ವಯಸ್ಸಿಗೆ ಬಂದ ಹುಡುಗಿಯರು ಕೋಚಿಂಗ್ ಸೆಂಟರ್‌ನಲ್ಲಿ ಓದುತ್ತಿದ್ದಾಗ ಪರಸ್ಪರ ಪ್ರೀತಿಸಿದ್ದಾರೆ. ಆದರೆ, ಇಬ್ಬರೂ ಮದುವೆ ಮಾಡಿಕೊಳ್ಳಬೇಕು ಎಂದು ಒಬ್ಬ ಹುಡುಗಿ ಲಿಂಗ ಬದಲಿಸಿ ಹುಡುಗನಾಗಿ ಬದಲಾಗಿ ಬಂದಿದ್ದಾನೆ. ಆದರೆ, ಈಗ ಇವರಿಗೆ ಹೊಸ ಸಮಸ್ಯೆ ಎದುರಾಗಿದೆ..
ಪ್ರೀತಿಯನ್ನು ಯಾರೂ ಕಟ್ಟಿ ಹಾಕಲು ಸಾಧ್ಯವಿಲ್ಲ, ಸಮಾಜದ ಕಟ್ಟಳೆಗಳಿಗೆ ಅದು ಬಗ್ಗಲ್ಲ ಎನ್ನುವ ಮಾತನ್ನು ನಾವು ಕೇಳಿರುತ್ತೇವೆ, ಕೆಲವು ಉದಾಹರಣೆಗಳನ್ನು ನೋಡಿರುತ್ತೇವೆ. ಅದಕ್ಕೆ ಮತ್ತೊಂದು ಉದಾಹರಣೆ ಎಂಬಂತೆ ಉತ್ತರ ಪ್ರದೇಶದ ಮಥುರಾದಲ್ಲಿ ಇಂಥದ್ದೊಂದು ವಿಶಿಷ್ಟ ಪ್ರೇಮಕಥೆಯೊಂದು ನಡೆದಿದೆ. ಸವಿತಾ ಮತ್ತು ಪೂಜಾ ಎಂಬ ಇಬ್ಬರು ಸಮಾಜದ ಕಟ್ಟುಪಾಡು, ಜಾತಿ-ಲಿಂಗವನ್ನು ಮೀರಿ ಗಂಡ-ಹೆಂಡತಿಯಾಗಿ ಹೊಸ ಬದುಕು ಕಟ್ಟಿಕೊಂಡಿದ್ದಾರೆ. ಇಲ್ಲಿ ಪ್ರೀತಿಗಾಗಿ ಸವಿತಾ ಎನ್ನುವ ಹುಡುಗಿ ಲಿಂಗ ಬದಲಿಸಿಕೊಂಡು ಲಲಿತ್ ಎಂಬ ಹುಡುಗನಾಗಿ ಬದಲಾಗಿದ್ದಾನೆ. ಆದರೆ, ಇದೀಗ ಇಬ್ಬರಿಗೂ ಹೊಸ ಸಮಸ್ಯೆಯೊಂದು ಶುರುವಾಗಿದೆ..
ರಾಜಸ್ಥಾನದ ಭರತ್‌ಪುರದ ಸವಿತಾ (31) ಜೈಪುರದಲ್ಲಿ ಎಸ್‌ಎಸ್‌ಸಿ ಕೋಚಿಂಗ್‌ಗೆ ಹೋದಾಗ ಪೂಜಾಳ ಪರಿಚಯವಾಗಿದೆ. ಪೂಜಾ ಜೈಪುರದ ಸಾಂಗನೇರ್‌ನಲ್ಲಿ ತನ್ನ ತಂದೆ ರಮೇಶ್ ಜೊತೆ ವಾಸವಾಗಿದ್ದಳು. ಇಬ್ಬರ ನಡುವೆ ಆಳವಾದ ಸ್ನೇಹ ಬೆಳೆದು ಪ್ರೀತಿಯಾಗಿ ಬದಲಾಗಿದೆ. ಆದರೆ ಸಮಾಜ ಮತ್ತು ಕುಟುಂಬದ ಭಯದಿಂದ ಒಟ್ಟಿಗೆ ಇರೋಕೆ ಆಗಿರಲಿಲ್ಲ. ಆದ್ದರಿಂದ ನಾವಿಬ್ಬರೂ ಏನಾದರೂ ಮಾಡಿ ಒಟ್ಟಿಗೆ ಇರುವುದಕ್ಕೆ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ನಿರ್ಧರಿಸಿದ್ದಾರೆ.
ಸವಿತಾಳಿಂದ ಲಲಿತ್ ಆಗಿ ಲಿಂಗ ಪರಿವರ್ತನೆ: ಇಬ್ಬರೂ ತಮ್ಮ ಸ್ನೇಹ ಹಾಗೂ ಪ್ರೀತಿಯನ್ನು ಗೆಲ್ಲುವುದಕ್ಕಾಗಿ ಸವಿತಾ ಒಂದು ದಿಟ್ಟ ಹೆಜ್ಜೆ ಇಟ್ಟಳು. 31 ಮೇ 2022 ರಂದು ಇಂದೋರ್‌ನಲ್ಲಿ ಲಿಂಗ ಬದಲಾಯಿಸಿಕೊಂಡು 'ಲಲಿತ್' ಆಗಿ ಬದಲಾಗಿ ಬಂದಿದ್ದಾಳೆ. ನಂತರ ನವೆಂಬರ್ 2024ರಲ್ಲಿ ಜೈಪುರದ ಆರ್ಯ ಸಮಾಜ ವೈದಿಕ ಸಂಸ್ಥೆಯಲ್ಲಿ ಲಲಿತ್ ಮತ್ತು ಪೂಜಾ ಇಬ್ಬರೂ ಮದುವೆ ಮಾಡಿಕೊಂಡಿದ್ದಾರೆ. ಆದರೆ, ಈ ವೇಳೆ ಸವಿತಾ ಎಂಬ ಹುಡುಗಿ ಲಲಿತ್ ಎಂಬ ಹುಡುಗನಾಗಿ ಬದಲಾಗಿರುವ ವಿಷಯ ಇಬ್ಬರಿಗೆ ಮಾತ್ರ ಗೊತ್ತಿತ್ತು. ಇಬ್ಬರೂ ತಾವು ಮೇಜರ್ ಆಗಿದ್ದು ಮದುವೆ ಮಾಡಿಕೊಳ್ಳುವುದಾಗಿ ಸರಳ ವಿವಾಹ ಮಾಡಿಕೊಂಡಿದ್ದಾರೆ. ಆದರೆ, ಈ ವಿಚಾರವನ್ನು ಮನೆಯವರಿಂದ ಮುಚ್ಚಿಟ್ಟಿದ್ದಾರೆ.
ಇದನ್ನೂ ಓದಿ: ಪ್ರೀತಿಸಿ ಮದುವೆಯಾದ ಗಂಡನನ್ನು ಟಾಯ್ಲೆಟ್‌ನಲ್ಲಿ ಕೂಡಿಹಾಕಿ ಮಾಡಬಾರದ ಕೆಲಸ ಮಾಡಿದ ಹೆಂಡತಿ!
ಪೂಜಾ ತನ್ನ ಕುಟುಂಬಕ್ಕೆ ಸವಿತಾಳೊಂದಿಗೆ ಪ್ರೀತಿ ಮಾಡುತ್ತಿದ್ದ ಮತ್ತು ಮದುವೆ ಮಾಡಿಕೊಂಡ ಸಂಬಂಧದ ಬಗ್ಗೆ ಏನೂ ಹೇಳಿರಲಿಲ್ಲ. ಈ ನಡುವೆ ಪೂಜಾಳ ಕುಟುಂಬ ಅವಳಿಗೆ ಒಬ್ಬ ಹುಡುಗನ ಜೊತೆ ಮದುವೆ ನಿಶ್ಚಯ ಮಾಡಿತ್ತು. ಆದರೆ, ಪೂಜಾ ಮದುವೆಯಿಂದ ತಪ್ಪಿಸಿಕೊಳ್ಳೋಕೆ ಬಿ.ಎಡ್. ಮಾಡುತ್ತೇನೆ ಎಂದು ಭರತ್‌ಪುರಕ್ಕೆ ಹೋಗುವುದಾಗಿ ಹೇಳಿದ್ದಾಳೆ. ಕಳೆದ ಜ.10ರಂದು ಭರತ್‌ಪುರಕ್ಕೆ ಹೋದ ಪೂಜಾ ತನ್ನ ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾಳೆ.
ಲಲಿತ್, ಪೂಜಾ ಗಂಡ-ಹೆಂಡತಿಯಾಗಿ ವಾಸ: ಬಿ.ಇಡಿ ಮಾಡುವುದಾಗಿ ಮನೆಯಿಂದ ಹೋದ ಮಗಳು ನಾಪತ್ತೆ ಆಗಿದ್ದಕ್ಕೆ ಮನೆಯವರು ಗಾಬರಿಯಾಗಿ ಎಲ್ಲೆಡೆ ಹುಡುಕಿದ್ದಾರೆ. ಎಲ್ಲೂ ಸಿಗದಿದ್ದಾಗ ಜ.14ರಂದು ಪೂಜಾಳ ಮನೆಯವರು ಜೈಪುರದ ಸಾಂಗನೇರ್ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದಾರೆ. ಪೊಲೀಸರು ಪೂಜಾಳ ಲೊಕೇಶನ್ ಟ್ರ್ಯಾಕ್ ಮಾಡಿ ಮಥುರಾದ ಮಹಾವನದಲ್ಲಿ ಇರುವುದನ್ನು ಪತ್ತೆ ಮಾಡಿ, ಪೂಜಾ ಮತ್ತು ಲಲಿತ್‌ನನ್ನು ಪೊಲೀಸ್ ಠಾಣೆಗೆ ಕರೆತಂದಿದ್ದಾರೆ. ಜೊತೆಗೆ, ಪೊಲೀಸ್ ವಿಚಾರಣೆ ವೇಳೆ ಲಲಿತ್ ಫಾರ್ಮಸಿ ಕಾಲೇಜಿನಲ್ಲಿ ಕೆಲಸ ಮಾಡುವುದಾಗಿ ಪೂಜಾ ನನ್ನ ಹೆಂಡತಿ ಎಂದು ಹೇಳಿದ್ದಾನೆ.
ಇದನ್ನೂ ಓದಿ: ವೃದ್ಧಾಶ್ರಮದಲ್ಲಿ ಚಿಗುರಿದ ಪ್ರೀತಿ, ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅಜ್ಜ – ಅಜ್ಜಿ
ಗಂಡ-ಹೆಂಡತಿ ಇಬ್ಬರಿಗೂ ಹೊಸ ಚಿಂತೆ: ಪೂಜಾ ಪೊಲೀಸರ ಮುಂದೆ ಲಲಿತ್ ಜೊತೆ ನಾನು ಜೀವನ ಮಾಡುವುದಾಗಿ ಹೇಳಿಕೊಂಡಿದ್ದಾಳೆ. ಇಬ್ಬರೂ ಪ್ರೌಢರಾಗಿದ್ದರಿಂದ ಪೊಲೀಸರು ಒಟ್ಟಿಗೆ ಇರಲು ಅನುಮತಿ ನೀಡಿದ್ದಾರೆ. ಆದರೆ ಈಗ ಗಂಡ-ಹೆಂಡತಿ ಇಬ್ಬರೂ ಚಿಂತೆಯಲ್ಲಿದ್ದಾರೆ. ಗುಟ್ಟಾಗಿ ಮಾಡಿದ್ದ ಕೆಲಸ ಈಗ ಬಯಲಾಗಿದೆ. ಸವಿತಾಳಿಂದ ಲಲಿತ್ ಆದ ವ್ಯಕ್ತಿ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗಿದ್ದಾನೆ. ಈಗ ಈ ಜೋಡಿ ಮಥುರಾ ಬಿಟ್ಟು ಹೋಗೋ ಯೋಚನೆಯಲ್ಲಿದ್ದಾರೆ.
