ಕಿರಣ್‌ ರಾಜ್‌ ನಟನೆಯ, ರಕ್ಷಿತ್‌ ಶೆಟ್ಟಿ ನಟನೆಯ ‘777 ಚಾರ್ಲಿ’ ಚಿತ್ರ ಶುಕ್ರವಾರ ವಿಶ್ವಾದ್ಯಂತ ಬಿಡುಗಡೆಯಾಗಿದೆ. ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದೀಗ ಚಿತ್ರತಂಡ ಪೈರಸಿ ತಡೆಗೆ ಮುಂದಾಗಿದ್ದು, ಇದಕ್ಕಾಗಿಯೇ ವಿಶೇಷ ತಂಡ ರಚನೆಯಾಗಿದೆ. 

ಕಿರಣ್‌ ರಾಜ್‌ ನಟನೆಯ, ರಕ್ಷಿತ್‌ ಶೆಟ್ಟಿ ನಟನೆಯ ‘777 ಚಾರ್ಲಿ’ ಚಿತ್ರ ಶುಕ್ರವಾರ ವಿಶ್ವಾದ್ಯಂತ ಬಿಡುಗಡೆಯಾಗಿದೆ. ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದೀಗ ಚಿತ್ರತಂಡ ಪೈರಸಿ ತಡೆಗೆ ಮುಂದಾಗಿದ್ದು, ಇದಕ್ಕಾಗಿಯೇ ವಿಶೇಷ ತಂಡ ರಚನೆಯಾಗಿದೆ. ಪೈರಸಿ ಕಂಡುಬಂದರೆ ಟ್ವಿಟ್ಟರ್‌ನಲ್ಲಿ ಈ ತಂಡಕ್ಕೆ ಟ್ಯಾಗ್‌ ಮಾಡುವ ಮೂಲಕ ಅಥವಾ ಈ ಮೇಲ್‌ ಮಾಡುವ ಮೂಲಕ ಮಾಹಿತಿ ನೀಡಬಹುದು. ಟ್ವಿಟ್ಟರ್‌ನಲ್ಲಿ @blockxtechs.ಗೆ ನೇರ ಮೆಸೇಜ್‌ ಮಾಡಬಹುದು. ಅಥವಾ report@blockxtech.com ಈ ಮೇಲ್‌ ಮಾಡಬಹುದು ಎಂದು ಚಿತ್ರತಂಡ ತಿಳಿಸಿದೆ.

ಚಾರ್ಲಿ ನಾಯಿಯಿಂದ ಚಿತ್ರ ವೀಕ್ಷಣೆ: ‘777 ಚಾರ್ಲಿ’ ಚಿತ್ರದಲ್ಲಿ ಮುಖ್ಯಪಾತ್ರ ವಹಿಸಿರುವ ಚಾರ್ಲಿ ನಾಯಿಯೂ ಈ ಸಿನಿಮಾ ವೀಕ್ಷಣೆ ಮಾಡಿದೆ. ನಿರ್ದೇಶಕ ಕಿರಣ್‌ ರಾಜ್‌, ನಾಯಕಿ ಸಂಗೀತಾ ಶೃಂಗೇರಿ, ರಾಜ್‌ ಬಿ ಶೆಟ್ಟಿ ಹಾಗೂ ಇಡೀ ಚಿತ್ರತಂಡ ಬೆಂಗಳೂರಿನ ತ್ರಿವೇಣಿ ಚಿತ್ರಮಂದಿರದಲ್ಲಿ ಸಿನಿಮಾ ವೀಕ್ಷಿಸಿತು. ಚಾರ್ಲಿ ನಾಯಿಯೂ ತನ್ನ ಅಭಿಮಾನಿಗಳೊಂದಿಗೆ ಕೂತು ಸಿನಿಮಾ ವೀಕ್ಷಿಸಿದ್ದು ವಿಶೇಷವಾಗಿತ್ತು.

ರಶ್ಮಿಕಾಗಿಂತ ನಾಯಿಗೆ ನಿಯತ್ತು, ಪ್ರೀತಿ ಜಾಸ್ತಿ ಅಂತ ತೋರಿಸಲು ರಕ್ಷಿತ್ ಶೆಟ್ಟಿ 777 ಚಾರ್ಲಿ ಮಾಡಿದ್ರಾ?

ರಕ್ಷಿತ್‌ ತಾಯಿ ಕಣ್ಣೀರು: ‘777 ಚಾರ್ಲಿ’ ಚಿತ್ರ ನೋಡಿ ಚಿತ್ರನಟಿ ರಮ್ಯಾ ಸೇರಿದಂತೆ ಹಲವು ಪ್ರೇಕ್ಷಕರು ಕಣ್ಣೀರು ಹಾಕಿದ್ದರು. ರಕ್ಷಿತ್‌ ಶೆಟ್ಟಿಅವರ ತಾಯಿ ರಂಜಿನಿ ಶೆಟ್ಟಿ ಅವರೂ ಸಿನಿಮಾ ನೋಡಿ ಭಾವುಕರಾದರು.

ಚಾರ್ಲಿಗಾಗಿ ಬೆಂಗಳೂರಿಗೆ ಬಂದ ಸಾಯಿ ಪಲ್ಲವಿ: ಚಾರ್ಲಿಯನ್ನು ನೋಡಿ ಫಿದಾ ಆಗಿರುವ ನಟಿ ಸಾಯಿ ಪಲ್ಲವಿ ಚಾರ್ಲಿ ನೋಡಲು ಬೆಂಗಳೂರಿಗೆ ಬಂದಿದ್ದಾರೆ. ಚಾರ್ಲಿಯನ್ನು ಮುದ್ದಾಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಾಯಿ ಪಲ್ಲವಿ ತನ್ನ ಕಾಲುಮೇಲೆ ಚಾರ್ಲಿಯನ್ನು ಮಲಗಿಸಿಕೊಂಡು ಮುದ್ದು ಮಾಡುತ್ತಿರುವ ಫೋಟೋವನ್ನು ರಕ್ಷಿತ್ ಶೆಟ್ಟಿ ಅವರ ಪರಂವಾ ಸ್ಟುಡಿಯೋ ಶೇರ್ ಮಾಡಿದೆ. 

ಫೋಟೋ ಶೇರ್ ಮಾಡಿ, ಚಾರ್ಲಿ ನೋಡಲು ಯಾರು ಬಂದಿದ್ದಾರೆ ನೋಡಿ ಎಂದು ಕ್ಯಾಪ್ಷನ್ ನೀಡಿದ್ದಾರೆ. '777 ಚಾರ್ಲಿ' ಸಿನಿಮಾ ನೋಡಿ ಮೆಚ್ಚಿಕೊಂಡವರಲ್ಲಿ ದಕ್ಷಿಣ ಭಾರತದ ಖ್ಯಾತ ನಟಿ ಸಾಯಿ ಪಲ್ಲವಿ ಸಹ ಒಬ್ಬರಾಗಿದ್ದು, ಸಿನಿಮಾವನ್ನು ಅದೆಷ್ಟು ಮೆಚ್ಚಿಕೊಂಡಿದ್ದಾರೆಂದರೆ, '777 ಚಾರ್ಲಿ' ಸಿನಿಮಾದಲ್ಲಿರುವ ನಾಯಿಯನ್ನು ಮುದ್ದಿಸಲು ಬೆಂಗಳೂರಿಗೆ ಬಂದಿದ್ದಾರೆ. 

Rakshith shettyಗೆ ನಾಯಿಗಿಂತ ಬೆಕ್ಕೇ ಇಷ್ಟವಂತೆ! ಬೆಕ್ಕಿನ ಸಿನಿಮಾ ಮಾಡ್ತಾರಾ?

ದೇಶ-ವಿದೇಶಗಳಲ್ಲಿ ತೆರೆಗೆ ಬಂದಿರುವ 777 ಚಾರ್ಲಿಗೆ ಎಲ್ಲಾ ಕಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಧರ್ಮ ಮತ್ತು ಚಾರ್ಲಿಯ ಭಾವನಾತ್ಮಕ ಜರ್ನಿಗೆ ಪ್ರೇಕ್ಷಕರು ಭಾವುಕರಾಗಿದ್ದಾರೆ. ಧರ್ಮ ಮತ್ತು ಚಾರ್ಲಿಯ ಭಾವನಾತ್ಮಕ ಜರ್ನಿಗೆ ಪ್ರೇಕ್ಷಕರು ಭಾವುಕರಾಗಿದ್ದಾರೆ. ಸಿನಿಮಾ ನೋಡಿ ಹೊರಬಂದ ಪ್ರೇಕ್ಷಕರ ಕಣ್ಣಂಚಲ್ಲಿ ನೀರು ಜಿನುಗುತ್ತಿದೆ. ಚಾರ್ಲಿಯನ್ನು ನೋಡಿ ಫಿದಾ ಆಗಿರುವ ನಟಿ ಸಾಯಿ ಪಲ್ಲವಿ ಚಾರ್ಲಿ ನೋಡಲು ಬೆಂಗಳೂರಿಗೆ ಬಂದಿದ್ದಾರೆ. ಚಾರ್ಲಿಯನ್ನು ಮುದ್ದಾಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.