ವಿಶ್ವದ ಅತಿ ದುಬಾರಿ ಬೆಲೆಯ ಕಾಂಡೋಮ್? ಏನಿದರ ವಿಶೇಷತೆ? ಯಾಕಿಷ್ಟು ದರ?

ಕುರಿಗಳ ಕರುಳಿನಿಂದ ತಯಾರಿಸಲಾದ ಈ ಕಾಂಡೋಮ್, 19 ಸೆಂ.ಮೀ ಉದ್ದವಿದ್ದು, ಅಂದಿನ ಶ್ರೀಮಂತ ವರ್ಗದವರು ಬಳಸುತ್ತಿದ್ದರು.

World Most Expensive 200 Year old Condom Price And Details mrq

ನವದೆಹಲಿ: ಗರ್ಭನಿರೋಧಕವಾಗಿ ಕಾಂಡೋಮ್ ಬಳಕೆ ಮಾಡಲಾಗುತ್ತದೆ. ಇಂದು ಮಾರುಕಟ್ಟೆಯಲ್ಲಿ ಹಲವು ಕಂಪನಿಗಳ ಕಾಂಡೋಮ್‌ಗಳು ಲಭ್ಯ ಇವೆ. ವಿಶ್ವದಾದ್ಯಂತ ಜನನ ನಿಯಂತ್ರಣಕ್ಕಾಗಿ ಜನರು ಆಯ್ಕೆ ಮಾಡಿಕೊಳ್ಳುವ ವಿಧಾನ ಕಾಂಡೋಮ್ ಆಗಿದೆ. ಕಾಂಡೋಮ್‌ಗಳು ಮಾರುಕಟ್ಟೆಯಲ್ಲಿ ತನ್ನದೇ ಆದ ಬೇಡಿಕೆಯನ್ನು ಹೊಂದಿದೆ. ಕೋವಿಡ್-19 ಕಾಲಘಟ್ಟದಲ್ಲಿ ಕಾಂಡೋಮ್ ಬೇಡಿಕೆ ದೊಡ್ಡಪ್ರಮಾಣದಲ್ಲಿ ಏರಿಕೆಯಾಗಿತ್ತು. ಕಾಂಡೋಮ್ ಬೇಡಿಕೆ ಯಾವ ಸಮಯದಲ್ಲಿಯೂ ಕುಸಿತ ಕಂಡಿಲ್ಲ. ಪ್ರತಿವರ್ಷ ಕಾಂಡೋಮ್ ಮಾರಾಟದ ಪ್ರಮಾಣ ಏರಿಕೆಯಾಗುತ್ತಿದೆ ಎಂದು ಮಾರುಕಟ್ಟೆ ತಜ್ಞರು ಹೇಳುತ್ತಾರೆ. ಕೊರೊನಾ ಕಾಲದ ವೇಳೆ ಮಾರುಕಟ್ಟೆಯಲ್ಲಿ ಸುಮಾರು 10 ಕೋಟಿ ಕಾಂಡೋಮ್‌ಗಳ ಕೊರತೆ ಉಂಟಾಗಿತ್ತು. ಇದೇ ಸಂದರ್ಭದಲ್ಲಿ ವಿಶ್ವದ ಅತಿದೊಡ್ಡ ಕಾಂಡೋಮ್ ತಯಾರಿಕೆ ಕಂಪನಿ Karex Bhd ಸಹ ಬಂದ್ ಆಗಿತ್ತು.

ಈ ಲೇಖನದಲ್ಲಿ ಅತಿ ದುಬಾರಿ ಮತ್ತು ಅತ್ಯಂತ ಹಳೆಯದಾದ ಕಾಂಡೋಮ್ ಬಗ್ಗೆ ಹೇಳುತ್ತಿದ್ದೇವೆ. ಈ ದುಬಾರಿ ಕಾಂಡೋಮ್ ಬೆಲೆಯಲ್ಲಿ ಒಂದು ಐಪೋನ್ ಖರೀದಿಸಬಹುದಾಗಿದೆ. ಈ ವಿಷಯ ಕೇಳಿ ನಿಮಗೆ ಶಾಕ್ ಆಗಬಹುದು. ಜಗತ್ತಿನಲ್ಲಿ ಇಷ್ಟು ದುಬಾರಿ ಬೆಲೆಯ ಕಾಂಡೋಮ್ ಸಹ ಇದೆ. ಹಾಗಾದ್ರೆ ಇದು ಎಲ್ಲಿದೆ?> ಇದರ ಬೆಲೆ ಎಷ್ಟು? ಯಾಕಿಷ್ಟು ದುಬಾರಿ ಎಂಬುದರ ಮಾಹಿತಿ ಇಲ್ಲಿದೆ. 

ಈ ಫೋಟೋದಲ್ಲಿರೋದು ಅತಿ ದುಬಾರಿ ಬೆಲೆ ಮತ್ತು ಅತ್ಯಂತ ಹಳೆಯದಾದ ಕಾಂಡೋಮ್ ಆಗಿದೆ. ಇದು ಸುಮಾರು 200 ವರ್ಷಗಳಷ್ಟು ಹಳೆಯದಾಗಿದ್ದು, ಸ್ಪೇನ್‌ನ ನಗರವೊಂದರ ಬಾಕ್ಸ್‌ನಲ್ಲಿ ಪತ್ತೆಯಾಗಿತ್ತು. 200 ವರ್ಷಗಳಷ್ಟು ಹಳೆಯದಾದ ಕಾಂಡೋಮ್‌ನ್ನು ಆಸ್ಟರ್ಮ್ ಎಂಬ ವ್ಯಕ್ತಿ ಹರಾಜಿನಲ್ಲಿ 42,500 ರೂಪಾಯಿ ನೀಡಿ ಖರೀದಿಸಿದ್ದಾನೆ. ಅಂದಿನಿಂದ ಇದಕ್ಕೆ ಜಗತ್ತಿನ ಅತಿ ದುಬಾರಿ ಬೆಲೆ ಕಾಂಡೋಮ್ ಎಂಬ ಹೆಸರನ್ನು ಪಡೆದುಕೊಂಡಿದೆ. 

ಇದನ್ನೂ ಓದಿ: ಸಂಚಲನ ಸೃಷ್ಟಿಸುತ್ತಿದೆ ಡಿಜಿಟಲ್ ಕಾಂಡೋಮ್; ಇದು ಹೇಗೆ ಕೆಲಸ ಮಾಡುತ್ತೆ? ಬಳಸೋದೇಗೆ?

ಇದು ಸುಮಾರು 19 ಸೆಂಟಿ ಮೀಟರ್ ಉದ್ದವನ್ನು ಹೊಂದಿದ್ದು, 200 ವರ್ಷಗಳ ಹಿಂದೆ ಶ್ರೀಮಂತ ವರ್ಗದ ಜನರು ಗರ್ಭನಿರೋಧಕಕ್ಕಾಗಿ ಈ ರೀತಿಯ ಕಾಂಡೋಮ್‌ ಬಳಕೆ ಮಾಡುತ್ತಿದ್ದರು. ಈ ಕಾಂಡೋಮ್ ಅನ್ನು ಕುರಿಗಳ ಕರುಳಿನಿಂದ ತಯಾರಿಸಲಾಗುತ್ತದೆ. ಈ ಕಾಂಡೋಮ್ ತಯಾರಿಸಲು ಸಾಕಷ್ಟು ಸಮಯ ಬೇಕಾಗುತ್ತಿತ್ತು. 19ನೇ ಶತಮಾನದ ನಂತರ ರಬ್ಬರ್ ಮಾದರಿಯ ಕಾಂಡೋಮ್‌ಗಳನ್ನು ಪರಿಚಯಿಸಲಾಯ್ತು.

ಕಾಂಡೋಮ್ ಬಳಕೆಯಲ್ಲಿ ಕರ್ನಾಟಕಕ್ಕೆ 15ನೇ ಸ್ಥಾನ
ಸುರಕ್ಷಿತ ಲೈಂಗಿಕ ಸಂಪರ್ಕ ಮತ್ತು ಅನಗತ್ಯ ಗರ್ಭಧಾರಣೆ ತಡೆಯುವ ಉದ್ದೇಶದಿಂದ ಹೆಚ್ಚಾಗಿ ಕಾಂಡೋಮ್ ಬಳಕೆ ಮಾಡಲಾಗುತ್ತದೆ. ಕಾಂಡೋಮ್ ಲೈಂಗಿಕವಾಗಿ ಹರಡುವ ಕೆಲವು ಸೋಂಕುಗಳನ್ನು ನಿಯಂತ್ರಿಸುವ ಕೆಲಸವನ್ನು ಮಾಡುತ್ತದೆ. ಒಬ್ಬರಿಗಿಂತ ಹೆಚ್ಚು ಸಂಗಾತಿಗಳನ್ನು ಹೊಂದಿರುವವರು ಜನರಿಗೆ ಕಾಂಡೋಮ್ ಬಳಕೆಗೆ ಸಲಹೆ ನೀಡಲಾಗುತ್ತದೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಇಲಾಖೆಯ 2021-22ರಲ್ಲಿ ನಡೆಸಿದ ಸಮೀಕ್ಷೆ ಪ್ರಕಾರ, ದಾದ್ರಾ ನಗರ್ ಹಾವೆಲಿಯ ಗರಿಷ್ಠ ಕಾಂಡೋಮ್ ಬಳಕೆ ಮಾಡಲಾಗುತ್ತದೆ. ಆಂಧ್ರ ಪ್ರದೇಶ, ಪುದುಚೇರಿ, ಪಂಜಾಬ್, ಚಂಡೀಗಢ ನಂತರದ ಸ್ಥಾನದಲ್ಲಿವೆ. ಕರ್ನಾಟಕ 15ನೇ ಸ್ಥಾನದಲ್ಲಿದೆ.

ಇದನ್ನೂ ಓದಿ: ಕಾಂಡೋಮ್ ಬಳಕೆದಾರರಿಗೆ ಶಾಕಿಂಗ್ ನ್ಯೂಸ್: ಬಳಕೆಯ ಉದ್ದೇಶವೇ ಈಡೇರಲ್ಲ, ಈ 6 ವಿಷಯ ನಿಮಗೆ ಗೊತ್ತಿರಲಿ!

Latest Videos
Follow Us:
Download App:
  • android
  • ios