ಕಳೆದ ಒಂದು ವರ್ಷದ ಹಿಂದಷ್ಟೇ ಪ್ರೀತಿಸಿ ಮದುವೆ ಮಾಡಿಕೊಂಡಿದ್ದ ಮಹಿಳೆ, ಇದೀಗ ಗಂಡನನ್ನು ಶೌಚಾಲಯದಲ್ಲಿ ಕೂಡಿ ಹಾಕಿ ಮಾಡಬಾರದ ಕೆಲಸ ಮಾಡಿದ್ದಾಳೆ.

ಜೀವನದಲ್ಲಿ ಪ್ರೀತಿಸಿದ ವ್ಯಕ್ತಿಯನ್ನು ಮದುವೆ ಮಾಡಿಕೊಳ್ಳುವುದಕ್ಕೆ ಅದೃಷ್ಟ ಮಾಡಿರಬೇಕು ಎಂದು ಕೆಲವರು ಹೇಳುತ್ತಾರೆ. ಆದರೆ, ಪ್ರೀತಿಸಿ ಮದುವೆಯಾದವರು ಹೊಂದಾಣಿಕೆಯಿಂದ ಜೀವನ ಮಾಡದಿದ್ದರೆ ದುರಂತ ಅಂತ್ಯಗಳಿಗೆ ಅವರ ಜೀವನ ಸಾಕ್ಷಿಯಾಗುತ್ತವೆ ಎಂಬ ಘಟನೆಗೆ ಹಲವು ಸಾಕ್ಷಿಗಳಿವೆ. ಅದೇ ರೀತಿ ಇಲ್ಲೊಂದು ಜೋಡಿ ಕಳೆದ ಒಂದು ವರ್ಷದ ಹಿಂದಷ್ಟೇ ಪ್ರೀತಿಸಿ ಮದುವೆಯಾಗಿ ಸಂಸಾರ ಕಟ್ಟಿಕೊಂಡಿದ್ದರು. ಆದರೆ, ಸಣ್ಣ ಗಂಡ ಸಣ್ಣದಾಗಿ ಜಗಳ ಮಾಡಿದ್ದಕ್ಕೆ ಗಂಡನನ್ನು ಶೌಚಾಲಯದಲ್ಲಿ ಕೂಡಿ ಹಾಕಿ ಹೆಂಡತಿ ದುರಂತ ಕೃತ್ಯವನ್ನು ಎಸಗಿದ್ದಾಳೆ.

ಈ ಘಟನೆ ಉತ್ತರ ಪ್ರದೇಶದ ಪಿಲಿಭಿತ್‌ನಲ್ಲಿ ನಡೆದಿದೆ. ಇಲ್ಲಿ ಪ್ರೇಮ ವಿವಾಹವೊಂದು ಒಂದು ವರ್ಷದಲ್ಲಿ ದುರಂತ ಅಂತ್ಯ ಕಂಡಿದೆ. ಗಂಡ-ಹೆಂಡತಿಯ ನಡುವಿನ ಜಗಳವು ಪತ್ನಿ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ತಿರುವು ಪಡೆದುಕೊಂಡಿದೆ. ಈ ಘಟನೆಯಿಂದ ಇಡೀ ಪ್ರದೇಶದಲ್ಲಿ ಆತಂಕ ಮನೆ ಮಾಡಿದೆ. 

ಸದರ್ ಕೋತ್ವಾಲಿ ಪ್ರದೇಶದ ಸಾಯಿಧಾಮ್ ಕಾಲೋನಿಯಲ್ಲಿ ವಾಸಿಸುತ್ತಿದ್ದ ಪವನ್ ಕುಮಾರ್ ಮತ್ತು ಅವರ ಪತ್ನಿ ಮಧು ನಡುವೆ ಶುಕ್ರವಾರ ರಾತ್ರಿ ಏನೋ ವಿಷಯಕ್ಕೆ ಜಗಳ ನಡೆದಿದೆ. ಪವನ್ ಶೌಚಾಲಯಕ್ಕೆ ಹೋದಾಗ, ಮಧು ಹೊರಗಿನಿಂದ ಬಾಗಿಲು ಹಾಕಿದ್ದಾಳೆ. ನಂತರ ಅವರು ಮನೆಯಲ್ಲಿ ಬಾಗಿಲ ಮೇಲೆ ಇದ್ದ ಕಬ್ಬಿಣದ ಸರಳಿಗೆ ದುಪಟ್ಟಾವನ್ನು ಕಟ್ಟಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರಿಂದಾಗಿ ಆತನ ಹೆಂಡತಿ ಮಧು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಇದನ್ನೂ ಓದಿ: ವೃದ್ಧಾಶ್ರಮದಲ್ಲಿ ಚಿಗುರಿದ ಪ್ರೀತಿ, ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅಜ್ಜ – ಅಜ್ಜಿ

ದೂರಿನ ಆಧಾರದ ಮೇಲೆ ಕ್ರಮ: ಪವನ್ ಮತ್ತು ಮಧು ಒಂದು ವರ್ಷದ ಹಿಂದೆ ಪ್ರೇಮ ವಿವಾಹವಾಗಿದ್ದರು. ನಂತರ ಅವರು ಸಾಯಿಧಾಮ್ ಕಾಲೋನಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಶುಕ್ರವಾರ ಇಬ್ಬರ ನಡುವೆ ಏನೋ ವಿಷಯಕ್ಕೆ ಜಗಳ ನಡೆದು ನಂತರ ಪತ್ನಿ ನೇಣು ಹಾಕಿಕೊಂಡಿದ್ದಾರೆ. ಕೋತ್ವಾಲಿ ಠಾಣಾಧಿಕಾರಿ ರಾಜೀವ್ ಕುಮಾರ್ ಸಿಂಗ್ ಅವರು ಪ್ರಾಥಮಿಕ ತನಿಖೆಯಲ್ಲಿ ಗಂಡ-ಹೆಂಡತಿಯ ನಡುವೆ ಜಗಳ ನಡೆದಿರುವುದು ಬೆಳಕಿಗೆ ಬಂದಿದೆ ಎಂದು ತಿಳಿಸಿದ್ದಾರೆ. ನಂತರ ವಿವಾಹಿತ ಮಹಿಳೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈವರೆಗೆ ತವರು ಮನೆಯವರಿಂದ ಯಾವುದೇ ಲಿಖಿತ ದೂರು ಪೊಲೀಸರಿಗೆ ಬಂದಿಲ್ಲ. ದೂರು ಬಂದ ನಂತರ ಪ್ರಕರಣದ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಠಾಣಾಧಿಕಾರಿ ವಿನೋದ್ ಕುಮಾರ್ ಮಿಶ್ರಾ ಅವರ ಪ್ರಕಾರ, ಸಂಜೆ ತಡವಾಗಿ ಸ್ಥಳಕ್ಕೆ ಆಗಮಿಸಿ, ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಯಾವುದೇ ದೂರು ಬಂದರೂ ಅದರ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.