Bengaluru flooding ಕಟು ಸತ್ಯ ತಿಳಿಸಿ ಟ್ರೋಲ್ ಆದ ರಮ್ಯಾ, ತಪ್ಪು ಅಂಕಿ ಅಂಶ ನೀಡಿದ ಮಾಜಿ ಸಂಸದೆ!

ಬೆಂಗಳೂರು ಮಳೆ ಹಾಗೂ ಹಲವು ಪ್ರದೇಶಗಳು ಮುಳುಗಡೆಗೆ ಆಡಳಿತ ನಡೆಸಿದ ಸರ್ಕಾರಗಳೇ ಕಾರಣ ಅನ್ನೋ ಆಕ್ರೋಶ ಹೆಚ್ಚಾಗುತ್ತಿದೆ. ಇದರ ನಡುವೆ ಮಾಜಿ ಸಂಸದೆ, ನಟಿ ರಮ್ಯಾ ಕಟು ಸತ್ಯವನ್ನು ಹೇಳಿದ್ದಾರೆ. ಆದರೆ ಸತ್ಯ ಹೇಳುವಾಗ ಅಂಕಿ ಅಂಶಗಳನ್ನೇ ಮರೆತಿದ್ದಾರೆ. ಇಷ್ಟೇ ಅಲ್ಲ ಬಳಿಕ ಮೆಲ್ಲನೆ ಜಾರಿಕೊಳ್ಳುವ ಯತ್ನ ಮಾಡಿದ್ದಾರೆ.

26 out of 28 MLAs in Karnataka into real estate former MP Ramya misleading statistics tweet gets trolled cm

ಬೆಂಗಳೂರು(ಸೆ.07):  ಭಾರಿ ಮಳೆಯಿಂದ ಬೆಂಗಳೂರಿನ ಹಲವು ಪ್ರದೇಶಗಳು ಮುಳುಗಡೆಯಾಗಿದೆ. ಜನರ ಆಕ್ರೋಶ ಹೆಚ್ಚಾಗಿದೆ. ಬೆಂಗಳೂರು ಈ ರೀತಿ ಮುಳುಗಡೆಗೆ ರಾಜಕಾರಣಿಗಳು, ಸರ್ಕಾರವೇ ಕಾರಣ ಅನ್ನೋದರಲ್ಲಿ ಎರಡು ಮಾತಿಲ್ಲ. ಇದೀಗ ಮಾಜಿ ಸಂಸದೆ, ನಟಿ ರಮ್ಯಾ ಬೆಂಗಳೂರು ಸಮಸ್ಯೆಗೆ ರಿಯಲ್ ಎಸ್ಟೇಟ್ ರಾಜಕಾರಣಿಗಳು ಕಾರಣ ಎಂದಿದ್ದಾರೆ. ಆದರೆ ಈ ವಿಚಾರ ಹೇಳುವಾಗ ರಮ್ಯಾ ಎಡವಟ್ಟೊಂದನ್ನು ಮಾಡಿದ್ದಾರೆ. ಕರ್ನಾಟಕದಲ್ಲಿ ರಿಯಲ್ ಎಸ್ಟೇಟ್ ಉದ್ಯಮದಿಂದ ಬದು ಶಾಸಕರಾದವರ ಸಂಖ್ಯೆ ಎಷ್ಟಿದೆ ಗೊತ್ತಾ? 28ರಲ್ಲಿ 26 ಶಾಸಕರು ರಿಯಲ್ ಎಸ್ಟೇಟ್ ಉದ್ಯಮಿಗಳು ಎಂದು ರಮ್ಯಾ ಹೇಳಿದ್ದಾರೆ. ಆದರೆ ಶಾಸಕರ ಸಂಖ್ಯೆ ಹಾಗೂ ಅಂಕಿ ಅಂಶದಲ್ಲಿ ರಮ್ಯಾ ತಪ್ಪು ಮಾಹಿತಿ ನೀಡಿದ್ದಾರೆ. ಈ ಕುರಿತು ಹಲವರು ಪ್ರಶ್ನಿಸಿದ್ದಾರೆ. ಈ ವೇಳೆ ನಾನು ಕರ್ನಾಟಕದ ಶಾಸಕರ ಸಂಖ್ಯೆ ಹೇಳಿಲ್ಲ, ಬೆಂಗಳೂರು ಶಾಸಕರ ಸಂಖ್ಯೆ ಎಂದು ಜಾರಿಕೊಳ್ಳುವ ಯತ್ನ ಮಾಡಿದ್ದಾರೆ.

ಬೆಂಗಳೂರಿನ ಹಲವು ಭಾಗಗಳು(Bengaluru Rain), ಮನೆಗಳು, ರಸ್ತೆಗಳು ಮಳುಗಡೆಯಾಗಿರುವ(Floods) ದೃಶ್ಯ, ಫೋಟೋಗಳನ್ನು ಹಂಚಿಕೊಂಡಿರುವ ರಮ್ಯಾ(Divya Spandana Ramay) , ಸರಣಿ ಟ್ವೀಟ್ ಮೂಲಕ ಬೆಂಗಳೂರಿನ ಸಮಸ್ಯೆಗೆ ಮೂಲ ಕಾರಣವನ್ನು ಹುಡುಕವ ಪ್ರಯತ್ನ ಮಾಡಿದ್ದಾರೆ. ಮೊದಲ ಟ್ವೀಟ್‌ನಲ್ಲಿ ರಮ್ಯಾ, ಕರ್ನಾಟಕದ(Karnataka MLA and MP) ಎಷ್ಟು ಶಾಸಕರು ಹಾಗೂ ಸಂಸದರು ರಿಯಲ್ ಎಸ್ಟೇಟ್ ಉದ್ಯಮಿಗಳಾಗಿದ್ದಾರೆ? ನಿಮಗೆ ಗೊತ್ತೆ? ಮೂಲಗಳ ಪ್ರಕಾರ 28 ರಲ್ಲಿ 26 ನಾಯಕರು ರಿಯಲ್ ಎಸ್ಟೇಟ್ (Real Estate) ಉದ್ಯಮಿಗಳಾಗಿದ್ದಾರೆ. ಇದು ನಿಜಕ್ಕೂ ದಿಗ್ಭ್ರಮೆಗೊಳಿಸುವ ಸಂಖ್ಯೆ ಎಂದು ರಮ್ಯಾ ಟ್ವೀಟ್ ಮಾಡಿದ್ದಾರೆ.

ನಿರ್ಮಾಪಕಿಯಾಗಿ ರಮ್ಯಾ ಎಂಟ್ರಿ; ಪ್ರೊಡಕ್ಷನ್ ಹೌಸ್‌ಗೆ 'ಆಪಲ್ ಬಾಕ್ಸ್' ಎಂದು ಹೆಸರಿಟ್ಟ ಮೋಹಕತಾರೆ

ಈ 26 ಶಾಸಕರು ಸಂಸದರು ರಿಯಲ್ ಎಸ್ಟೇಟ್‌ನಿಂದಲೇ ಚುನಾಯಿತರಾಗಿದ್ದಾರೆ.ಇದು ಜನರ ಆಯ್ಕೆ ಅಥವಾ ರಿಯಲ್ ಎಸ್ಟೇಟ್ ಚುನಾಯಿತ ಪ್ರತಿನಿಧಿಗಳೇ? ಹೀಗಾಗಿ ಯೋಜಿಸಿ, ಬುದ್ಧಿವಂತಿಕೆಯಿಂದ ಮತ ಚಲಾಯಿಸಿ. ನಗರದಲ್ಲಿರುವ ಜನರು ಮತ ಹಾಕುವುದಿಲ್ಲ. ಆದರೆ ಇಂತಹ ಸಂದರ್ಭದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತೇವೆ. ಇದಕ್ಕೆ ನಾವೆಲ್ಲರೂ ಹೊಣೆಯಾಗುತ್ತೇವೆ ಎಂದು ರಮ್ಯಾ ಎರಡನೇ ಟ್ವೀಟ್ ಮಾಡಿದ್ದಾರೆ.

 

 

ರಿಯಲ್ ಎಸ್ಟೇಟ್ ಕುಳಗಳಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡುವುು ಯಾಕೆ? ಒರ್ವ ಶಾಸಕನಿಗೆ 40 ಲಕ್ಷ ರೂಪಾಯಿ ಚುನಾವಣ ವೆಚ್ಚ ಮಾಡಲು ಆಯೋಗ ಅನುಮತಿಸಿದೆ. ಆದರೆ ಚುನಾವಣೆಗಳಲ್ಲಿ ಒಬ್ಬೊಬ್ಬರು ಕೋಟಿ ಕೋಟಿ ಖರ್ಚು ಮಾಡುತ್ತಾರೆ. ಇದುವೇ ಈ ಪರಿಸ್ಥಿತಿಗೆ ಕಾರಣ ಎಂದು ಮತ್ತೊಂದು ಟ್ವೀಟ್ ಮಾಡಿದ್ದಾರೆ. 

ರಮ್ಯಾ ಸರಣಿ ಟ್ವೀಟ್‌ಗೆ ಕಮೆಂಟ್‌ಗಳು ಬಂದಿದೆ. ಕರ್ನಾಟಕದಲ್ಲಿ 224 ಶಾಸಕರಿದ್ದಾರೆ ಎಂದಿರುವ ಒಂದ ಕಮೆಂಟ್ ರಮ್ಯಾ ತಪ್ಪು ಅಂಕಿ ಅಂಶವನ್ನು ತೋರಿಸಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ರಮ್ಯಾ, ನಾನು ಕರ್ನಾಟಕದ ಶಾಸಕರ ಸಂಖ್ಯೆ ಹೇಳಿಲ್ಲ. ಇದರ ಬಗ್ಗೆ ಮಾಹಿತಿ ಇಲ್ಲ. ನಾನು ಹೇಳಿರುವುದು ಬೆಂಗಳೂರಿನ ಶಾಸಕರ ಕುರಿತು ಎಂದಿದ್ದಾರೆ. ಆದರೆ ರಮ್ಯಾ ಎಲ್ಲಿಯೂ ಬೆಂಗಳೂರು ಶಾಸಕರು ಎಂದು ಉಲ್ಲೇಖಿಸಿಲ್ಲ. ಎಲ್ಲಾ ಕಡೆ ಕರ್ನಾಟಕ ಶಾಸಕರು, ಸಂಸದರು ಎಂದಿದ್ದಾರೆ.

ನನ್ನ soulmate ಸತ್ತುಹೋಗಿರಬಹುದು; ಮದುವೆ ಬಗ್ಗೆ ಮೌನ ಮುರಿದ ರಮ್ಯಾ

ರಮ್ಯಾ ಅಂಕಿ ಅಂಶದಲ್ಲಿ ಎಡವಿದ್ದಾರೆ. ಆದರೆ ಕಟು ಸತ್ಯವನ್ನೇ ಹೇಳಿದ್ದಾರೆ. ಇದು ರಿಯಲ್ ಎಸ್ಟೇಟ್ ಉದ್ಯಮಿ ರಾಜಕಾರಣಿಗಳು, ಭ್ರಷ್ಟ ಸರ್ಕಾರಗಳಿಂದಲೇ ಬೆಂಗಳೂರು ಮುಳುಗಡೆಯಾಗುತ್ತಿದೆ. ರಮ್ಯಾ ಅಂಕಿ ಅಂಶ ತಪ್ಪಾದರೂ ಹೇಳಿರುವ ವಿಚಾರ ಸರಿಯಾಗಿದೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ.

 

Latest Videos
Follow Us:
Download App:
  • android
  • ios