ನಟ ಹಾಗೂ ರಾಜಕಾರಣಿ ನಿಖಿಲ್‌ ಕುಮಾರಸ್ವಾಮಿ ಹಾಗೂ ರೇವತಿ ಮದುವೆಯ ಏಪ್ರಿಲ್‌ 17ರಂದು ರಾಮನಗರದ ಜಾನಪದ ಲೋಕದಲ್ಲಿ ಅದ್ದೂರಿಯಾಗಿ ನಡೆಯಬೇಕೆಂದು ಪೂರ್ವ ನಿಗದಿಯಾಗಿತ್ತು ಆದರೆ  ಮಹಾಮಾರಿ ಕೊರೋನಾ ವೈರಸ್‌ ಅಟ್ಟಹಾಸದಿಂದ ಅದ್ಧೂರಿ ಮದುವೆಗೆ ಬ್ರೇಕ್‌ ಹಾಕಿದ್ದಾರೆ. 

ಏಪ್ರಿಲ್‌ 17ರಂದು ನಿಖಿಲ್ ಹಾಗೂ ರೇವತಿ ಮದುವೆ ರೇವತಿ ಅವರ ಜ್ಞಾನಭಾರತಿ ಬಡಾವಣೆಯಲ್ಲಿರುವ  ನಿವಾಸದಲ್ಲಿ ಸರಳವಾಗಿ  ನಡೆಯಲಿದ್ದು ಕೇವಲ 50 ಜನರು ಮಾತ್ರ ಭಾಗಿಯಾಗಲಿದ್ದಾರೆ ಎಂದು ಎಚ್‌.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ. 

ನಿಶ್ಚಿತಾರ್ಥದಲ್ಲಿ ಅಪ್ಸರೆಯಂತೆ ಕಂಗೊಳಿಸಿದ ರೇವತಿ; ಮೇಕಪ್ ಆರ್ಟಿಸ್ಟ್ ಇವರೇ!

ನಿನ್ನೆ ಸಂಜೆ ಹೆಚ್.ಡಿ.ದೇವೇಗೌಡರು ಹಾಗೂ ಹೆಚ್.ಡಿ.ಕುಮಾರಸ್ವಾಮಿ  ಕುಟುಂಬದವರು ನಿಖಿಲ್‌ ವಿವಾಹದ ಬಗ್ಗೆ ಚರ್ಚೆ ನಡೆಸಿ, ಅಂತಿಮ ನಿರ್ಧಾರಕ್ಕೆ ಬಂದಿದ್ದಾರೆ. ಏಪ್ರಿಲ್‌ 17 ಒಳ್ಳೆ ಮುಹೂರ್ತವಿದ್ದು ಅದು  ಬಿಟ್ಟರೆ  ಇನ್ನೂ ಮೂರ್ನಾಲ್ಕು ತಿಂಗಳ ಒಳ್ಳೆಯ ಮುಹೂರ್ತವಿಲ್ಲದ  ಕಾರಣಕ್ಕೆ ಸಿಂಪಲ್‌ ಆಗಿ ಮದುವೆ ಕಾರ್ಯಕ್ರಮ ನಡೆಯಲಿದೆ. ಲಾಕ್‌ಡೌನ್‌ ಮುಗಿದ ನಂತರ ಪರಿಸ್ಥಿತಿ ನೋಡಿಕೊಂಡು ಆರತಕ್ಷತೆ ಮಾಡುವುದಾಗಿ ನಿರ್ಧರಿಸಿದ್ದಾರೆ.

ಏಪ್ರಿಲ್ 17 ರಂದು ಎರಡೂ ಕುಟುಂಬದ ಸದಸ್ಯರುಗಳ ಸಮ್ಮುಖದಲ್ಲಿ 'ಶ್ರೀ ಶಾರ್ವರೀನಾಮ ಸಂವತ್ಸರದ ಉತ್ತರಾಯಣದ ವಸಂತ ಋತುವಿನ ಚೈತ್ರಮಾಸದ ಕೃಷ್ಣ ಪಕ್ಷದ ದಶಮಿ ಒಳ್ಳೆಯ ಮುಹೂರ್ತ'ದಲ್ಲಿ ಮದುವೆ ನೆರವೇರಲಿದೆ.

ರೇವತಿ ಬಂದಿದ್ದೇ ತಡ ರಾಜಕಾರಣಿಯಾಗಿದ್ದ ನಿಖಿಲ್ ಕವಿಯಾಗ್ಬಿಟ್ರು!