ಎಐ ತಂತ್ರಜ್ಞಾನ ಬಳಸಿ ಬಾಯ್ ಫ್ರೆಂಡ್ ಗುಟ್ಟು ರಟ್ಟು ಮಾಡಿದ ಯುವತಿ
ಬಾಯ್ ಫ್ರೆಂಡ್ ಅಥವಾ ಗರ್ಲ್ ಫ್ರೆಂಡ್ ಮೋಸ ಮಾಡ್ತಿದ್ದಾಳೆ ಎಂಬ ಅನುಮಾನ ಬಂದಿದ್ಯಾ? ಇನ್ಮುಂದೆ ಚಿಂತೆ ಬೇಡ. ಎಐ ತಂತ್ರಜ್ಞಾನ ಬಳಸಿಕೊಂಡು ನೀವು ಸತ್ಯ ಬಯಲು ಮಾಡ್ಬಹುದು. ಈ ಯುವತಿ ಬಾಯ್ ಫ್ರೆಂಡ್ ಹಾಗೇ ಸಿಕ್ಕಿಬಿದ್ದಿದ್ದಾನೆ.
ಕೃತಕ ಬುದ್ಧಿಮತ್ತೆ ಯುಗ ಶುರುವಾಗ್ತಿದೆ. ಅನೇಕ ಉದ್ಯಮಕ್ಕೆ ಈ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಬಳಕೆಯಾಗ್ತಿದೆ. ಕೆಲ ದಿನಗಳ ಹಿಂದೆ ಆರ್ಷಿಫಿಶಿಲರ್ ಇಂಟೆಲಿಜೆನ್ಸ್ ನ್ಯೂಸ್ ಆಂಕರ್ ಲಿಸಾ ಸುದ್ದಿಗೆ ಬಂದಿದ್ದಳು. ಕಂಪನಿಯೊಂದು ಕೃತಕ ಬುದ್ಧಿಮತ್ತೆ ಬಳಸಿ ನಿಮ್ಮಿಷ್ಟದ ಸಂಗಾತಿ ಪಡೆಯುವ ಆಯ್ಕೆಯನ್ನೂ ನೀಡ್ತಿದೆ. ಇದ್ರಿಂದ ಲಾಭವಿದ್ದಷ್ಟೆ ನಷ್ಟವೂ ಇದೆ. ಅನೇಕರು ಕೆಲಸ ಕಳೆದುಕೊಳ್ಳುವ ಭಯ ಇದ್ರಲ್ಲಿದೆ. ಅದೆನೇ ಇರಲಿ, ಆರ್ಷಿಫಿಶಿಲರ್ ಇಂಟೆಲಿಜೆನ್ಸ್ ಬಳಸಿ, ಹುಡುಗಿಯೊಬ್ಬಳು ತನ್ನ ಬಾಯ್ ಫ್ರೆಂಡ್ ಗುಟ್ಟು ಬಯಲು ಮಾಡಿದ್ದಾಳೆ. ಇನ್ಮುಂದೆ ಯಾರದ್ದೇ ಕರೆ ಬಂದ್ರೂ ಮಾತನಾಡೋವಾಗ ಎಚ್ಚರವಾಗಿರಿ. ಇಲ್ಲ ಅಂದ್ರೆ ನೀವೂ ಈ ಹುಡುಗಿ ಬಾಯ್ ಫ್ರೆಂಡ್ ಗೆಳೆಯನಂತೆ ಪೇಚಿಗೆ ಸಿಲುಕುವ ಸಾಧ್ಯತೆ ಇರುತ್ತದೆ. ಅಷ್ಟಕ್ಕೂ ಆ ಬಾಯ್ ಫ್ರೆಂಡ್ ಮಾಡಿದ್ದೇನು? ಹುಡುಗಿ ಕಂಡು ಹಿಡಿದಿದ್ದೇನೆ? ಆರ್ಷಿಫಿಶಿಲರ್ ಇಂಟೆಲಿಜೆನ್ಸ್ ಬಳಕೆ ಅಲ್ಲಿ ಹೇಗಾಯ್ತು ಎಂಬುದನ್ನು ನಾವು ಹೇಳ್ತೇವೆ.
ಸಿಕ್ಕಿಬಿದ್ದ ಬಾಯ್ ಫ್ರೆಂಡ್ (Boy Friend) : 22 ವರ್ಷದ ಮಿಯಾ ಡಿಯೋ ( Mia Dio) ಗೆ ಕೆಲ ದಿನಗಳಿಂದ ತನ್ನ ಬಾಯ್ ಫ್ರೆಂಡ್ ಬಿಲ್ಲಿ ಮೇಲೆ ಅನುಮಾನವಿತ್ತಂತೆ. ಬಿಲ್ಲಿ ಅನುಮಾನ ಬರುವಂತೆ ನಡೆದುಕೊಳ್ತಿದ್ದನಂತೆ. ಬಿಲ್ಲಿ ವರ್ತನೆಯಿಂದ ಅನುಮಾನಗೊಂಡ ಮಿಯಾ ಡಿಯೋ, ಅದನ್ನು ಪತ್ತೆ ಹಚ್ಚಲು ಮುಂದಾಗಿದ್ದಾಳೆ. ಅದಕ್ಕೆ ಆರ್ಷಿಫಿಶಿಲರ್ ಇಂಟೆಲಿಜೆನ್ಸ್ ಬಳಸಿಕೊಂಡಿದ್ದಾಳೆ. ಏನೆಲ್ಲ ಆಯ್ತು ಎನ್ನುವುದನ್ನು ವಿಡಿಯೋ ಮಾಡಿ, ಟಿಕ್ ಟಾಕ್ (Tik Tok) ನಲ್ಲಿ ಹಂಚಿಕೊಂಡಿದ್ದಾಳೆ ಮಿಯಾ.
ಈ ಕೆಲವು ಹುಡುಗರಿಗ್ಯಾಕೆ ಅಮ್ಮನ ವಯಸ್ಸಿನ ಹೆಂಗಸರು ಇಷ್ಟವಾಗೋದು?
ಟಿಕ್ ಟಾಕ್ ನಲ್ಲಿ ವೈರಲ್ ಆದ ವಿಡಿಯೋ ಪ್ರಕಾರ, ಮಿಯಾ ಡಿಯೋ ಮೇಲ್‌ಬಾಕ್ಸ್‌ನಿಂದ ಬಿಲ್ಲಿಯ ಧ್ವನಿಯನ್ನು ಕಾಪಿ ಮಾಡಿದ್ದಾಳೆ. ನಂತ್ರ ಎಐ ಸಹಾಯದಿಂದ ಬಿಲ್ಲಿ ಸ್ನೇಹಿತನಿಗೆ ಕರೆ ಮಾಡಿದ್ದಾಳೆ. ಬಿಲ್ಲಿ ಧ್ವನಿಯಲ್ಲೇ ಮಾತು ಮುಂದುವರೆಸಿದ್ದಾಳೆ. ಸ್ನೇಹಿತನಿಗೆ ಕರೆ ಮಾಡಿದ್ದು ಬಿಲ್ಲಿಯಲ್ಲ ಮಿಯಾ ಡಿಯೋ ಎಂಬುದು ಗೊತ್ತೇ ಆಗ್ಲಿಲ್ಲ. ಆತ ಬಿಲ್ಲಿ ಎಂದುಕೊಂಡೇ ಮಾತನಾಡಿದ್ದಾನೆ.
ಸ್ನೇಹಿತೆಯ ಮಗ, 16 ವರ್ಷದ ಬಾಲಕನನ್ನು ಮದ್ವೆಯಾದ 41 ವರ್ಷದ ಆಂಟಿ!
ನಶೆಯಲ್ಲಿ ನಾನು ಮಾಡಿದ್ದೇನು? : ಮಿಯಾ ಡಿಯೋ, ಬಿಲ್ಲಿ ಧ್ವನಿಯಲ್ಲೇ ಮಾತು ಮುಂದುವರೆಸಿದ್ದಾಳೆ. ನಿನ್ನೆ ರಾತ್ರಿ ನಾನು ತುಂಬಾ ನಶೆಯಲ್ಲಿದ್ದೆ. ನನಗೆ ಏನು ಮಾಡಿದ್ದೇನೆ ಎಂಬುದು ಗೊತ್ತಾಗಲಿಲ್ಲ. ಏನು ಮಾಡಿದ್ದೆ ಎಂದು ಸ್ನೇಹಿತನನ್ನು ಪ್ರಶ್ನೆ ಮಾಡಿದ್ದಾಳೆ. ಅದಕ್ಕೆ ಸ್ನೇಹಿತ ಪ್ರಾಮಾಣಿಕವಾಗಿ ಉತ್ತರ ನೀಡಿದ್ದಾನೆ. ನೀನು ನಿನ್ನೆ ರಾತ್ರಿ ತುಂಬಾ ನಶೆಯಲ್ಲಿದ್ದ ಕಾರಣ ಒಂದು ಹುಡುಗಿಗೆ ಕಿಸ್ ಕೊಟ್ಟಿದ್ದೆ ಎಂದಿದ್ದಾನೆ.
ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮೂಲಕ ನಾನು ನನ್ನ ಬಾಯ್ ಫ್ರೆಂಡ್ ಮೋಸವನ್ನು ಪತ್ತೆ ಮಾಡಿದ್ದೇನೆ. ನನಗೆ ಅವನ ಮೇಲೆ ಅನುಮಾನವಿತ್ತು ಎಂದು ಮಿಯಾ ಡಿಯೋ ವಿಡಿಯೋದಲ್ಲಿ ಹೇಳಿದ್ದಾಳೆ.
ಮಿಯಾ ಡಿಯೋ ವಿಡಿಯೋ ವೈರಲ್ ಆಗಿದೆ. ಟಿಕ್ ಟಾಕ್ ನಲ್ಲಿ ಜನರು ಅನೇಕ ರೀತಿಯ ಕಮೆಂಟ್ ಮಾಡಿದ್ದಾರೆ. ಕೆಲವರು, ತಾವೂ ಈ ವಿಧಾನವನ್ನು ಬಳಸಿಕೊಳ್ಳುತ್ತೇವೆ ಎಂದಿದ್ದಾರೆ. ಮೋಸ ಪತ್ತೆ ಹಚ್ಚಲು ಇದು ಒಳ್ಳೆ ವಿಧಾನವೆಂದು ಅವರು ಹೇಳಿದ್ದಾರೆ.
ಪ್ಲಾನ್ ಪ್ರಕಾರ ನಡೆದಿತ್ತು : ಮಿಯಾ ಡಿಯೋ ಈ ವಿಡಿಯೋ ವೈರಲ್ ಆಗ್ತಿದ್ದಂತೆ ಮತ್ತೊಂದು ವಿಡಿಯೋ ಹಂಚಿಕೊಂಡಿದ್ದಾಳೆ. ಆ ವಿಡಿಯೋದಲ್ಲಿ ತನ್ನ ಬಾಯ್ ಫ್ರೆಂಡ್ ಯಾವುದೇ ಮೋಸ ಮಾಡಿಲ್ಲ. ಇದು ಮೊದಲೇ ಮಾಡಿದ ಪ್ಲಾನ್ ಆಗಿತ್ತು ಎಂದಿದ್ದಾಳೆ. ಬಾಯ್ ಫ್ರೆಂಡ್, ಆತನ ಗೆಳಯ ಹಾಗೂ ನಾನು ಸೇರಿ ಎಐನಿಂದ ಏನೆಲ್ಲ ಮಾಡ್ಬಹುದು ಎಂಬುದನ್ನು ನಿಮಗೆ ತೋರಿಸಲು ಈ ಪ್ರಯತ್ನ ನಡೆಸಿದ್ವಿ ಎಂದಿದ್ದಾಳೆ.