ಮದುವೆಯಾಗಿ ಅದೆಷ್ಟೋ ವರ್ಷ ಕಳೆದರೂ ಕಡಿಮೆಯಾಗದ ಪ್ರೀತಿ/ ಜೂಮ್ ಕಾಲ್ ನಲ್ಲಿ ಗಂಡನಿಗೆ ಮುತ್ತಿಡಲು ಮುಂದಾದ ಮಹಿಳೆ/ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್/ ವಿವಿಧ ಗಣ್ಯರಿಂದರಲೂ ಪ್ರತಿಕ್ರಿಯೆ

ನವದೆಹಲಿ (ಫೆ. 20) ಮದುವೆಯಾಗಿ ಅದೆಷ್ಟೋ ವರ್ಷಗಳು ಕಳೆದಿವೆಯೋ.. ಆದರೆ ಆ ಜೋಡಿಯ ಪ್ರೀತಿ ಮಾತ್ರ ಒಂದಿಂಚು ಕಡಿಮೆಯಾಗಿಲ್ಲ. ಅದಕ್ಕೆ ಸಾಕ್ಷಿ ಈ ವಿಡಿಯೋ.

ಜೂಮ್ ಕಾಲ್ ನಲ್ಲಿ ಗಂಡ ಮೀಟಿಂಗ್ ನಲ್ಲಿದ್ದರು. ಒಳಗಿನಿಂದ ಬಂದ ಹೆಂಡತಿಗೆ ಗಂಡನ ಮೇಲೆ ಪ್ರೀತಿ ಉಕ್ಕಿ ಬಂದಿದೆ. ಇದ್ದಕ್ಕಿದ್ದಂತೆ ಒಂದು ಕಿಸ್ ಕೊಡಲು ಮುಂದಾಗಿದ್ದಾಳೆ. ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಕೆಆರ್ ಪೇಟೆ ಬಸ್ ನಿಲ್ದಾಣದಲ್ಲಿಯೇ ಮೈಮರೆತ ಜೋಡಿ.. ಮುತ್ತಿನ ಮಳೆ

ಹೆಂಡತಿ ಕಿಸ್ ಕೊಡಲು ಬಂದಾಗ ದೂರ ಸರಿಯುವ ಗಂಡ, ನಾನು ಕಾಲ್ ನಲ್ಲಿ ಇದ್ದೇನೆ.. ಏನು ಮಾಡುತ್ತಿದ್ದೀಯಾ ಎಂದು ದಬಾಯಿಸಾದ್ದಾರೆ. ಹಾಗಾಗಿ ಆ ಕ್ಷಣದ ಆನಂದ ಕಳೆದುಕೊಂಡಿದ್ದಾರೆ. 

ಕೈಗಾರಿಕೋದ್ಯಮಿ ಹರ್ಷ ಗೊಯಂಕಾ ಅವರು ಈ ವಿಡಿಯೋವನ್ನು ಟ್ವೀಟ್ ಮಾಡಿದ್ದು, 'ಜೂಮ್ ಕಾಲ್ ಸೋ ಫನ್ನಿ' ಎಂದು ಬರೆದು ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಮಹೀಂದ್ರಾ ಸಂಸ್ಥೆಯ ಆನಂದ್ ಮಹೀಂದ್ರ ಸಹ ವೈರಲ್ ಆಗಿರುವ ವೀಡಿಯೋ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಜೂಮ್ ಮೀಟಿಂಗ್ ನಲ್ಲೇ ರಾಸಲೀಲೆ.. ಅಯ್ಯಪ್ಪಾ

ಮಹಿಳೆಯನ್ನು ವರ್ಷದ ಪತ್ನಿಯನ್ನಾಗಿ ಈ ಮಹಿಳೆಯನ್ನು ನಾಮಿನೇಟ್ ಮಾಡಬೇಕು. ಅಲ್ಲದೆ ಪತಿಗೂ ಹೆಚ್ಚು ಆಸೆ ಇದ್ದಿದ್ದರೆ, ಈ ಇಬ್ಬರನ್ನೂ ವರ್ಷದ ಜೋಡಿ ಎಂದು ನಾಮಿನೇಟ್ ಮಾಡುತ್ತಿದ್ದೆ. ಆದರೆ ಆತ ಸಿಟ್ಟು ಮಾಡಿಕೊಂಡು ಅವಕಾಶ ಕಳೆದುಕೊಂಡಿದ್ದಾನೆ ಎಂದು ಆನಂದ್ ಮಹೀಂದ್ರಾ ಹೇಳಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು ನೆಟ್ಟಿಗರು ಬಗೆಬಗೆಯ ಕಮೆಂಟ್ ಮಾಡಿದ್ದಾರೆ. ಕೊರೋನಾ ಲಾಕ್ ಡೌನ್ ನಂತರ ಸಂಸ್ಥೆಗಳು ಮೀಟಿಂಗ್ ಮಾಡಲು ಇಂಥ ಆನ್ ಲೈನ್ ಅಪ್ಲಿಕೇಶನ್ ಗಳನ್ನು ಬಳಕೆ ಮಾಡಿಕೊಳ್ಳುತ್ತಿವೆ. ಬ್ರೆಜಿಲ್ ನಲ್ಲಿ ಜೂಮ್ ಮೀಟಿಂಗ್ ವೇಳೆಯೇ ಪತ್ರಕರ್ತನೊಬ್ಬ ಹಸ್ತಮೈಥುನ ಮಾಡಿಕೊಂಡಿದ್ದು ದೊಡ್ಡ ಸುದ್ದಿಯಾಗಿತ್ತು. 

Scroll to load tweet…
Scroll to load tweet…