Asianet Suvarna News Asianet Suvarna News

ಬೇಕಾ ಇನ್ನೊಬ್ಳು..ಗಂಡನನ್ನು ರಸ್ತೆಯಲ್ಲಿ ಅಟ್ಟಾಡಿಸಿ ಚಪ್ಪಲಿಯಲ್ಲಿ ಹೊಡೆದ ಹೆಂಡ್ತಿ!

ದಾಂಪತ್ಯ ಜೀವನದಲ್ಲಿ ಜಗಳ ನಡೆಯೋದು ಸಾಮಾನ್ಯ. ಆದ್ರೆ ಕೆಲವೊಮ್ಮೆ ಇದು ಹಾದಿ-ಬೀದಿ ರಂಪಕ್ಕೂ ಕಾರಣವಾಗುತ್ತದೆ. ಹಾಗೆಯೇ ಇಲ್ಲೊಬ್ಬ ಮಹಿಳೆ ತನ್ನ ಗಂಡನಿಗೂ, ಆತನ ಎರಡನೇ ಹೆಂಡತಿಗೂ ರಸ್ತೆಯಲ್ಲಿ ಹೊಡೆಯುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

Woman hits husband with slippers, locks horns with 2nd wife on road Vin
Author
First Published Jun 6, 2023, 9:38 AM IST

ಗಂಡ-ಹೆಂಡತಿ ಜಗಳ ಉಂಡೋ ಮಲಗೋ ತನಕ ಅಂತಾರೆ. ಆದ್ರೆ ಕೆಲವೊಮ್ಮೆ ಹಾಗಾಗಲ್ಲ. ಇಬ್ಬರ ನಡುವಿನ ಜಗಳ ಅದೆಷ್ಟು ಬಾರಿ ಉಂಡು ಮಲಗಿದರೂ ಮುಗಿಯೋದಿಲ್ಲ. ಅದರಲ್ಲೂ ಇತ್ತೀಚಿಗೆ ಅನೈತಿಕ ಸಂಬಂಧ, ವಿವಾಹೇತರ ಸಂಬಂಧಗಳ ಪ್ರಕರಣ ಹೆಚ್ಚಾಗಿರುವ ಕಾರಣ, ಗಂಡ-ಹೆಂಡತಿ ಜಗಳ ಹಾದಿ-ಬೀದಿ ರಂಪವಾಗಿಬಿಡುತ್ತದೆ. ಹಾಗೆಯೇ ಇಲ್ಲೊಂದೆಡೆ ಪತಿ-ಪತ್ನಿ ಮತ್ತು ಅವಳ ಜಗಳ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಜನರು ಓಡಾಡೋ ಮುಖ್ಯ ರಸ್ತೆಯಲ್ಲಿ ಮೂವರು ಜಗಳವಾಡಿಕೊಂಡಿದ್ದಾರೆ.

ವಿವಾಹೇತರ ಸಂಬಂಧ (Extra marital affair) ಇತ್ತೀಚಿಗೆ ತುಂಬಾ ಸಾಮಾನ್ಯವಾಗಿದೆ. ದಾಂಪತ್ಯ ಜೀವನ ಚೆನ್ನಾಗಿದ್ದರೂ ಪತಿ ಅಥವಾ ಪತ್ನಿ (Husband-wife) ಮತ್ತೊಬ್ಬರ ಜೊತೆ ಸಂಬಂಧ ಇಟ್ಟುಕೊಳ್ಳುತ್ತಾರೆ. ನಂತರದ ದಿನಗಳಲ್ಲಿ ಇದು ಹಾದಿ-ಬೀದಿಯಲ್ಲಿ ರಂಪ-ರಾಮಾಯಣ ಮಾಡುವ ವಿಷಯವಾಗಿ ಬಿಡುತ್ತದೆ. ಹಾಗೆಯೇ ಇಲ್ಲೊಂದು ಗಂಡ-ಹೆಂಡತಿಯ ಜಗಳ ಬೀದಿಗೆ ಬಂದಿದೆ. ಮೊದಲನೇ ಪತ್ನಿ, ರಸ್ತೆಯಲ್ಲೇ ಗಂಡ ಹಾಗೂ ಆತನ ಎರಡನೇ ಪತ್ನಿಯ ಗ್ರಹಚಾರ ಬಿಡಿಸಿದ್ದಾಳೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.ಪ್ರ ಕಾಶ್ ಕುಮಾರ್ ಎಂಬವರು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social media) ವೈರಲ್ ಆಗಿದೆ. ಬಳಕೆದಾರರ ಪ್ರಕಾರ, ಬಿಹಾರದ ನಳಂದಾದಲ್ಲಿ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.

ಮಂಟಪದಲ್ಲಿ ಇರುವಾಗ್ಲೇ ವರನಿಗೆ ಬಂತು ವಧುವಿನ ಲವರ್ ಕಾಲ್‌, ಆಮೇಲೆ ಆಗಿದ್ದೇನು?

ಗಂಡನಿಗೆ ಚಪ್ಪಲಿ ಪೂಜೆ, ಮಹಿಳೆಯ ಜುಟ್ಟು ಹಿಡಿದು ಕಿತ್ತಾಟ
ಮಹಿಳೆಯೊಬ್ಬಳು ತನ್ನ ಗಂಡನ ಎರಡನೇ ಹೆಂಡತಿಗೆ ರಸ್ತೆಯಲ್ಲಿ ಹೊಡೆಯುವುದನ್ನು ತೋರಿಸುವ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವೀಡಿಯೊದಲ್ಲಿ ಕಂಡುಬರುವಂತೆ, ಒಬ್ಬ ವ್ಯಕ್ತಿ ಬ್ಯಾಗ್ ಅನ್ನು ಹೊತ್ತುಕೊಂಡು ರಸ್ತೆಯ ಮೇಲೆ ನಿಂತಿದ್ದರೆ, ನೀಲಿ ಬಣ್ಣದ ಸಲ್ವಾರ್ ಧರಿಸಿದ ಇನ್ನೊಬ್ಬಾಕೆ ಅವನ ಬಳಿ ನಿಂತಿದ್ದಾಳೆ. ಈ ಮಧ್ಯೆ, ಮತ್ತೊಬ್ಬ ಮಹಿಳೆ ಬಂದು ಏಕಾಏಕು ಪುರುಷನನ್ನು (Men) ಥಳಿಸಲು ಪ್ರಾರಂಭಿಸುತ್ತಾಳೆ. ಮಾತ್ರವಲ್ಲ ಮತ್ತೊಬ್ಬ ಮಹಿಳೆಗೂ ಹೊಡೆಯುತ್ತಾಳೆ. ಇಬ್ಬರೂ ಓಡಿದರೂ ಅವರನ್ನು ಬಿಡದೆ ಥಳಿಸುತ್ತಾರೆ.

ಘಟನೆಯ ಬಗ್ಗೆ ತಿಳಿದ ಜನರು, ಮೊದಲನೇ ಪತ್ನಿ ತನಗೆ ಮೋಸ ಮಾಡಿದ ಗಂಡ (Husband) ಹಾಗೂ ಎರಡನೇ ಪತ್ನಿಗೆ ಹೊಡೆದಳು ಎಂದು ತಿಳಿದುಬಂದಿದೆ. ಮಹಿಳೆ ಗಂಡನನ್ನು ರಸ್ತೆಯಲ್ಲಿ ಅಟ್ಟಾಡಿಸಿ ಚಪ್ಪಲಿಯಲ್ಲಿ ಹೊಡೆಯುತ್ತಾಳೆ. ಮಾತ್ರವಲ್ಲ ಗಂಡನ ಎರಡನೇ ಹೆಂಡ್ತಿಯ ಜುಟ್ಟು ಹಿಡಿದು ಎಳೆದಾಡುತ್ತಾಳೆ. ಈ ಸಂದರ್ಭದಲ್ಲಿ ಅಲ್ಲಿದ್ದ ಕೆಲ ಮಹಿಳೆಯರೂ ಅವಳೊಂದಿಗೆ ಸೇರಿಕೊಳ್ಳುತ್ತಾರೆ. ಒಟ್ನಲ್ಲಿ ಹೆಂಡ್ತಿಯನ್ನು ಬಿಟ್ಟು ಮತ್ತೊಬ್ಬಳ ಸಹವಾಸ ಮಾಡೋ ಗಂಡಸರಿಗೆ ಈ ಘಟನೆ ತಕ್ಕಪಾಠದಂತಿದೆ.

ಮದ್ವೆ ದಿನ ಓಡಿಹೋದ ವಧು, ಆಕೆಗಾಗಿ ಮಂಟಪದಲ್ಲೇ 13 ದಿನ ಕಾದು ಕುಳಿತ ವರ!

Follow Us:
Download App:
  • android
  • ios