Asianet Suvarna News Asianet Suvarna News

ಮನೆ ರಿಪೇರಿ ಟೈಮಲ್ಲಿ ವಾಲ್ ಪೇಪರ್ ಹಿಂದಿದ್ದ ಮೆಸೇಜ್ ನೋಡಿ ಕಣ್ಣಿರಿಟ್ಟ ಮಹಿಳೆ

ಮನೆಯ ಮೂಲೆಯಲ್ಲಿರುವ ಕೆಲ ವಸ್ತುಗಳು ನಮ್ಮ ನೆನಪನ್ನು ತಾಜಾಗೊಳಿಸುತ್ತವೆ. ಮತ್ತ್ಯಾರದ್ದೂ ಪ್ರೀತಿ ನಮ್ಮ ಹೃದಯ ಮುಟ್ಟುತ್ತೆ. ಹಳೆ ಮನೆ ಖರೀದಿ ಮಾಡಿ ಅದ್ರ ರಿಪೇರಿ ವೇಳೆ ಈ ಮಹಿಳೆ ಭಾವುಕಳಾಗುವ ಘಟನೆ ನಡೆದಿದೆ. 
 

Woman Discovers Heartbreaking Hidden Message Behind Wallpaper Home Renovation roo
Author
First Published Dec 7, 2023, 1:21 PM IST

ಒಂದು ಮನೆಯಿಂದ ಇನ್ನೊಂದು ಮನೆಗೆ ಬಾಡಿಗೆಗೆ ಹೋದಾಗ ಅಥವಾ ಹಳೆ ಮನೆಯನ್ನು ನಾವು ಖರೀದಿಸಿದಾಗ  ಮನೆ ಸ್ವಚ್ಛಗೊಳಿಸದೆ ಮನೆ ಪ್ರವೇಶ ಮಾಡೋದಿಲ್ಲ. ಮನೆ ಕ್ಲೀನ್ ಮಾಡುವ ವೇಳೆ ಹಳೆ ಮಾಲೀಕರ ಅಥವಾ ಬಾಡಿಗೆದಾರರ ಕೆಲ ವಸ್ತುಗಳು ನಮಗೆ ಸಿಗೋದಿದೆ. ಎಷ್ಟೋ ವರ್ಷಗಳ ಹಿಂದಿನ ವಸ್ತುಗಳು ಅಥವಾ ಭಯ ಹುಟ್ಟಿಸುವ ವಸ್ತುಗಳು ಕೂಡ ಸಿಗುತ್ತದೆ. ಈ ವಸ್ತುಗಳು, ಅಲ್ಲಿರುವ ಸಂದೇಶಗಳು ಮನಸ್ಸು ಮುಟ್ಟುತ್ತವೆ. ಸಾಮಾಜಿಕ ಜಾಲತಾಣದಲ್ಲಿ (Social Media) ಇಂಥ ಘಟನೆಗಳನ್ನು ಜನರು ಆಗಾಗ ಹಂಚಿಕೊಳ್ತಿರುತ್ತಾರೆ. ಈಗ ಮಹಿಳೆಯೊಬ್ಬಳು ತನ್ನ ಅನುಭವವನ್ನು ಹಂಚಿಕೊಂಡಿದ್ದಾಳೆ. ಮಹಿಳೆ ಹಳೆ ಮನೆಯೊಂದನ್ನು ಖರೀದಿ ಮಾಡಿದ್ದಾಳೆ. ರಿನೋವೇಶನ್ ವೇಳೆ ಆಕೆಗೆ ಆದ ಅನುಭವವನ್ನು ಆಕೆ ಟಿಕ್ ಟಾಕನಲ್ಲಿ ಹಂಚಿಕೊಂಡಿದ್ದಾಳೆ. ಇದಕ್ಕೆ ಬಳಕೆದಾರರು ಸಾಕಷ್ಟು ಪ್ರತಿಕ್ರಿಯೆ ನೀಡಿದ್ದಾರೆ.

ಹಳೆ ಮನೆ (House) ವಾಲ್ ಪೇಪರ್ ನಲ್ಲಿದ್ದು ಈ ವಿಷ್ಯ : 
ಮಹಿಳೆ ಮನೆ ಖರೀದಿಸಿದ ನಂತ್ರ ಮನೆಯನ್ನು ಸ್ವಚ್ಛಗೊಳಿಸುವ ಕೆಲಸಕ್ಕೆ ಮುಂದಾಗಿದ್ದಾಳೆ. ಹಳೆ ಮನೆಗೆ ಪೇಂಟಿಂಗ್ (Painting)  ಮಾಡಲು, ಗೋಡೆ ಮೇಲಿದ್ದ ವಸ್ತುಗಳನ್ನೆಲ್ಲ ತೆಗೆದಿದ್ದಾಳೆ. ಹಳೆ ಮನೆಯನ್ನು ರಿನೋವೆಟ್ ಮಾಡುವ ವೇಳೆ ವಾಲ್ ಪೇಪರ್ (Wall Paper) ಒಂದನ್ನು ಕೂಡ ತೆಗೆದಿದ್ದಾಳೆ. ಅಲ್ಲಿ ಬರೆಯಲಾಗಿದ್ದ ವಿಷ್ಯ ನೋಡಿ ಅಚ್ಚರಿಗೊಂಡಿದ್ದಲ್ಲದೆ ಭಾವುಕಳಾದೆ ಎಂದು ಟಿಕ್ ಟಾಕ್ ವಿಡಿಯೋದಲ್ಲಿ ಮಹಿಳೆ ಹೇಳಿದ್ದಾಳೆ. ಸಂದೇಶ ಓದಿ ಬಿಕ್ಕಿಬಿಕ್ಕಿ ಅತ್ತ ಮಹಿಳೆ ವಾಲ್ ಪೇಪರನ್ನು ಮತ್ತೆ ಅಲ್ಲಿಯೇ ಅಂಟಿಸಿದ್ದಾಳೆ. ಅಲ್ಲದೆ ಅದಕ್ಕೆ ಪೇಟಿಂಗ್ ಮಾಡುವ ಪ್ರಯತ್ನಕ್ಕೆ ಹೋಗಿಲ್ಲ. ಆ ಮೆಸೇಜ್ ಸದಾ ಅಲ್ಲೇ ಇರಲಿ ಎನ್ನುವುದು ಆಕೆಯ ಬಯಕೆ. 

ಶ್ವಾನ ಪ್ರೇಮಿಗಳಿಗೆ ಡಿಮೆನ್ಷಿಯಾ ಬರೋ ಚಾನ್ಸೇ ಕಮ್ಮಿಯಂತೆ!

ಟಿಕ್ ಟಾಕ್ ನ @farnovations ಹೆಸರಿನ ಖಾತೆಯಲ್ಲಿ   ಒಂದು ಕೈಬರಹದ ಸಂದೇಶವನ್ನು ಹಂಚಿಕೊಳ್ಳಲಾಗಿದೆ. ಫ್ರಾಂಕಿ ಐ ಲವ್ ಯು, ಪ್ಯಾಟ್ ಎಂಬ ಸಂದೇಶ ಇದಾಗಿದೆ. ವಾಲ್ ಪೇಪರ್ ಮೇಲಿದ್ದ ಈ ಸಂದೇಶವನ್ನು ಮಹಿಳೆ ಟಿಕ್ ಟಾಕ್ ನಲ್ಲಿ ಹಂಚಿಕೊಂಡಿದ್ದಾಳೆ.

45 ವರ್ಷದಿಂದ ವಾಸವಿದ್ದ ಜೋಡಿ : ವಾಸ್ತವವಾಗಿ ಫ್ರಾಂಕಿ 80 ವರ್ಷದ ಮಹಿಳೆ. ಫ್ರಾಂಕಿಯಿಂದಲೇ ಈ ಮಹಿಳೆ ಮನೆ ಖರೀದಿ ಮಾಡಿದ್ದಾಳೆ. ಫ್ರಾಂಕಿ ಪತಿ ಪ್ಯಾಟ್ ಕೆಲ ವರ್ಷಗಳ ಹಿಂದೆ ಸಾವನ್ನಪ್ಪಿದ್ದಾರೆ. ಸುಮಾರು 45 ವರ್ಷಗಳ ಕಾಲ ಫ್ರಾಂಕಿ ಮತ್ತು ಪ್ಯಾಟ್ ಇದೇ ಮನೆಯಲ್ಲಿ ವಾಸವಾಗಿದ್ದರು. ಅವರ ಮಕ್ಕಳು ಇಲ್ಲೇ ಬೆಳೆದು ದೊಡ್ಡವರಾದ್ರು. ಈ ಮನೆಯಲ್ಲಿ ಅವರಿಬ್ಬರ ನೆನಪಿದೆ. ಈಗ ಫ್ರಾಂಕಿ ಮನೆ  ಮಾರಿದ್ದಾಳೆ. ಟಿಕ್ ಟಾಕ್‌ನಲ್ಲಿ ವಿಡಿಯೋ ಹಾಕಿದ ಮಹಿಳೆ ಈ ಫೋಟೋ ನಾನು ಫ್ರಾಂಕಿಗೆ ಕಳುಹಿಸುತ್ತೇನೆ. ನಿಮ್ಮ ಪತಿ ನಿಮ್ಮನ್ನು ಎಷ್ಟು ಪ್ರೀತಿ ಮಾಡ್ತಿದ್ದರು ನೋಡಿ ಎಂದು ಹೇಳ್ತೇನೆ ಎಂದಿದ್ದಾಳೆ.

Zodiac Sign: ಹೆಂಡತಿಯನ್ನ ರಾಣಿಯಂತೆ ಓಲೈಸಿ, ಮೆರೆಸೋದು ಹೇಗೆ ಅಂತ ಈ ಗಂಡಸ್ರಿಗೆ ಚೆನ್ನಾಗಿ ಗೊತ್ತು!

ಟಿಕ್ ಟಾಕ್ ಬಳಕೆದಾರರ ಕಮೆಂಟ್: ಟಿಕ್ ಟಾಕ್ ನಲ್ಲಿ ಮಹಿಳೆ ಈ ವಿಷ್ಯ ಹಂಚಿಕೊಳ್ತಿದ್ದಂತೆ ಅದಕ್ಕೆ ಸಾಕಷ್ಟು ಕಮೆಂಟ್ಸ್ ಬಂದಿವೆ. ತಮ್ಮ ಜೀವನದಲ್ಲಿ ನಡೆದ ಘಟನೆಗಳನ್ನೂ ಅನೇಕರು ಹೇಳಿಕೊಂಡಿದ್ದಾರೆ. ಅಜ್ಜ – ಅಜ್ಜಿ ಮನೆಯಲ್ಲೂ ನಮಗೆ ಇಂಥದ್ದೇ ಅನುಭವವಾಗಿತ್ತು ಎಂದು ಒಬ್ಬರು ಬರೆದುಕೊಂಡಿದ್ದಾರೆ. ಇನ್ನೊಬ್ಬರು, ನಾವು ಮನೆಗೆ ಹೋದಾಗ ಆ ಮನೆಯಲ್ಲಿ ಹಳೆ ಮಾಲೀಕನ ಹೆಸರು ಮತ್ತು ದಿನಾಂಕ ಸಿಕ್ಕಿತ್ತು. ನಾವು ಅದನ್ನು ಅಳಿಸಿಲ್ಲ. ಬದಲಾಗಿ ನಮ್ಮ ಹೆಸರು ಮತ್ತು ದಿನಾಂಕವನ್ನೂ ಅಲ್ಲಿ ನಮೂದಿಸಿದ್ದೇವೆ. ಮುಂದೊಂದು ದಿನ ಇಲ್ಲಿಗೆ ಬರುವವರಿಗೆ ಈ ಸಂದೇಶ ಸಿಗಲಿ ಎನ್ನುವುದು ನಮ್ಮ ಆಶಯ ಎಂದು ಬರೆದಿದ್ದಾರೆ.

Follow Us:
Download App:
  • android
  • ios