ರಕ್ಷಿತ್ ಶೆಟ್ಟಿ ಬಗ್ಗೆ ಹೀಗೊಂದು ಸುದ್ದಿ ವೈರಲ್; ದಳಪತಿ ವಿಜಯ್ ಸಿನಿಮಾದಲ್ಲಿ ಸಿಂಪಲ್ ಸ್ಟಾರ್
ರಕ್ಷಿತ್ ಶೆಟ್ಟಿ ಬಗ್ಗೆ ಹೀಗೊಂದು ಸುದ್ದಿ ವೈರಲ್ ಆಗಿದೆ. ದಳಪತಿ ವಿಜಯ್ ಸಿನಿಮಾದಲ್ಲಿ ಸಿಂಪಲ್ ಸ್ಟಾರ್ ನಟಿಸುತ್ತಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.
ಕನ್ನಡದ ಸಿಂಪಲ್ ಸ್ಟಾರ್, 777ಚಾರ್ಲಿ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ನಾಡಿದ್ದ ರಕ್ಷಿತ್ ಶೆಟ್ಟೆ ಸದ್ಯ ಅನೇಕ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ರಕ್ಷಿತ್ ಬಗ್ಗೆ ಮತ್ತೊಂದು ಇಂಟ್ರಸ್ಟಿಂಗ್ ಸುದ್ದಿ ವೈರಲ್ ಆಗಿದೆ. ಕಾಲಿವುಡ್ ಅಂಗಳದಲ್ಲಿ ಈಗ ರಕ್ಷಿತ್ ಶೆಟ್ಟಿದೇ ಸದ್ದು. ಸಿಂಪಲ್ ಸ್ಟಾರ್ ಕಾಲಿವುಡ್ ಸಿನಿಮಾರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ ಎನ್ನಲಾಗಿದೆ. ಕಾಲಿವುಡ್ ಸ್ಟಾರ್ ವಿಜಯ್ ದಳಪತಿ ನಟನೆಯ ಮುಂದಿನ ಸಿನಿಮಾದಲ್ಲಿ ನಟಿಸುವ ಮೂಲಕ ರಕ್ಷಿತ್ ಶೆಟ್ಟಿ ತಮಿಳು ಸಿನಿಮಾರಂಗದಲ್ಲಿ ಮಿಂಚುತ್ತಿದ್ದಾರೆ ಎನ್ನಲಾಗಿದೆ.
ವಿಜಯ್ ನಟನೆಯ ದಳಪತಿ67 (ತಾತ್ಕಾಲಿಕ ಹೆಸರು) ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗಿದೆ. ಖ್ಯಾತ ನಿರ್ದೇಶಕ ಲೋಕೇಶ್ ಕನಗರಾಜ್ ಜೊತೆ ದಳಪತಿ ವಿಜಯ್ ಮುಂದಿನ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ದೊಡ್ಡ ಸ್ಟಾರ್ ಕಾಸ್ಟ್ ಇರಲಿದೆ ಎನ್ನುವ ಮಾತು ಕಾಲಿವುಡ್‌ನಲ್ಲಿ ಗುಲ್ಲಾಗಿದೆ. ವಿಜಯ್ ಸದ್ಯ ವಾರಿಸು ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಈ ಸಿನಿಮಾದಲ್ಲಿ ರಶ್ಮಿಕಾ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಇದೀಗ ರಶ್ಮಿಕಾ ಬಳಿಕ ವಿಜಯ್ ಸಿನಿಮಾದಲ್ಲಿ ರಕ್ಷಿತ್ ನಟಿಸಲಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.
ದಳಪತಿ 67 ಸಿನಿಮಾದಲ್ಲಿ ಕಮಲ್, ಸಂಜಯ್ ದತ್
ದಳಪತಿ 67 ಸಿನಿಮಾದಲ್ಲಿ ಸ್ಯಾಂಡಲ್ ವುಡ್ ಸ್ಟಾರ್ ರಕ್ಷಿತ್ ಶೆಟ್ಟಿ ಜೊತೆ ಬಾಲಿವುಡ್ ಖ್ಯಾತ ನಟ ಸಂಜಯ್ ದತ್ ಹೆಸರು ಕೂಡ ಕೇಳಿ ಬರುತ್ತಿದೆ. ಕೆಜಿಎಫ್ ಸಿನಿಮಾದ ಅಧೀರ ಪಾತ್ರದ ಮೂಲಕ ದಕ್ಷಿಣ ಭಾರತೀಯ ಸಿನಿಮಾ ಮಂದಿಯ ಹೃದಯ ಗೆದ್ದಿರುವ ಸಂಜಯ್ ದತ್ ಇದೀಗ ವಿಜಯ್ ಸಿನಿಮಾದಲ್ಲಿ ವಿಲನ್ ಆಗಿ ಅಬ್ಬರಿಸಲಿದ್ದಾರೆ ಎನ್ನಲಾಗಿದೆ. ಇನ್ನು ವಿಶೇಷ ಎಂದರೆ ಕಮಲ್ ಹಾಸನ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರಂತೆ. ಒಂದು ವೇಳೆ ಈ ಸುದ್ದಿ ನಿಜವೇ ಆಗಿದ್ದರೆ ರಕ್ಷಿತ್ ಶೆಟ್ಟಿ, ಕಮಲ್ ಹಾಸನ್, ಸಂಜಯ್ ದತ್ ಮತ್ತು ದಳಪತಿ ವಿಜಯ್ ಘಟಾನುಘಟಿ ಸ್ಟಾರ್‌ಗಳನ್ನು ಒಂದೇ ಸಿನಿಮಾದಲ್ಲಿ ನೋಡುವ ಅವಕಾಶ ಅಭಿಮಾನಿಗಳಿಗೆ ಸಿಗಲಿದೆ.
ನನ್ನ ಸಾಧನೆಯ ಹಿಂದೆ ದೊಡ್ಡ ಪ್ರಭಾವ ಬೀರಿದವನು ರಕ್ಷಿತ್: ಸ್ನೇಹಿತನ ಬಗ್ಗೆ ರಿಷಬ್ ಮನದಾಳದ ಮಾತು
ವಿಜಯ್‌ಗೆ ತ್ರಿಷಾ ನಾಯಕಿ
ವಿಜಯ್‌ಗೆ ನಾಯಕಿಯಾಗಿ ತ್ರಿಷಾ ಆಯ್ಕೆಯಾಗಿದ್ದಾರೆ ಎನ್ನುವ ಮಾತು ಕೂಡ ಕೇಳಿಬರುತ್ತಿದೆ. ಅನೇಕ ವರ್ಷಗಳ ಬಳಿಕ ತ್ರಿಷಾ ಮತ್ತು ವಿಜಯ್ ಒಟ್ಟಿಗೆ ಅಭಿಮಾನಿಗಳ ಮುಂದೆ ಬರ್ತಿದ್ದಾರೆ ಎನ್ನುವ ಮಾತು ಈ ಹಿಂದೆಯೇ ಕೇಳಿ ಬರುತ್ತಿತ್ತು. ಇದೀಗ ಲೋಕೇಶ್ ಕನಗರಾಜ್ ಸಿನಿಮಾ ಮೂಲಕ ಇಬ್ಬರನ್ನೂ ಒಟ್ಟಿಗೆ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಅಂದಹಾಗೆ ನಿರ್ದೇಶಕ ಲೋಕೇಶ್ ವಿಕ್ರಮ್ ಸಿನಿಮಾ ಮೂಲಕ ದೊಡ್ಡ ಮಟ್ಟದ ಸಕ್ಸಸ್ ನೀಡಿದ್ದರು. ಕಮಲ್ ಹಾಸನ್, ಫಹಾದ್ ಫಾಸಿಲ್ ಮತ್ತು ವಿಜಯ್ ಸೇತುಪತಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಿದ್ದ ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಕೋಟಿ ಕೋಟಿ ಲೂಟಿ ಮಾಡಿತ್ತು. ಹಾಗಾಗಿ ಲೋಕೇಶ್ ಮುಂದಿನ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಅದರಲ್ಲೂ ಅನೇಕ ಸ್ಟಾರ್ ಕಲಾವಿದರ ಹೆಸರು ಕೇಳಿಬರುತ್ತಿರುವುದರಿಂದ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.
Rashmika Mandanna ರಕ್ಷಿತ್ ಶೆಟ್ಟಿ ಹಾಗೆ ವಿಜಯ್ ದೇವರಕೊಂಡಗೆ ಅಸುರಕ್ಷತೆ ಭಾವನೆ ಇಲ್ಲ; ರಶ್ಮಿಕಾ ಮಂದಣ್ಣ
ಲೋಕೇಶ್ ಕನಗರಾಜ್ ಸಿನಿಮಾದಲ್ಲಿ ನಟಿಸುವ ಬಗ್ಗೆ ರಕ್ಷಿತ್ ಕಡೆಯಿಂದ ಅಥವಾ ಸಿನಿಮಾತಂಡದ ಕಡೆಯಿಂದ ಇನ್ನೂ ಅಧಿಕೃತ ಮಾಹಿತಿ ರಿವೀಲ್ ಆಗಿಲ್ಲ. ಆದರೆ ಆಗಲೇ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಸಂಭ್ರಮಿಸುತ್ತಿದ್ದಾರೆ. ರಕ್ಷಿತ್ ಶೆಟ್ಟಿ ಕನ್ನಡದಲ್ಲಿ ಸಪ್ತ ಸಾಗರದಾಚೆ ಎಲ್ಲೋ, ರಿಚರ್ಡ್ ಆಂಟನಿ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ನಟನೆ ಜೊತೆಗೆ ಮತ್ತೆ ನಿರ್ದೇಶನಕ್ಕೂ ಮರಳಿದ್ದಾರೆ. ಇದೀಗ ತಮಿಳು ಸಿನಿಮಾದಲ್ಲಿ ನಟಿಸುತ್ತಿರುವ ವಿಚಾರ ಕೇಳಿ ಅವರ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಈ ಬಗ್ಗೆ ಸದ್ಯದಲ್ಲೇ ಅಧಿಕೃತ ಮಾಹಿತಿ ಬಹಿರಂಗವಾಗುವ ಸಾಧ್ಯತೆ ಇದೆ.