರ್ಧನ್ - ಭಾರತಿ ಅವರದ್ದು ಅಪರೂಪದ ಜೋಡಿ. ಅವರಿಬ್ಬರೂ ಒಟ್ಟಿಗೆ ಕೆಲವು ಸಿನಿಮಾಗಳಲ್ಲಿ ಸಹ  ನಟಿಸಿದ್ದರು. ಪರಸ್ಪರ  ಪ್ರೀತಿಸಿ ಮದುವೆ ಆಗಿದ್ದರು. 'ಮನೆ ಬೆಳಗಿದ ಸೊಸೆ' ಚಿತ್ರದಲ್ಲಿ ಮೊದಲ ಬಾರಿ ಇಬ್ಬರೂ ಒಟ್ಟಿಗೆ ನಟಿಸಿದ್ದರು. ಅದಕ್ಕೂ ಮುನ್ನ ..

ಸಾಹಸಸಿಂಹ ಖ್ಯಾತಿಯ ನಟ ವಿಷ್ಣುವರ್ಧನ್ (Vishnuvardhan) ಅವರು ಕನ್ನಡ ಚಿತ್ರರಂಗದ ದಿಗ್ಗಜ ನಟರಲ್ಲಿ ಒಬ್ಬರು. 200ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ವಿಷ್ಣುವರ್ಧನ್ ಅವರು ಕನ್ನಡ ಸಿನಿಪ್ರೇಮಿಗಳಿಗೆ ಮೋಡಿ ಮಾಡಿದ್ದರು. ಕನ್ನಡ ಮಾತ್ರವಲ್ಲದೇ ಪರಭಾಷಾ ಸಿನಿಮಾಗಳಲ್ಲಿ ಕೂಡ ನಟಿಸಿದ್ದರು ನಟ ವಿಷ್ಣುವರ್ಧನ್. ಅಷ್ಟೇ ಅಲ್ಲ, ಶಂಕರ್ ನಾಗ್ ನಿರ್ದೇಶನದ 'ಮಾಲ್ಗುಡಿ ಡೇಸ್' ಧಾರಾವಾಹಿಯಲ್ಲಿ ಕೂಡ ದಾದಾ ಮಿಂಚಿದ್ದರು.

ನಟ ವಿಷ್ಣುವರ್ಧನ್ಅವರು ಕೆಲವು ಜಾಹೀರಾತುಗಳಲ್ಲಿ ಕೂಡ ಕಾಣಿಸಿಕೊಂಡಿದ್ದರು. ವಿಷ್ಣು ಹಾಗೂ ಭಾರತಿ (Bharathi Vishnuvardhan) ದಂಪತಿ ಒಂದು ವಿಶೇಷವಾದ ಜಾಹೀರಾತಿನಲ್ಲಿ ಮಿಂಚಿದ್ದರು. ಅವರು ಸ್ವತಃ ತಾವಾಗಿಯೇ ಅದರಲ್ಲಿ ನಟಿಸಿದ್ದು ವಿಶೇಷ. ಸದ್ಯ ಆ ಜಾಹೀರಾತು ವೀಡಿಯೋ ಈಗ ವೈರಲ್ ಆಗುತ್ತಿದೆ. ದೂರದರ್ಶನ ಚಂದನ ವಾಹಿನಿಯ ಹೊಸ ಧಾರಾವಾಹಿಯ ಬಗ್ಗೆ ಮಾಡಿದ್ದ ಜಾಹೀರಾತು ಅದಾಗಿತ್ತು.

ಭಾರತಿಯನ್ನು ನಾನು ಮದುವೆ ಆಗುವಂತೆ ಮಾಡಿದ್ದು ರಾಜನ್‌-ನಾಗೇಂದ್ರ; ನಟ ವಿಷ್ಣುವರ್ಧನ್!

ವಿಷ್ಣುವರ್ಧನ್ - ಭಾರತಿ ಅವರದ್ದು ಅಪರೂಪದ ಜೋಡಿ. ಅವರಿಬ್ಬರೂ ಒಟ್ಟಿಗೆ ಕೆಲವು ಸಿನಿಮಾಗಳಲ್ಲಿ ಸಹ ನಟಿಸಿದ್ದರು. ಪರಸ್ಪರ ಪ್ರೀತಿಸಿ ಮದುವೆ ಆಗಿದ್ದರು. 'ಮನೆ ಬೆಳಗಿದ ಸೊಸೆ' ಚಿತ್ರದಲ್ಲಿ ಮೊದಲ ಬಾರಿ ಇಬ್ಬರೂ ಒಟ್ಟಿಗೆ ನಟಿಸಿದ್ದರು. ಅದಕ್ಕೂ ಮುನ್ನ 'ನಾಗರಹಾವು' ಸಿನಿಮಾ ಶತದಿನೋತ್ಸವ ಸಮಾರಂಭಕ್ಕೆ ಭಾರತಿ ಅವರನ್ನು ಆಹ್ವಾನಿಸಲು ವಿಷ್ಣು ಹೋಗಿದ್ದರು. ಅದೇ ಅವರಿಬ್ಬರ ಮೊದಲ ಭೇಟಿ ಕೂಡ ಆಗಿತ್ತು. 27 ಫೆಬ್ರವರಿ 1975ರಲ್ಲಿ ಈ ಪ್ರೇಮಿಗಳ ಮದುವೆ ನಡೆದು ದಂಪತಿಗಳಾದರು. 

ವಿಷ್ಣುವರ್ಧನ್ ಆಪ್ತ ಬಳಗದಲ್ಲಿ ನಟ ರಮೇಶ್ ಭಟ್ ಗುರ್ತಿಸಿಕೊಂಡಿದ್ದಾರೆ. ಇಂಥ ರಮೇಶ್ ಭಟ್ ಅವರು ಮುಖ್ಯ ಪಾತ್ರದಲ್ಲಿ ನಟಿಸಿದ್ದ 'ಕ್ರೇಜಿ ಕರ್ನಲ್' ಎಂಬ ಧಾರಾವಾಹಿ ದೂರದರ್ಶನ ಚಂದನ ವಾಹಿನಿಯಲ್ಲಿ ಪ್ರಸಾರವಾಗಿತ್ತು. ಆಗ ಸೋಶಿಯಲ್ ಮೀಡಿಯಾ ಇರಲಿಲ್ಲ. ವಾಹಿನಿಯಲ್ಲೇ ಪ್ರೋಮೊ ಪ್ರಸಾರ ಮಾಡಬೇಕಿತ್ತು. ಕೆಲವೊಮ್ಮೆ ಜನಪ್ರಿಯ ಕಲಾವಿದರಿಂದ ಪ್ರಚಾರ ಮಾಡಿಸಲಾಗುತ್ತಿತ್ತು. ಅದೇ ಸಂಗತಿ ಇಲ್ಲೂ ನಡೆದಿತ್ತು. 

'ಯಾವನೋ ಇವ್ನು, ಹೆಲ್ಮೆಟ್ ಹಾಕ್ಕೊಂಡು ಸೈಕಲ್ ಓಡಿಸ್ತವ್ನೇ'..! ಈ ಮಾತಿಗೆ ಅಪ್ಪು ರಿಯಾಕ್ಷನ್ ನೋಡಿ..!

ತಮ್ಮ ಸ್ನೇಹಿತನ 'ಹೊಸ ಧಾರಾವಾಹಿ ಶೀಘ್ರದಲ್ಲೇ ಚಂದನ ವಾಹಿನಿಯಲ್ಲಿ ಪ್ರಸಾರವಾಗುತ್ತದೆ ತಪ್ಪದೇ ನೋಡಿ' ಎಂದು ಹೇಳಲು ವಿಷ್ಣುವರ್ಧನ್ ಹಾಗೂ ಭಾರತಿ ಪ್ರೋಮೊ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ಬಹಳ ಕ್ರಿಯೇಟಿವ್ ಆಗಿ ಅದನ್ನು ಡಿಸೈನ್ ಮಾಡಲಾಗಿತ್ತು. ಅದರಲ್ಲಿ ಜಾಹೀರಾತು ಮಾಡಲಾಗಿತ್ತು. 80ರ ದಶಕದಲ್ಲಿ 'ಕ್ರೇಜಿ ಕರ್ನಲ್' ಧಾರಾವಾಹಿ ಚಂದನ ವಾಹಿನಿಯಲ್ಲಿ ಮೂಡಿ ಬಂದಿತ್ತು. ಪ್ರತಿ ಶನಿವಾರ ಹಾಗೂ ಭಾನುವಾರ ವಾರಕ್ಕೆ ಎರಡು ಎಪಿಸೋಡ್‌ನಂತೆ ಅಂದು ಅದು ದೂರದರ್ಶನ ವೀಕ್ಷಕರನ್ನು ರಂಜಿಸಿತ್ತು. ಆ ಧಾರಾವಾಹಿಯಲ್ಲಿ ರಮೇಶ್ ಭಟ್ ಜೊತೆ ಗಿರಿಜಾ ಲೋಕೇಶ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದರು.

ಲಿಂಗರಾಜ್ ನಿರ್ದೇಶನ ಧಾರಾವಾಹಿ ಮುಂಬೈ ದೂರದರ್ಶನದಲ್ಲಿ ಕೂಡ ಪ್ರಸಾರವಾಗಿದ್ದು ವಿಶೇಷ. ಪ್ರೇಮಕಲಾ ವಿಷನ್ಸ್ ಬ್ಯಾನರ್ ಅಡಿಯಲ್ಲಿ ಎಸ್‍. ಎಸ್‍ ರಾಜೇಶ್ 'ಕ್ರೇಜಿ ಕರ್ನಲ್' ಧಾರಾವಾಹಿ ನಿರ್ಮಾಣ ಮಾಡಿದ್ದರು. ಆರ್. ಸಿ ಮಾಪಾಕ್ಷಿ ಛಾಯಾಗ್ರಹಣ, ರವಿಶೆಣೈ ಸಂಗೀತ ಈ ಧಾರಾವಾಹಿಗಿತ್ತು. 5 ವರ್ಷಗಳ ಹಿಂದೆ ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಈ ಧಾರಾವಾಹಿಯನ್ನು ಮರುಪ್ರಸಾರ ಮಾಡಲಾಗಿತ್ತು. 'ಕ್ರೇಜಿ ಕರ್ನಲ್' ರಾಜಾರಾಯನ ಪಾತ್ರದಲ್ಲಿ ಲೋಕೇಶ್ ನಟಿಸಬೇಕಿತ್ತು. ಆದರೆ ಕಾರಣಾಂತರಗಳಿಂದ ಆ ಅವಕಾಶ ರಮೇಶ್ ಭಟ್ ಅವರಿಗೆ ಲಭಿಸಿತ್ತು. 

ಚಂದನ್‌ ಶೆಟ್ಟಿ ರೊಮಾನ್ಸ್‌ಗೆ ಸೆನ್ಸಾರ್ ಒಪ್ಪಿಗೆ ಕೂಡ ಸಿಕ್ತು ಗುರೂ.. ಇನ್ನೇನಿದೆ ಪ್ರಾಬ್ಲಂ..?!

ತಮ್ಮ ನಿಜವಾದ ವಯಸ್ಸಿಗಿಂತ ಬಹಳ ಹಿರಿಯ ವ್ಯಕ್ತಿ ಪಾತ್ರದಲ್ಲಿ ನಟಿಸಿದ ಪಾತ್ರವದು. ಆದರೆ, ರಂಗಭೂಮಿ ಹಿನ್ನೆಲೆಯಿಂದ ಬಂದಿದ್ದ ನಟ ರಮೇಶ್ ಭಟ್ ಅವರಿಗೆ ಅದು ಕಷ್ಟವೇನೂ ಆಗಲಿಲ್ಲ. ಲೀಲಾಜಾಲವಾಗಿ ನಟಿಸಿದ್ದ ರಮೇಶ್ ಭಟ್ ಅದರಲ್ಲಿ ಕಿರುತೆರೆ ಪ್ರೇಕ್ಷಕರ ಮೆಚ್ಚುಗೆ ಹಾಗೂ ಪ್ರೀತಿ ಗಳಿಸಿದ್ದರು. ಈ ಸೀರಿಯಲ್ 7 ಬಾರಿ ಧಾರಾವಾಹಿ ಮರುಪ್ರಸಾರವಾಗಿದ್ದು ಕಂಡಿದ್ದು ಈ ಮೂಲಕ ದಾಖಲೆ ನಿರ್ಮಿಸಿದೆ. 

Scroll to load tweet…