Asianet Suvarna News Asianet Suvarna News

Zodiac Sign: ಹೆಂಡತಿಯನ್ನ ರಾಣಿಯಂತೆ ಓಲೈಸಿ, ಮೆರೆಸೋದು ಹೇಗೆ ಅಂತ ಈ ಗಂಡಸ್ರಿಗೆ ಚೆನ್ನಾಗಿ ಗೊತ್ತು!

ಪತ್ನಿ ಖುಷಿಯಾಗಿರುವಂತೆ ನೋಡಿಕೊಳ್ಳಲು ಎಲ್ಲ ಪುರುಷರಿಗೂ ಸಾಧ್ಯವಿಲ್ಲ. ಕೆಲವೇ ರಾಶಿಗಳ ಜನರ ಗಂಡಸರು ಇದರಲ್ಲಿ ಎತ್ತಿದ ಕೈ. ತಮ್ಮ ಹೆಂಡತಿಯರನ್ನು ಇವರು ರಾಣಿಯಂತೆ ಮೆರೆಸಿ ಅವರನ್ನು ಓಲೈಸುತ್ತಾರೆ. 
 

 Aries leo zodiac signs treat their wives as queens sum
Author
First Published Dec 6, 2023, 10:31 AM IST

ಸಂಗಾತಿಯನ್ನು ಟೇಕನ್‌ ಫಾರ್‌ ಗ್ರ್ಯಾಂಡೆಟ್‌ ರೀತಿಯಲ್ಲಿ ಕಂಡು, ಸಂಬಂಧವನ್ನು ಹಾಳು ಮಾಡಿಕೊಳ್ಳುವ ಪುರುಷರು ನಮ್ಮ ನಡುವೆ ಅಧಿಕ ಪ್ರಮಾಣದಲ್ಲಿ ಕಂಡುಬರುತ್ತಾರೆ. ಇವರು ಪತ್ನಿ ಅಥವಾ ಪ್ರೀತಿಯ ಸಂಗಾತಿಗಾಗಿ ಹೆಚ್ಚಿನ ಶ್ರಮವನ್ನೇನೂ ವಹಿಸುವುದಿಲ್ಲ. ಅವರನ್ನು ರಾಣಿಯರಂತೆ ಮೆರೆಸುವುದಿಲ್ಲ. ರಾಣಿಯಂತೆ ಮೆರೆಸದಿದ್ದರೂ ಸರಿ, ಆದರೆ, ಪತ್ನಿಯನ್ನು ಸಾಮಾನ್ಯ ಮನುಷ್ಯರಂತೆ ಪರಿಗಣಿಸದ ಮಂದಿಯೂ ಇದ್ದಾರೆ. ಅವರಿಂದಲೇ ಸಮಾಜದಲ್ಲಿ ಮಹಿಳೆ, ಪುರುಷ ಎನ್ನುವ ತಾರತಮ್ಯ ಸೃಷ್ಟಿಯಾಗಿದೆ. ಆದರೆ, ಎಲ್ಲರೂ ಹೀಗಿರುವುದಿಲ್ಲ. ಪತ್ನಿಯನ್ನು ಕಾಲಕಸವಾಗಿ ಕಾಣುವ ಜನರಿರುವಂತೆಯೇ, ಅವರನ್ನು ತಲೆಯ ಮೇಲಿಟ್ಟು ಮೆರೆಸುವಂತಹ ಪತಿಯಂದಿರೂ ಇರುತ್ತಾರೆ. ಕೆಲವು ಪುರುಷರು ಪತ್ನಿಯನ್ನು ಸಿಕ್ಕಾಪಟ್ಟೆ ಹೊಗಳುತ್ತಾರೆ, ಅವರಿಗೆ ವಿವಿಧ ಸೌಲಭ್ಯ ಕಲ್ಪಿಸಲು ಪ್ರೀತಿಯಿಂದ ಶ್ರಮವಹಿಸುತ್ತಾರೆ. ಪತ್ನಿಯನ್ನು ಸುಖವಾಗಿ ಇರಿಸುವುದು ಅವರ ಬಯಕೆ ಆಗಿರುತ್ತದೆ. ತಮ್ಮ ಪ್ರೀತಿಯ ಹುಡುಗಿ ಅಥವಾ ಸಂಗಾತಿಯನ್ನು ರಾಜೋಚಿತವಾಗಿ ನಡೆಸಿಕೊಳ್ಳುತ್ತಾರೆ ಎಂದರೆ ತಪ್ಪಿಲ್ಲ. ಮಹಾರಾಣಿಯಂತೆ ಪತ್ನಿಯನ್ನು ಪರಿಗಣಿಸುತ್ತಾರೆ. ಇಂಥವರು ತಮ್ಮ ಪತಿಯಾಗಲಿ ಎನ್ನುವುದು ಬಹಳಷ್ಟು ಮಹಿಳೆಯರ ಆಸೆಯಾಗಿರಬಹುದು. ಇಂಥ ಪುರುಷರು ನಾಲ್ಕೇ ರಾಶಿಗಳಲ್ಲಿ ಕಂಡುಬರುತ್ತಾರೆ.

•    ಮೇಷ (Aries)
ರಾಶಿಚಕ್ರದ (Zodiac Sign) ಪೈಕಿ ಮೊದಲ ಸಾಲಿನಲ್ಲಿರುವ ಮೇಷ ರಾಶಿಯ ಜನ ಪ್ರೀತಿ-ಪ್ರೇಮದ (Love) ವಿಚಾರದಲ್ಲಿ ಒಂದು ಕೈ ಮುಂದಿರುತ್ತಾರೆ. ಸಾಹಸಿ (Adventurous) ಧೋರಣೆ ಹಾಗೂ ಸಿಕ್ಕಾಪಟ್ಟೆ ಮೋಹಿಗಳಾಗಿರುವ ಇವರು, ತಮ್ಮ ರೋಮ್ಯಾಂಟಿಕ್‌ (Romantic) ಜೀವನವನ್ನು ಶಾಸ್ತ್ರೀಯ, ರಮ್ಯವಾದ ಕತೆಯಂತೆ ಪರಿಗಣಿಸುತ್ತಾರೆ. ಪತ್ನಿಯನ್ನು (Wife) ಖುಷಿಯಾಗಿಡಲು ಹಾಗೂ ಆಕೆ ಸದಾಕಾಲ ಹಸನ್ಮುಖಿಯಾಗಿರಲೆಂದು ಯಾವುದಾದರೂ ರಿಸ್ಕಿ (Risky) ಕಾರ್ಯಕ್ಕೂ ಕೈ ಹಾಕಲು ಅಂಜುವುದಿಲ್ಲ. ಈ ನಿಟ್ಟಿನಲ್ಲಿ ಹೆಚ್ಚುವರಿ ಕೆಲಸ ನಿಭಾಯಿಸಲು ಹಿಂಜರಿಯುವುದಿಲ್ಲ. ಅತ್ಯುತ್ಸಾಹ ಮತ್ತು ತತ್ ಕ್ಷಣ ಯಾವುದೇ ನಿರ್ಧಾರ ಕೈಗೊಳ್ಳುವಲ್ಲಿ ಸದಾ ಮುಂದಿರುವ ಮೇಷ ರಾಶಿಯ ಪುರುಷರು (Male) ನಿರಂತರವಾಗಿ ರೋಚಕ ಕ್ಷಣಗಳನ್ನು ಸೃಷ್ಟಿಸಬಲ್ಲರು. ಗಂಧರ್ವ ಅಥವಾ ಕಿನ್ನರ ಲೋಕದ ರಮ್ಯವಾದ ಪ್ರೀತಿಯಂತೆ ತಮ್ಮ ಪ್ರೀತಿಯನ್ನು ಕಾಣುತ್ತಾರೆ. ಪ್ರತಿದಿನವನ್ನೂ ಹೊಸ ಅಧ್ಯಾಯವನ್ನಾಗಿ ಸೃಷ್ಟಿಸುತ್ತಾರೆ.

ಬುಧನು ಧನುವಿನಲ್ಲಿ,ಈ ರಾಶಿಗೆ ಹೆಚ್ಚಾಗಲಿದೆ ಹಣಕಾಸಿನ ಸಮಸ್ಯೆ.. ಎಚ್ಚರ...!

•    ಸಿಂಹ (Leo)
ಸಿಂಹ ರಾಶಿಯ ಪುರುಷರು ಸೂರ್ಯನ (Sun) ಅಧಿಪತ್ಯ ಹೊಂದಿದ್ದು, ನಿಸರ್ಗ ಸಹಜವಾದ ನಾಯಕರಾಗಿದ್ದು, ಬದ್ಧತೆಗೆ (Commitment) ಹೆಸರಾಗಿರುತ್ತಾರೆ. ಹಾಗೆಯೇ ನಿರಂತರವಾಗಿ ಮೆಚ್ಚುಗೆ ಬಯಸುತ್ತಾರೆ. ಸಂಬಂಧದ ವಿಚಾರದಲ್ಲಿ ಇವರದ್ದು ಅತ್ಸುತ್ಸಾಹದ ನಡವಳಿಕೆ. ಪತ್ನಿ ತನ್ನನ್ನೇ ನಂಬಿಕೊಂಡು ಬಂದಿದ್ದಾಳೆ, ಅವಳನ್ನು ಚೆನ್ನಾಗಿ ನೋಡಿಕೊಳ್ಳುವುದು ತನ್ನ ಕರ್ತವ್ಯ ಎಂಬುದಾಗಿ ಭಾವಿಸುತ್ತಾನೆ ಸಿಂಹ ರಾಶಿಗೆ ಸೇರಿದ ಗಂಡಸು. ಹೀಗಾಗಿ, ಹೆಂಡತಿಯನ್ನು ರಾಣಿಯಂತೆ ಪರಿಗಣಿಸಿ ಅದಕ್ಕೆ ತಕ್ಕಂತೆ ರಾಜೋಪಚಾರ ಮಾಡುತ್ತಾನೆ. ಪ್ರೀತಿಯನ್ನು ಅದ್ದೂರಿಯಾಗಿ ವ್ಯಕ್ತಪಡಿಸುವುದು ಇವರ ಪದ್ಧತಿ. ಡ್ರಾಮಾ (Drama), ಗ್ಲಾಮರ್‌ ಮಿಕ್ಸ್‌ ಮಾಡಿ ಸಂಬಂಧವನ್ನು ವೈಭವೀಕರಿಸುತ್ತಾರೆ.

•    ತುಲಾ (Libra)
ತಾವು ಇರುವ ಪರಿಸರವನ್ನು ಚೆನ್ನಾಗಿ ಇಟ್ಟುಕೊಳ್ಳುವುದು ತುಲಾ ರಾಶಿಯ ಜನರ ಸ್ವಭಾವ. ಇವರಲ್ಲಿ ಸೌಂದರ್ಯ ಮೀಮಾಂಸೆ ಎನ್ನುವುದು ಹುಟ್ಟಾಗುಣ. ಪತ್ನಿಯನ್ನು ಸಿಕ್ಕಾಪಟ್ಟೆ ಹೊಗಳುತ್ತಾರೆ, ಅವರ ಬಗ್ಗೆ ಮೆಚ್ಚುಗೆ (Adore) ವ್ಯಕ್ತಪಡಿಸುತ್ತಾರೆ. ಪತ್ನಿಯನ್ನು ಯಾವತ್ತೂ ಖುಷಿಯಾಗಿಡುವುದು ತಮ್ಮ ಡ್ಯೂಟಿ ಎಂದು ಭಾವಿಸುತ್ತಾರೆ. ಹಾರ್ದಿಕವಾದ, ಸಾಮರಸ್ಯದ (Harmony) ಸಹಬಾಳ್ವೆಯನ್ನು ಸಮತೋಲನದಿಂದ ನಡೆಸುವ ಇವರ ಚಾಕಚಕ್ಯತೆ ಮೆಚ್ಚುವಂಥದ್ದು. ಸಂಬಂಧವನ್ನು ಕರಾವಕ್ಕಾಗಿ ಕಲಾಕೃತಿಯಂತೆ ರೂಪಿಸಿಕೊಂಡು ಪ್ರತಿ ಕ್ಷಣವನ್ನೂ ಎಂಜಾಯ್‌ (Enjoy) ಮಾಡುತ್ತಾರೆ.

ಲಕ್ಷ್ಮೀ ನಾರಾಯಣ ಯೋಗದಿಂದ ಈ 5 ರಾಶಿಗೆ ಆದಾಯ ಹೆಚ್ಚಳ , ಹೂಡಿಕೆಯಿಂದ ಲಾಭ

•    ಮೀನ (Pisces)
ಮೀನ ರಾಶಿ ನೆಪ್ಚೂನ್‌ ಗ್ರಹಕ್ಕೆ ಒಳಪಟ್ಟಿದೆ. ಇದು ರಾಶಿಚಕ್ರದ ಪೈಕಿ ಅತ್ಯಂತ ಕನಸುಗಾರ (Dream) ರಾಶಿಯಾಗಿದ್ದು, ಪ್ರೀತಿಯ ವಿಚಾರದಲ್ಲಿ ಇವರು ಭಾವನಾತ್ಮಕವಾಗಿ (Emotional) ಆಳವಾದ ಬಾಂಧವ್ಯ ಹೊಂದಿರುತ್ತಾರೆ. ರಮ್ಯವಾದ (Romantic) ಪರಿಕಲ್ಪನೆಯ ಕಾವ್ಯವೊಂದನ್ನು ಸೃಷ್ಟಿಸಿದಂತೆ ಪ್ರೀತಿಯ ಕುರಿತಾದ ಭಾವನೆಯಲ್ಲಿ ಮುಳುಗುತ್ತಾರೆ. ಇವರು ಆಳವಾದ ಸಹಾನುಭೂತಿ ಹೊಂದಿದ್ದು, ಸಂಗಾತಿಯ ಬೇಕುಬೇಡಗಳನ್ನು ಸುಲಭವಾಗಿ ಅರಿತುಕೊಳ್ಳುತ್ತಾರೆ. ಪತ್ನಿಯನ್ನು ಸಂತಸದಿಂದ ಇರಿಸಲು ಮಾಯಾಜಾಲ, ಇಂದ್ರಜಾಲವನ್ನೇ ಸೃಷ್ಟಿಸಿ ಅವರನ್ನು ರಾಣಿಯಂತೆ (Queen) ಮೆರೆಸುತ್ತಾರೆ. 
 

Follow Us:
Download App:
  • android
  • ios