13ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವ 2021ರ ಆರಂಭದಲ್ಲಿ ಹಮ್ಮಿಕೊಳ್ಳಲಾಗಿದೆ. ಇಂದು ವಿಧಾನ ಸೌಧದಲ್ಲಿ ಈ ಸಂಬಂಧ ಪೂರ್ವಭಾವಿ ಸಭೆ ನಡೆದಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್, ನಿರ್ದೇಶಕ ಲಿಂಗದೇವರು ಮತ್ತು ನಟಿ ಶ್ರುತಿ ಭಾಗಿಯಾಗಿದ್ದರು.  

'ಹಿಂದಿನ ಜನ್ಮದಲ್ಲಿ ನಾನು ಕನ್ನಡಿಗನಾಗಿದ್ದೆ' ಸೋನು ಸುಗಮ ಗಾಯನ

ಚಿತ್ರಮಂದಿರಗಳು ತೆರೆದಿದ್ದು, ವೀಕ್ಷಕರ ಸಂಖ್ಯೆ ಕಡಿಮೆಯಾಗಿರುವುದು ಎಲ್ಲರಿಗೂ ತಿಳಿದಿದೆ. ಆದರೆ ಆ್ಯಕ್ಟ್‌ 1978, ಅರಿಷಡ್ವರ್ಗ ಸಿನಿಮಾಗಳು ರಿಲೀಸ್ ಅದ ನಂತರ ಜನರು ಮನಸ್ಸು ಸಿನಿಮಾದತ್ತ ಸೆಳೆಯುತ್ತಿದೆ. ಕೊರೋನಾ ಮುಂಜಾಗೃತ ಕ್ರಮಗಳ ಬಗ್ಗೆ ಚಿಂತಿಸಿ ಸಿನಿಮೋತ್ಸವ ಪ್ಲಾನ್ ಮಾಡಲಾಗುತ್ತದೆ. 2020ರ ಸಿನಿಮೋತ್ಸವ ಫೆಬ್ರವರಿ 26ರಿಂದ ಮಾರ್ಚ್‌ 4ರವರೆಗೂ ನಡೆದಿತ್ತು. 

2020ರ ಕಾರ್ಯಕ್ರಮನ್ನು ಬೆಂಗಳೂರಿನ ಕಂಠೀರವ ಒಳಾಂಗಣದಲ್ಲಿ ಮಾಡಲಾಗಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಉದ್ಘಾಟನೆ ಮಾಡಿದ್ದರು. 60 ರಾಷ್ಟ್ರಗಳ ಸುಮಾರು 200 ಚಿತ್ರಗಳು ಪ್ರದರ್ಶಿತಗೊಂಡಿದ್ದವು. ಬಂಜಾರ, ತುಳು, ಕೊಡವ, ಕೊಂಕಣೆ, ತಮಿಳು, ಕಾಸಿ ಭಾಷೆಗಳ ಚಿತ್ರಗಳನ್ನು ವಿಶೇಷವಾಗಿ ಈ ಹಬ್ಬದಲ್ಲಿ ಪರಿಚಯಿಸಿದ್ದರು.  ಈ ವರ್ಷದ ಅಂತಾರಾಷ್ಟ್ರೀಯ ಸಿನಿಮೋತ್ಸವದ ವಿಶೇಷತೆ ತಿಳಿದುಕೊಳ್ಳಲು ಕಾಯಬೇಕು. 

ಸಿನಿಮೋತ್ಸವ; ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದ ದರ್ಶನ್ 'ಮುನಿರತ್ನ ಕುರುಕ್ಷೇತ್ರ'!